ಸಾಲಗಾರರಲ್ಲದ ಕ್ಷೇತ್ರದಿಂದ ಕಿರಣ್ ಕುಮಾರ್ ದೊಡ್ಮನೆ ಅಭೂತಪೂರ್ವ ಜಯ.!!


ಮಂದಾರ ನ್ಯೂಸ್ : ಇಂದು ತ್ಯಾಗರ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು, ಇದರಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸಾವೆಹಕ್ಕಲು - ಕುಡೆಗೆರೆ ಗ್ರಾಮದ ಕಿರಣ್ ಕುಮಾರ್ ದೊಡ್ಮನೆ ಇವರು 115 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. 

ಒಟ್ಟು 147 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ ಕಿರಣ್ ಕುಮಾರ್ ದೊಡ್ಮನೆ ಇವರು 115 ಮತಗಳನ್ನು ಪಡೆದಿದ್ದಾರೆ. ಇವರ ಪ್ರತಿ ಸ್ಪರ್ಧಿಗಳು ಇವರಿಗೆ ಪ್ರಬಲ ಪೈಪೋಟಿ ನಡೆಸುವುದರಲ್ಲಿ ಸೋತಿದ್ದಾರೆ.

ಕಿರಣ್ ಕುಮಾರ್ ದೊಡ್ಮನೆ ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.
ಕಿರಣ್ ಕುಮಾರ್ ದೊಡ್ಮನೆ ಅವರ ಗೆಲುವಿಗೆ ಬೇಳೂರು ಗೋಪಾಲಕೃಷ್ಣ ಅವರು ಫೋನ್ ಕರೆ ಮಾಡಿ ಅಭಿನಂದನೆಯನ್ನು ತಿಳಿಸಿದ್ದಾರೆ. ಸಾಗರ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಯೋಜನಾ ಪ್ರಾಧಿಕಾರದ ಸದಸ್ಯರಾಗಿರುವ ಸೋಮಶೇಖರ್ ಲಾವಗೇರಿ ಅವರು ಕೂಡ ಕಿರಣ್ ಕುಮಾರ್ ಅವರ ಗೆಲುವಿಗೆ ಸಂತಸವನ್ನು ವ್ಯಕ್ತಪಡಿಸಿದ್ದು ಅವರಿಗೆ ಶುಭವನ್ನು ಕೋರಿದ್ದಾರೆ. 

ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಕಿರಣ್ ಕುಮಾರ್ ದೊಡ್ಮನೆ ಅವರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮತ ನೀಡಿದ ಎಲ್ಲಾ ಮತದಾರರಿಗೂ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ರೈತಾಪಿ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವರ ಪರವಾಗಿ ಧ್ವನಿ ಎತ್ತುತ್ತೇನೆ. ಪಾರದರ್ಶಕ ಆಡಳಿತವನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಈ ಸಂದರ್ಭದಲ್ಲಿ ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡರು.

ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ವಿಜಯಶಾಲಿಯಾಗಿರುವ ಕಿರಣ್ ಕುಮಾರ್ ದೊಡ್ಮನೆ ಇವರಿಗೆ ನಮ್ಮ ಮಂದಾರ ನ್ಯೂಸ್ ಪತ್ರಿಕ ಬಳಗದ ವತಿಯಿಂದ ಶುಭ ಕೋರುತ್ತೇವೆ.

Post a Comment

0 Comments