ತ್ಯಾಗರ್ತಿ ಮಾರಿಕಾಂಬ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹರಿದು ಬರುತ್ತಿರುವ ದೇಣಿಗೆ ಹಿಂದಿನ ಶಕ್ತಿಯೇನು?!


ಮಂದಾರ ನ್ಯೂಸ್, ತ್ಯಾಗರ್ತಿ ಗ್ರಾಮದ ಆದಿದೇವತೆ, 475 ವರ್ಷ ಪ್ರಾಚೀನತೆಯನ್ನು ಹೊಂದಿರುವ ಶ್ರೀ ಮಾರಿಕಾಂಬ ದೇವಿಗೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕು ಎಂಬ ಸದ್ದುದ್ದೇಶದಿಂದ ಹಳೆಯ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಿ,ಅದೇ ಜಾಗದಲ್ಲಿ ನೂತನ ಕಟ್ಟಡವನ್ನು ಪುನ ನಿರ್ಮಾಣ ಮಾಡಬೇಕೆಂಬುದು ಈ ಮಾರಿಕಾಂಬ ದೇವಿಯ ಭಕ್ತರ ಅಪೇಕ್ಷೆಯಾಗಿತ್ತು. ಅದರಂತೆ ಶ್ರೀ ಮಾರಿಕಾಂಬ ದೇವಿಯ ಭಕ್ತರು ಸುಮಾರು 1 ಕೋಟಿ 50 ಲಕ್ಷ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮುಂದಾದರು. 

ಸರಿಸುಮಾರು 9 ವರ್ಷಗಳ ಹಿಂದೆ ಹಳೆ ಕಟ್ಟಡವನ್ನು ತೆರೆವುಗೊಳಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. 
ತ್ಯಾಗರ್ತಿ ಗ್ರಾಮದ ಆದಿದೇವತೆ ಶ್ರೀ ಮಾರಿಕಾಂಬ ದೇವಸ್ಥಾನ ನಿರ್ಮಾಣಕ್ಕಾಗಿ ಗ್ರಾಮದ ಪ್ರತಿ ಕುಟುಂಬದ ಮನೆಗೆ ಆರು ಸಾವಿರ ರೂಪಾಯಿ ದೇಣಿಗೆಯನ್ನು ನೀಡಬೇಕು ಎಂದು ಭಕ್ತರಲ್ಲಿ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ತೀರ್ಮಾನ ಮಾಡಿ ಭಕ್ತರಲ್ಲಿ ಮನವಿ ಮಾಡಿಕೊಂಡರು. ಅದರಂತೆ ಭಕ್ತರು ಶ್ರಿ ಮಾರಿಕಾಂಬ ದೇವಸ್ಥಾನ ನೂತನ ಕಟ್ಟಡ ನಿರ್ಮಾಣಕ್ಕಾಗಿ ಆರು ಸಾವಿರ ರೂಪಾಯಿಗಳ ದೇಣಿಗೆ ನೀಡಲು ಮುಂದಾದರು. ಅದೇಕೋ ದೇವಸ್ಥಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿತ್ತು. ಭಕ್ತರು ನೀಡುತ್ತಿರುವ ದೇಣಿಗೆ ಸಾಕಾಗಲಿಲ್ಲ. ಕಾಲಮಾನಕ್ಕೆ ತಕ್ಕಂತೆ ಖರ್ಚು -ವೆಚ್ಚಗಳು ಏರಿಕೆ ಕಂಡವು. ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ, ನೂತನ ಕಟ್ಟಡ ಲೋಕಾರ್ಪಣೆ ವಿಳಂಬವಾಗುತ್ತಾ ಸಾಗತೊಡಗಿತ್ತು. ಆದರೂ ಗ್ರಾಮಸ್ಥರು ಹಾಗೂ ದೇವಿಯ ಭಕ್ತರು ಹೇಗಾದರೂ ಮಾಡಿ 2025 ಮಾರಿಕಾಂಬ ಜಾತ್ರೆಯ ಸಮಯದೊಳಗೆ ಶ್ರೀ ಮಾರಿಕಾಂಬ ದೇವಸ್ಥಾನ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಬೇಕು ,ದೇವಿಯ ಪ್ರತಿಷ್ಠಾಪನೆ ಆಗಲೇಬೇಕು ಎಂಬ ಸಂಕಲ್ಪ ಮಾಡಿಕೊಂಡರು. 
ಶ್ರೀ ಮಾರಿಕಾಂಬ ದೇವಿಯ ಭಕ್ತರು , ಮಾರಿಕಾಂಬ ದೇವಿ ಮತ್ತು ದುರ್ಗಾಂಬಾ ದೇವಿ ದೇವಸ್ಥಾನಗಳ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಊರಿನ ಗ್ರಾಮಸ್ಥರು ಶ್ರೀ ಮಾರಿಕಾಂಬ, ಶ್ರೀ ದುರ್ಗಾಂಬಾ ದೇವರಲ್ಲಿ ಸಂಕಲ್ಪಸಿಕೊಂಡು ಒಂದು ಶುಭ ಮುಹೂರ್ತವನ್ನು ನಿಗದಿ ಮಾಡಿದರು. 

