ಮಂದಾರ ನ್ಯೂಸ್, ಹರಿಹರ:ಶಾಸಕಾಂಗ ಮತ್ತು ಕಾರ್ಯಾಂಗ ನಡುವೆ ಪ್ರೋಟೋಕಾಲ್ ಉಲ್ಲಂಘನೆ ವಿಚಾರದಲ್ಲಿ ಶಾಸಕರು ಗರಂ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದೂಡ ಶಾಖಾ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡುವ ಸಂದರ್ಭದಲ್ಲಿ ಶಾಸಕಾರಿಗೆ ಗೌರವ ನೀಡದಿದ್ದರೆ ಮುಂದಿನ ದಿನದಲ್ಲಿ ನೌಕರರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಹಕ್ಕುಚ್ಯುತಿ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಚರ್ಚೆ ನಡೆಯುತ್ತಿದೆ. ಹಾಗಾದರೆ ಹಕ್ಕುಚ್ಯುತಿ ಎಂದರೇನು? ಎಂಬ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ. ಜನರ ಸೇವೆಗಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ವಿಶೇಷ ಸವಲತ್ತುಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಹಕ್ಕುಚ್ಯುತಿ ನಿರ್ಣಯವೂ ಒಂದಾಗಿದೆ.
ತಮ್ಮ ಹಕ್ಕಿಗೆ ಚ್ಯುತಿ ತಂದಿದ್ದಾರೆ ಎಂದು ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಯಾರ ವಿರುದ್ಧ ಬೇಕಾದರೂ ಕ್ರಮ ಕೈಗೊಳ್ಳಬೇಕಾದ ಒಂದು ವಿಶೇಷ ಹಕ್ಕನ್ನು ಹಕ್ಕುಚ್ಯುತಿ ಎಂದು ಕರೆಯಬಹುದು.
ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಿ ಎಂದು ಈ ಹಕ್ಕು ನೀಡಲಾಗಿದೆ. ಸಂಸದರು ಮತ್ತು ಶಾಸಕರು ಸಂವಿಧಾನ ನೀಡಿರು ಈ ಹಕ್ಕನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿಯೂ ಹೊಂದಿರುತ್ತಾರೆ...
ಹಕ್ಕುಚ್ಯುತಿ ಮಂಡನೆ
ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ
ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಲೋಕಸಭಾ ಸದಸ್ಯರಿಗೆ, ರಾಜ್ಯಸಭೆಯ ರೂಲ್ ಬುಕ್ 16ರ 187ನೇ ನಿಯಮದ ಪ್ರಕಾರ ರಾಜ್ಯಸಭೆ ಸದಸ್ಯರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಲಾಗಿದೆ.
ಸಂಸದರು, ಶಾಸಕರ ಹಕ್ಕುಗಳನ್ನು ಮತ್ತು ಅವರಿಗೆ ಸಂವಿಧಾನ ನೀಡಿರುವ ರಕ್ಷಣಾ ವ್ಯವಸ್ಥೆಯನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಅಂತಹದ್ದನ್ನು ಹಕ್ಕುಚ್ಯುತಿ ಎಂದು ಹೇಳಲಾಗುತ್ತದೆ. ಇಂತಹ ಪ್ರಕರಣದಲ್ಲಿ ಸಂಸತ್ತು ಮತ್ತು ಶಾಸನ ಸಭೆಯ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲೂ ಸಹ ಅವಕಾಶವಿದೆ.
ಸಭಾ ನಾಯಕರು ಹಕ್ಕುಚ್ಯುತಿ ಮಂಡನೆಯ ಬಗ್ಗೆ ಮೊದಲ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇದನ್ನು ಮಂಡಿಸಬಹುದೇ ಅಥವ ಹೆಚ್ಚಿನ ತನಿಖೆಗಾಗಿ ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಬೇಕೆ? ಎಂದು ಸಭಾ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.
ಸಮಿತಿ ಮುಂದೆ ಹೋಗುವುದು ಕಡಿಮೆ
ವಜಾಗೊಳ್ಳುವ ಹಕ್ಕುಚ್ಯುತಿಗಳೇ ಹೆಚ್ಚು
ಸದನದಲ್ಲಿ ಮಂಡನೆಯಾಗುವ ಹಲವು ಹಕ್ಕುಚ್ಯುತಿಗಳು ಸಭಾ ನಾಯಕರ ಸಮ್ಮುಖದಲ್ಲಿಯೇ ವಜಾಗೊಳ್ಳುತ್ತವೆ. ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸುವ ಪ್ರಕರಣಗಳು ಅಪರೂಪ.
