30 ಕೋಟಿಗೂ ಹೆಚ್ಚು ವ್ಯವಹಾರ ನಡೆಸುವ ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗಲಿ.


ಮಂದಾರ ನ್ಯೂಸ್: ತ್ಯಾಗರ್ತಿ- ಹಿರೇಬಿಲಗುಂಜಿ ಗ್ರಾಮದ ರೈತಾಪಿ ವರ್ಗದ ಜನರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಸಂಘ ಪ್ರತಿವರ್ಷ ಸರಿಸುಮಾರು 30 ರಿಂದ 40 ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತದೆ. 

ಇಂತಹ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿರುವ ಕೃಷಿ ಸಹಕಾರ ಬ್ಯಾಂಕಿನ ಚುನಾವಣೆ ಇದೆ ದಿನಾಂಕ 14ರ ಶನಿವಾರದಂದು ನಡೆಯಲಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು ನಾಳೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗುತ್ತದೆ. 

30 ರಿಂದ 40 ಕೋಟಿಗೂ ಹೆಚ್ಚು ವಿವಿಧ ಮೂಲಗಳಿಂದ ವಾರ್ಷಿಕ ವ್ಯವಹಾರ ನಡೆಸುವ ಸಾಗರ ತಾಲೂಕಿನ ಸಹಕಾರಿ ಬ್ಯಾಂಕುಗಳಲ್ಲಿ ದೊಡ್ಡ ಬ್ಯಾಂಕು ಎಂಬ ಹೆಸರು ಪಡೆದಿರುವ ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿರುವುದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಹಳೆ ಮುಖಗಳು ಮತ್ತು ಹೊಸ ಮುಖಗಳು ಸಹ ಚುನಾವಣೆಯ ಕಣದಲ್ಲಿ ಇರುವುದು ಎಲ್ಲಾ ಷೇರುದಾರರಿಗೆ ತಿಳಿದಿದೆ. ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಬ್ಯಾಂಕಿಗೆ ಹಲವು ದಶಕಗಳಿಂದ ಹಳೆಯ ಮುಖಗಳು ಚುನಾವಣೆಗೆ ಸ್ಪರ್ಧಿಸುತ್ತಿರುವುದರ ಹಿಂದಿನ ಉದ್ದೇಶ ಷೇರುದಾರರಿಗೆ ತಿಳಿದಂತೆ ಕಾಣುತ್ತಿಲ್ಲ.
ಸರಳವಾಗಿ ಹೇಳುತ್ತೇವೆ ಅರ್ಥ ಮಾಡಿಕೊಳ್ಳಿ. ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸುತ್ತದೆ. ರೈತರಿಗೆ ಕೃಷಿ ಸಾಲ ನೀಡುವುದು, ವಾಣಿಜ್ಯ ವ್ಯಾಪಾರ ನಡೆಸುವವರಿಗೆ ವ್ಯಾಪಾರ ಸಾಲ ನೀಡುವುದು, ಪಿಗ್ಮಿ ಸಂಗ್ರಹ ಮಾಡುವುದು, ಇತರ ಗೃಹಬಳಕೆ ವಸ್ತುಗಳ ಮಾರಾಟ ಮಾಡುವುದು, ನ್ಯಾಯಬೆಲೆ ಅಂಗಡಿ ನಡೆಸುವುದು, ಹಣವನ್ನು ಡೆಪಾಸಿಟ್ ಮಾಡಿಕೊಳ್ಳುವುದು, ರೈತರ ಕೃಷಿ ಸಲಕರಣೆಗಳ ಮಾರಾಟ ಮಾಡುವುದು ಮತ್ತು ಬಾಡಿಗೆ ನೀಡುವುದು ಹೀಗೆ ವಿವಿಧ ಮೂಲಗಳಿಂದ ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕು ಕೋಟ್ಯಾಂತರ ರೂಪಾಯಿ ಹಣವನ್ನು ಸಂಗ್ರಹಿಸುತ್ತದೆ. ಜನರ ಷೇರುಗಳ ಮೊತ್ತದ ಹಣವೇ ಕೋಟಿಗಟ್ಟಲೆ ಇದೆ. ಇವರಿಗೆ ಷೇರುಗಳ ಕಮಿಷನ್ ಇನ್ನು ವಿತರಣೆ ಮಾಡಿಲ್ಲ ಎಂಬ ಆರೋಪವು ಇದೆ. 

ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿರುವ ಕೃಷಿ ಪತ್ತಿನ ಸಹಕಾರ ಬ್ಯಾಂಕು ತಮ್ಮ ಲಾಭಾಂಶವನ್ನು ಕೇವಲ ಹತ್ತು ಲಕ್ಷ ರೂಪಾಯಿಗಳು ಮಾತ್ರ ಷೇರುದಾರರ ಮುಂದೆ ಇಡುತ್ತಿದೆ. ಈ ಲೆಕ್ಕಾಚಾರದ ಒಳ ಮರ್ಮವನ್ನು ಒಮ್ಮೆ ನೀವೇ ಅರ್ಥಮಾಡಿಕೊಳ್ಳಿ. 