ಶ್ರೀ ಮಾರಿಕಾಂಬ ಹಾಗೂ ಶ್ರೀ ದುರ್ಗಾಂಬ ದೇವರಲ್ಲಿ ಸಂಕಲ್ಪ ಮಾಡಿಕೊಂಡು ನೂತನ ಕಟ್ಟಡದಲ್ಲಿ ದೇವಿಯನ್ನು ಪ್ರತಿಷ್ಠಾಪನೆ ಮಾಡುವ ದಿನಾಂಕವನ್ನು ನಿಗದಿ ಮಾಡುತ್ತಿದ್ದಂತೆ ದೇವಿಯ ಎಲ್ಲಾ ಸದ್ಭಕ್ತರಿಗೂ ಶ್ರೀ ಮಾರಿಕಾಂಬ ದೇವಿಯ ಅಗೋಚರ ಶಕ್ತಿ  ಭಕ್ತರಲ್ಲಿ ಪ್ರಚೋದಿಸಿ ತ್ರೀಕರಣ (ಆರ್ಥಿಕ- ದೈಹಿಕ -ಬೌದ್ಧಿಕ) ಪೂರ್ವಕವಾಗಿ ಸೇವೆಗೈಯುವಂತೆ ಈ ಮಾರಿಕಾಂಬ ದೇವಿಯು ಪ್ರೇರಣೆ ನೀಡಿದ ಪರಿಣಾಮವಾಗಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಬರದಿಂದ ಸಾಗತೊಡಗಿತ್ತು ಜೊತೆಗೆ ಭಕ್ತರಿಂದ ದೇಣಿಗೆಯು ಹರಿದು ಭರತೊಡಗಿತ್ತು, ಈ ಎಲ್ಲಾ ಪವಾಡಗಳು ಭಕ್ತರನ್ನು ಮೂಕ ವಿಸ್ಮಿತಗೊಳಿಸಿದಂತು ಸತ್ಯ.

