ಮಂದಾರ ನ್ಯೂಸ್: ಮಾರಿಕಾಂಬ ದೇವಿಯ ಭಕ್ತರ ಹಲವು ವರ್ಷದ ಕನಸು ಇಂದು ನನಸಾಯ್ತು. ಗ್ರಾಮದ ಆದಿ ದೇವತೆ ಶ್ರೀ ಮಾರಿಕಾಂಬಾದೇವಿಯನ್ನು ನೂತನ ಕಟ್ಟಡದಲ್ಲಿ ನೋಡುವ ಭಾಗ್ಯ ನಮ್ಮದಾಯಿತು. ದೇವಿಯ ಸಂಕಲ್ಪದಂತೆ ನೂತನ ಮಾರಿಕಾಂಬ ದೇವಾಲಯ ಇಂದು ಲೋಕಾರ್ಪಣೆಯಾಯಿತು.
ತ್ಯಾಗರ್ತಿ ಗ್ರಾಮ ಸಹಬಾಳ್ವೆಗೆ ,ಸೌಹಾರ್ದತೆಗೆ ಹೆಸರಾದ ಗ್ರಾಮ. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದವರು. ಇನ್ನೊಬ್ಬರ ಕಷ್ಟವನ್ನು ನಮ್ಮದೇ ಎಂದು ಭಾವಿಸಿ ಮುನ್ನುಗ್ಗಿ ಬಂದವರು. ಜಾತಿ- ಮತ- ಪಂಥವನ್ನು ಮರೆತು ಎಲ್ಲರೂ ಒಟ್ಟಾಗಿ ಗ್ರಾಮದ ಗೌರವವನ್ನು ಎತ್ತಿ ಹಿಡಿದವರು.
ನೂತನ ದೇವಾಲಯ ಲೋಕಾರ್ಪಣೆಗಾಗಿ ಗ್ರಾಮದ ಮುಸ್ಲಿಂ ಸಮಾಜದ ಬಂಧುಗಳು ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಸೇವೆಯನ್ನು ದೇವಿಗೆ ಸಲ್ಲಿಸಿದರು. ಅದರಂತೆ ಇಂದು ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ತಂಪು ಪಾನೀಯವನ್ನು ವಿತರಣೆ ಮಾಡುವ ಮೂಲಕ ಸೌಹಾರ್ದತೆಯನ್ನು ಮೆರೆದರು. ದೇವಾಲಯದ ನಿರ್ಮಾಣ ಕಾರ್ಯಕ್ಕೆ ಅವರು ಸಹ ದೇಣಿಗೆ ರೂಪದಲ್ಲಿ ತಮ್ಮ ಭಕ್ತಿಯನ್ನು ಮೆರೆದಿದ್ದರೂ. ತ್ಯಾಗರ್ತಿ ಗ್ರಾಮ ಹಾಗೂ ಗ್ರಾಮದ ಜನರು ಸಹಬಾಳ್ವೆಯ ಜೀವನಕ್ಕೆ ಹೆಸರಾದವರು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು.
ಎಲ್ಲಾ ಆ ತಾಯಿ ಮಾರಿಕಾಂಬಾ ದೇವಿಯ ಲೀಲೆ. ಯಾವುದೇ ಅಡೆ-ತಡೆಯಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ಆ ತಾಯಿ ಭಕ್ತರಿಗೆ ಆಶೀರ್ವದಿಸಿದಂತೆ ಕಾಣುತ್ತಿದೆ. ತಾಯಿಯ ಆಶೀರ್ವಾದದ ಪರಿಣಾಮ ಎಲ್ಲರೂ ಒಟ್ಟಾಗಿ ಸೇರಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತರಾಗುತ್ತಿದ್ದಾರೆ.
ಮುಸ್ಲಿಂ ಸಮಾಜದ ಬಂಧುಗಳು ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಇಂದು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ತಂಪು ಪಾನೀಯವನ್ನು ವಿತರಿಸಿ ಅವರು ಸಹ ದೇವಾಲಯದ ಕಾರ್ಯಕ್ರಮದಲ್ಲಿ ತಮ್ಮ ಸೇವೆಯನ್ನು ಅರ್ಪಿಸುತ್ತಿರುವ ಸಮಸ್ತ ಮುಸ್ಲಿಂ ಸಮಾಜದ ಬಂಧುಗಳಿಗೆ ನಮ್ಮ ಮಂದಾರ ನ್ಯೂಸ್ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
🙏🙏🙏🙏
💐💐💐💐💐💐
0 Comments