ಮಂದಾರ ನ್ಯೂಸ್, ತ್ಯಾಗರ್ತಿ : ಹತ್ತೂರಿನ ಒಡತಿ,ತ್ಯಾಗರ್ತಿ ಗ್ರಾಮದ ಜನರ ಆರಾಧ್ಯ ದೇವತೆ " ಶ್ರೀ ಮಾರಿಕಾಂಬ ದೇವಿಯ" ನೂತನ ಕಟ್ಟಡದ ಪೂಜಾ ಕಾರ್ಯಕ್ರಮಗಳು ನಾಳೆಯಿಂದ ಆರಂಭವಾಗಲಿದೆ.
ಮುಂದಿನ ತಿಂಗಳು 24,25,26 ರಂದು ತ್ಯಾಗರ್ತಿ ಮಾರಿಕಾಂಬ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದ್ದು, ಇದರ ಪೂರ್ವಭಾವಿಯಾಗಿ ಇಂದಿನಿಂದ ದೇವಿ ಪ್ರತಿಷ್ಠಾಪನೆಯ ಪೂಜಾ-ಕಾರ್ಯಕ್ರಮಗಳು ಆರಂಭವಾಗುತ್ತಿದೆ.
ದೇವಿ ಪ್ರತಿಷ್ಠಾಪನೆಯ ಆರಂಭಕ್ಕೂ ಮೊದಲು 'ನಿಧಿ ಕುಂಭ' ಸ್ಥಾಪನೆಯ ಪೂಜಾ ಕಾರ್ಯಕ್ರಮಗಳನ್ನು ನಾಳೆ ಅಂದರೆ ದಿನಾಂಕ 20 /11/ 2024 ಬುಧವಾರದಂದು ಶ್ರೀ ಮಾರಿಕಾಂಬ ಮತ್ತು ಶ್ರೀ ದುರ್ಗಾಂಬಾ ದೇವಸ್ಥಾನಗಳ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಹಾಗೂ ದೇವಿಯ ಭಕ್ತಾದಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭವಾಗುತ್ತಿದೆ.
"ನಿಧಿ ಕುಂಭ" ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಚಿನ್ನ/ ಬೆಳ್ಳಿಯನ್ನು ದಾನವಾಗಿ ನೀಡುವ ಮೂಲಕ ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ ಕೊಡುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುವಂತೆ ಈ ಮೂಲಕ ಸಮಿತಿಯ ಪದಾಧಿಕಾರಿಗಳು ವಿನಂತಿ ಮಾಡಿಕೊಂಡಿದ್ದಾರೆ.
ತ್ಯಾಗರ್ತಿ ಗ್ರಾಮದ ಹಾಗೂ ಸುತ್ತಮುತ್ತಲು ಗ್ರಾಮದ ಜನರ ಹಲವು ವರ್ಷದ ಕನಸು ನನಸಾಗುತ್ತಿದ್ದು. ನೂತನ ದೇವಸ್ಥಾನದ ಕಟ್ಟಡದಲ್ಲಿ ಮಾರಿಕಾಂಬ ದೇವಿಯ ಮೂರ್ತಿಯನ್ನು ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ಶ್ರೀ ಮಾರಿಕಾಂಬ ಮತ್ತು ದುರ್ಗಾಂಬ ದೇವಸ್ಥಾನಗಳ ಟ್ರಸ್ಟಿನಲ್ಲಿರುವ ಉತ್ಸಾಹಿ ಪದಾಧಿಕಾರಿಗಳ ಸಹಾಯದಿಂದ ದೇವಸ್ಥಾನದ ಲೋಕಾರ್ಪಣ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಲಿದೆ. ಈಗಾಗಲೇ ಮಾರಿಕಾಂಬ ದೇವಿಯ ಭಕ್ತಾದಿಗಳು ತಮ್ಮ ತನು-ಮನ-ಧನ ಸಹಕಾರದೊಂದಿಗೆ ನೂತನ ದೇವಸ್ಥಾನ ಲೋಕಾರ್ಪಣೆಗೆ ತಮ್ಮ ಕೈಲಾದ ಭಕ್ತಿಯನ್ನು ಸಮರ್ಪಿಸಿದ್ದಾರೆ.
0 Comments