ಚುನಾವಣೆಗೆ ಹಲವು ದಶಕಗಳಿಂದ ಸ್ಪರ್ಧಿಸುತ್ತಿರುವ ಮುಖಗಳನ್ನು ಒಮ್ಮೆ ನೋಡಿ. ಇವರ ಸ್ಪರ್ಧೆಯ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಿ. "ಲಾಭ ಇಲ್ಲದ ಹುದ್ದೆಗಳಿಗೆ, ಜನ ಸೇವೆಯನ್ನು" ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ ಹಳೆಯ ಮುಖವನ್ನು ಈಗಾಗಲೇ ಒಮ್ಮೆ ಗಮನಿಸಿ.
ಚಿನ್ನದ ಮೊಟ್ಟೆ ಇಡುವ, ಕಲ್ಪವೃಕ್ಷವಾಗಿರುವ ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯ ಚುಕ್ಕಾಣೆ ಹೊಸ ಮುಖಗಳಿಗೆ ಸಿಗಬಾರದು ಎಂಬ ಉದ್ದೇಶದಿಂದ ಹಳೆ ಮುಖಗಳು ಚುನಾವಣೆಯ ಕಣದಲ್ಲಿ ನಿರಂತರವಾಗಿ ಸ್ಪರ್ಧೆ ನಡೆಸುತ್ತಿದ್ದಾರೆ. ಇವರು ಚುನಾವಣೆಯ ಕಣದಿಂದ ಹಿಂದೆ ಸರಿಯುತ್ತಿಲ್ಲ. ಅವರಿಗೆ ಸಹಕಾರ ಬ್ಯಾಂಕಿನ ಚುಕ್ಕಾಣೆಯ ಹಿಡಿತ ಹಳೆ ಮುಖದ ಕೈಯಲ್ಲೇ ಇರಬೇಕು. ಹೊಸ ಮುಖಗಳು ಬಂದು ಎಲ್ಲಿ ತಮ್ಮ ಸಹಕಾರ ಬ್ಯಾಂಕಿನ ಅವ್ಯವಹಾರಗಳನ್ನು ಬಯಲಿಗೆ ಎಳೆದುಬಿಡುತ್ತಾರೋ ಎಂಬ ಭಯ.

ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯಲ್ಲಿ ಸೂಕ್ತ -ಸಮರ್ಥ ಅಭ್ಯರ್ಥಿಗಳ ಆಯ್ಕೆ ನಮ್ಮದಾಗಬೇಕು ಅಲ್ಲವೇ?

ಸಹಕಾರ ಬ್ಯಾಂಕಿನ ಮತ ಚಲಾವಣೆ ಮಾಡುವ ಅಧಿಕಾರ ಹೊಂದಿರುವ ಷೇರುದಾರರೆ ನಿಮ್ಮ ಒಂದು ಮತ ಕೃಷಿ ಸಮುದಾಯಕ್ಕೆ ಅನುಕೂಲವಾಗಬೇಕು. ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬದಲಾವಣೆಯಾಗಬೇಕು. ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುವಂತಿರಬೇಕು. ಹಳೆಯ ಸಂಪ್ರದಾಯಗಳಿಗೆ ತಿಲಾಂಜಲಿ ಇಡಬೇಕು. ಬದಲಾವಣೆಯ ಗಾಳಿ ಬೀಸಬೇಕು. ಯುವ ಮುಖಗಳಿಗೆ ಆದ್ಯತೆ ಸಿಗಬೇಕು. ಆ ನಿಟ್ಟಿನಲ್ಲಿ ನಮ್ಮ ಮತ ಸೂಕ್ತ ಸಮರ್ಥ ಅಭ್ಯರ್ಥಿಗೆ ಸಿಗುವಂತಿರಬೇಕು. ಚುನಾವಣೆಯ ನಂತರ ಗೆದ್ದ ಅಭ್ಯರ್ಥಿಯ ಕೊರಳ ಪಟ್ಟಿಯನ್ನು ಹಿಡಿದು ಪ್ರಶ್ನೆ ಮಾಡುವಂತಿರಬೇಕು. ಈ ಬಾರಿಯ ಚುನಾವಣೆ ಈ ಎಲ್ಲಾ ಬದಲಾವಣೆಗೆ ಹೊಸ ನಾಂದಿ ಹಾಡಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸಿದ ಹಳೆಯ ಮುಖಗಳಿಗೆ ಹೊಡೆದಂತಿರಬೇಕು. 

ಇದು ಸಾರ್ವಜನಿಕರ ಸ್ವತ್ತು, ಸಾರ್ವಜನಿಕರಿಗಾಗಿ ನಿರ್ಮಾಣವಾದ ಬ್ಯಾಂಕು, ಸಾರ್ವಜನಿಕರೇ ಅಧಿಕಾರ ನಡೆಸಬೇಕು. ಈ ಬದಲಾವಣೆ ಯುವ ಮತದಾರರಿಂದ ಆಗಬೇಕು. ತಮ್ಮ ಮನೆಯಲ್ಲಿರುವ ಷೇರುದಾರರ ಮನ ಬದಲಾಯಿಸುವ ಜವಾಬ್ದಾರಿ ಆ ಮನೆಯ ಯುವಕರ ಮೇಲಿದೆ. ಅವರನ್ನು ಯಾವ ರೀತಿಯಲ್ಲಿ ಮನಸನ್ನು ಬದಲಾಯಿಸುತ್ತಿರೋ ಗೊತ್ತಿಲ್ಲ. ಆದರೆ ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಬ್ಯಾಂಕು ಉಳಿಯಬೇಕು ಹಾಗೂ ಅದರ ಅವ್ಯವಹಾರದ ಬಯಲಿಗೆ ಬರಬೇಕು. ಇದುವರೆಗೂ ನಡೆದ ಎಲ್ಲಾ ಮೂಲದ ವ್ಯವಹಾರಗಳು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು. ಆ ರೀತಿಯಲ್ಲಿ ಯುವಕರ ಹೋರಾಟ ಮೊಳಗಬೇಕು.

ಈ ಬಾರಿ ಚುನಾವಣೆ ಹೊಸ ಇತಿಹಾಸ ಬರೆಯುತ್ತಿದೆ ಎಂಬ ನಂಬಿಕೆಯೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ......

Post a Comment

0 Comments