ಸಭಾ ನಾಯಕರು ಸದನದಲ್ಲಿರುವ ಪಕ್ಷಗಳ ಬಲಾಬಲ ನೋಡಿಕೊಂಡು 15 ಸದಸ್ಯರ ಹಕ್ಕು ಬಾಧ್ಯತಾ ಸಮಿತಿಯನ್ನು ರಚನೆ ಮಾಡುತ್ತಾರೆ. ಸಮಿತಿ ವಿಚಾರಣೆ ನಡೆಸಿ ವರದಿ ನೀಡುತ್ತದೆ. ಈ ವರದಿಯನ್ನು ಸದನದಲ್ಲಿ ಮಂಡಿಸಲಾಗುತ್ತದೆ. ಚರ್ಚೆ ನಡೆಸ ಬಳಿಕ ಸಭಾ ನಾಯಕರು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.
ಶಿಕ್ಷೆ ನೀಡುವ ಅಧಿಕಾರವಿದೆ
ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸದನಕ್ಕೆ ಯಾವುದೇ ಸದಸ್ಯರು ತಪ್ಪು ಮಾಹಿತಿ ನೀಡಿದರೆ, ಗೌರವ ಮತ್ತು ಅಧಿಕಾರದ ಬಗ್ಗೆ ತಿರಸ್ಕಾರ ತೋರಿಸಿದರೆ, ನಿಂದನೆಗಳನ್ನು ಮಾಡಿದರೆ ಹಕ್ಕುಚ್ಯುತಿ ಮಂಡನೆ ಮಾಡಬಹುದಾಗಿದೆ.
ಹಕ್ಕುಚ್ಯುತಿ ನಿರ್ಣಯವನ್ನು ಯಾವುದೇ ವ್ಯಕ್ತಿ, ಸದನದ ಇತರೆ ಸದಸ್ಯರು, ಹೊರಗಿನ ವ್ಯಕ್ತಿಗಳ ವಿರುದ್ಧವೂ ಮಂಡಿಸಬಹುದಾಗಿದೆ. ವರದಿಯಲ್ಲಿ ತಪ್ಪು ಮಾಡಿರುವುದು ಸಾಬೀತಾದರೆ ಜೈಲು ಶಿಕ್ಷೆ ವಿಧಿಸಲು ಸಹ ಅವಕಾಶವನ್ನು ನೀಡಲಾಗಿದೆ.
ಸದನದ ಒಳಗಿನ ಮಾತುಗಳು
ಸದನದ ಒಳಗಿನ ಮಾತುಗಳು
ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಯಾವುದೇ ಸದಸ್ಯರು ತಪ್ಪು ಮಾಹಿತಿ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ. ಆಗ ಬೇರೆ ಪಕ್ಷದವರು ಹಕ್ಕುಚ್ಯುತಿ ಮಂಡನೆ ಮಾಡಬಹುದಾಗಿದೆ.
ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ ಅಥವ ಅವರನ್ನು ನಿಂದಿಸಿದ ಹೊರಗಿನ ವ್ಯಕ್ತಿಯನ್ನು ಸದಸಕ್ಕೆ ಕರೆಸಿ ಛೀಮಾರಿ ಹಾಕುವ, ಗಂಭೀರ ಪ್ರಕರಣಗಳು ಆದರೆ, ಜೈಲು ಶಿಕ್ಷೆ ವಿಧಿಸುವ ಅಧಿಕಾರವನ್ನು ಹಕ್ಕುಚ್ಯುತಿಯಲ್ಲಿ ನೀಡಲಾಗಿದೆ. ಸದನದ ಸದಸ್ಯರು ತಪ್ಪು ಮಾಡಿದರೆ ಬಹಿಷ್ಕಾರ ಹಾಕಲಾಗುತ್ತದೆ.
ಸದನದ ತೀರ್ಮಾನ
ನ್ಯಾಯಾಲಯ ಪರಿಶೀಲನೆ ನಡೆಸಬಹುದು
ಸದನ ಅಥವ ಅದರ ಸದಸ್ಯನ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆಯೇ ಎಂಬುದನ್ನು ನಿರ್ಧರಿಸುವ ಪರಮಾಧಿಕಾರ ಸಂಸತ್ತು ಅಥವ ಶಾಸನ ಸಭೆಗೆ ಮಾತ್ರ ಇರುತ್ತದೆ. ಈ ಪರಮಾಧಿಕಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ.
ಆದರೆ, ಸದನ ಕೈಗೊಂಡ ನಿರ್ಧಾರ ನ್ಯಾಯಸಮ್ಮತವಾಗಿದೆಯೇ?, ಇಲ್ಲವೇ? ಎನ್ನುವುದನ್ನು ನ್ಯಾಯಾಲಯ ಪರೀಶಿಲನೆ ನಡೆಸಹುದು ಎಂದು ಕೋರ್ಟ್ ಹೇಳಿದೆ. ಆದರೆ, ಯಾವುದೇ ವ್ಯಕ್ತಿಯ ಬಂಧನಕ್ಕೆ ಸದನ ಸೂಚನೆ ನೀಡಿದ್ದರೆ, ಅದರ ಸಿಂಧುತ್ವವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.
0 Comments