ಶಾಲಾ ಸಿಸಿಟಿವಿಗಳಿಗೆ ಕಿಡಿಗೇಡಿಗಳಿಂದ ಹಾನಿ. ತ್ಯಾಗರ್ತಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆದ ಘಟನೆ.


ಮಂದಾರ ನ್ಯೂಸ್ ,ಸಾಗರ:ಶಾಲೆಗಳು ಜ್ಞಾನ ದೇಗುಲ, ಸರಸ್ವತಿಯ ನೆಲೆಬೀಡು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾರಣವಾಗುವ ದೇವಸ್ಥಾನ, ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಡಿವಂತಿಕೆಯ ಸ್ಥಳ. 

ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಲು ವಿದ್ಯೆಯನ್ನು ಧಾರೆ ಎರೆದ ಜ್ಞಾನ ದೇಗುಲದ ಗುರುಗಳಿಗೆ ನಾವು ಋಣಿಗಳಾಗಿರಬೇಕು.

ನಮ್ಮ ಭವಿಷ್ಯವನ್ನು ಕಟ್ಟಿಕೊಂಡು, ಉತ್ತಮ ನಾಗರಿಕರಾಗಿ ಬದುಕು ಸಾಗಿಸಬೇಕಾದ ನಾವುಗಳೇ ಜ್ಞಾನ ದೇಗುಲ ಸರಸ್ವತಿಯ ನೆಲೆಯನ್ನು ಕಲುಷಿತ ವಾತಾವರಣ ಮಾಡಬಾರದು ಅಲ್ಲವೇ? ಇತ್ತೀಚಿನ ದಿನದಲ್ಲಿ ಕೆಲವು ಯುವಕರು ಶಾಲಾ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಸಂಸ್ಕಾರ ಇಲ್ಲದವರ ರೀತಿ ವರ್ತಿಸುತ್ತಿದ್ದಾರೆ. ನಾಗರಿಕ ಸಮಾಜಕ್ಕೆ ಇವರು ದೊಡ್ಡ ಅಪಾಯಕಾರಿ ಜನರಾಗಿ ಹೊರಹೊಮ್ಮುತ್ತಿದ್ದಾರೆ. ಇಂಥವರಿಂದ ಶಾಲಾ ಹಾಗೂ ಊರಿನ ವಾತಾವರಣ ಹಾಳಾಗುತ್ತಿದೆ. 

ಎಲ್ಲ ವಿಚಾರ ಏಕೆ ಹೇಳುತ್ತಿದ್ದೇನೆ ಗೊತ್ತೇ? 


ಕಳೆದ ಎರಡು ದಿನದ ಹಿಂದೆ ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಅಳವಡಿಸಿದ ಎರಡು ಸಿಸಿ ಕ್ಯಾಮೆರಾ ಗಳನ್ನು ಯಾರು ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಶಾಲೆಯ ವಾತಾವರಣವನ್ನು ಹಾಳು ಮಾಡಲು ಕಿರಿಗೇಡಿಗಳು ಹೊರಟಿದ್ದಾರೆ. 

ಶಾಲೆಯ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಸದ್ದುದ್ದೇಶದಿಂದ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಶಾಲೆಯ ಹಾಗೂ ಶಾಲೆಯ ಕೊಠಡಿಗಳಿಗೆ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಿದ್ದರು. ಆದರೆ ಸಂಸ್ಕಾರ ಇಲ್ಲದ ,ಸಮಾಜಕ್ಕೆ ದೊಡ್ಡ ಹೊರೆಯಾಗಿರು, ಅನಾಗರಿಕತೆಯನ್ನು ಮೈಗೂಡಿಸಿಕೊಂಡಿರುವ ಯಾರು ಕಿಡಿಗೇಡಿಗಳು ಕಳೆದ ಎರಡು ದಿನದ ಹಿಂದೆ ಹಾಳು ಮಾಡಿ, ಕಿತ್ತೆಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಈ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂಥಾಗಿದೆ. 

ನಿನ್ನೆ ದಿನ ಆನಂದಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಯುವರಾಜ್ ಕಂಬಳಿ ಅವರು ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಪತ್ತೆ ಕಾರ್ಯವನ್ನು  ಚುರುಕುಗಳಿಸಿದ್ದಾರೆ. ಈಗಾಗಲೇ ಪ್ರಾರ್ಥಮಿಕ ತನಿಖೆಯಿಂದ ಕಿಡಿಗೇಡಿಗಳು ಗ್ರಾಮದ ಯುವಕರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅವರನ್ನು ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾರೆ ಎಂಬ ಮಾಹಿತಿ ನಮ್ಮ ಮಾಧ್ಯಮಕ್ಕೆ ಲಭ್ಯವಾಗಿದ್ದು ,ಅವರ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದೆ. 

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು, ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಹಳೆ ವಿದ್ಯಾರ್ಥಿಗಳು ಈ ಕಿಡಿಗೇಡಿಗಳ ಕೃತ್ಯಕ್ಕೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ತಪ್ಪಿತಸ್ಥರು ಯಾರೇ ಇರಲಿ, ಯಾರ ಮಕ್ಕಳೇ ಆಗಿರಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಅನಾಗರಿಕರಂತೆ ವರ್ತಿಸುವ ಯುವಕರಿಗೆ ನ್ಯಾಯಾಂಗ ವ್ಯವಸ್ಥೆ ನೀಡುವ ಶಿಕ್ಷೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ತಮ್ಮ ಆಕ್ರೋಶವನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. 

ನಾವುಗಳು ನಮ್ಮ ಭವಿಷ್ಯವನ್ನು ಕಟ್ಟಿಕೊಟ್ಟ ಶಾಲೆಯ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮದು ಎಂಬುದನ್ನು ಮರೆಯಬಾರದು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡುವಂತರಾಗಬೇಕು. ಶಾಲೆಯಲ್ಲಿ ಓದುತ್ತಿರುವರು ನಮ್ಮವರು, ನಮ್ಮ ಸ್ನೇಹಿತರ ಹಾಗೂ ನಮ್ಮ ಅಕ್ಕ- ಪಕ್ಕದ ಗ್ರಾಮದ ಮಕ್ಕಳು ಎಂಬುದನ್ನು ಮರೆಯಬಾರದು. ನಾವು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆ ಮೂಲಕ ಹೆತ್ತವರ ಗೌರವವನ್ನು ಕಾಪಾಡುವಂತ ಮಕ್ಕಳಾಗಬೇಕು. ಇಂತಹ ಅವಿವೇಕಿ ಕೆಲಸಗಳನ್ನು ಯಾರು ಮಾಡಬಾರದು, ಇಂಥಹ ಕೃತ್ಯ ನಡೆಸಿದವರನ್ನು ಯಾರು ಕ್ಷಮಿಸಬಾರದು.

Post a Comment

0 Comments