ಈ ಹಿಂದೆ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ 6000 ರೂಪಾಯಿ  ಕೊಡಲು ಹಿಂದೆ -ಮುಂದೆ ಯೋಚನೆ ಮಾಡುತ್ತಿದ್ದವರು ಈಗ ದೇವಸ್ಥಾನ ಲೋಕಾರ್ಪಣೆ ಹಾಗೂ ದೇವಿ ಪ್ರತಿಷ್ಠಾಪನೆಯ ದಿನಾಂಕ ನಿಗದಿಗೊಳಿಸುತ್ತಿದ್ದಂತೆ ಸಾವಿರದಿಂದ ಲಕ್ಷ ರೂಪಾಯಿಗಳವರೆಗೆ ದೇಣಿಗೆಯನ್ನು ನೀಡಲು ಮುಂದೆ ಬರುತ್ತಿದ್ದಾರೆ. ಅದಕ್ಕೆ ಅಲ್ಲವೇ ?ದೇವಿಯ ಶಕ್ತಿ ಎನ್ನುವುದು. 
ಕಳೆದ ಮೂರು ತಿಂಗಳಿಂದ ಶ್ರೀ ಮಾರಿಕಾಂಬ ದೇವಸ್ಥಾನ ನಿರ್ಮಾಣ ಕಾರ್ಯದ ಜೊತೆಗೆ ಲೋಕಾರ್ಪಣೆ ಹಾಗೂ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇವಿಯ ಭಕ್ತರು ಕನಿಷ್ಠ 25 ದಿಂದ ಗರಿಷ್ಠ ಎರಡು ಲಕ್ಷದವರೆಗೂ ದೇಣಿಗೆಯನ್ನು ನೀಡುತ್ತಿದ್ದಾರೆ. ಒಮ್ಮೆ ಆಶ್ಚರ್ಯವಾಗಬಹುದು ಅಲ್ಲವೇ? ಯಾವುದಾದರೂ ಕಾರ್ಯಕ್ರಮ ಮಾಡಲು ನೂರು -ಇನ್ನೂರು ರೂಪಾಯಿ ಕೊಡಲು ಹಿಂದೆ -ಮುಂದೆ ನೋಡುತ್ತಿದ್ದವರೆಲ್ಲರೂ ಇಂದು ಲಕ್ಷ ,ಲಕ್ಷ ರೂಪಾಯಿಗಳವರೆಗೂ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಭಕ್ತರು ದೇಣಿಗೆ ರೂಪದಲ್ಲಿ ತಮ್ಮ ಭಕ್ತಿಯನ್ನು ಮರೆಯುತ್ತಿರುವ ಇಂದಿನ ಶಕ್ತಿ ತ್ಯಾಗರ್ತಿ ಶ್ರೀ ಮಾರಿಕಾಂಬ ದೇವಿ ಎಂಬುವುದನ್ನು ಯಾರು ಮರೆಯಬಾರದು. 

ಕೇವಲ ತ್ಯಾಗರ್ತಿ ಗ್ರಾಮದ ಭಕ್ತರಲ್ಲದೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಸಹ ದೇವಸ್ಥಾನ ನಿರ್ಮಾಣ ಕಾರ್ಯ ಹಾಗೂ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಜಾತಿ -ಮತ- ಭೇದ ಎಲ್ಲವನ್ನು ಮರೆತು ಸಾಮರಸ್ಯದಿಂದ ಸಹಬಾಳ್ವೆಯಲ್ಲಿ ದೇಣಿಗೆಯನ್ನು ನೀಡುತ್ತಿದ್ದಾರೆ ಎಂದರೆ ಆ ದೇವಿಯ ಶಕ್ತಿಯನ್ನು ಎಂತದ್ದು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ .

ಬದುಕು ಕಟ್ಟಿಕೊಳ್ಳಲು ಊರನ್ನು ಬಿಟ್ಟು, ಪರ ಊರಿನಲ್ಲಿ ವಾಸಿಸುತ್ತಿರುವ ದೇವಿಯ ಭಕ್ತರು ಸಹ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ, ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಣಿಗೆಯನ್ನು ನೀಡುವ ಮೂಲಕ ಶ್ರೀ ಮಾರಿಕಾಂಬ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂದರೆ ಆ ದೇವಿಯ ಮಹಿಮೆ ಎಂತದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಿ. 

ಭಕ್ತರೆ.! ಒಮ್ಮೆ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಐದು ನಿಮಿಷ ದೇವಸ್ಥಾನ ಕಟ್ಟಡ ತೆರವುಗೊಳಿಸಿದ ಆರಂಭದ ದಿನದಿಂದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ದೇವಿ ಪ್ರತಿಷ್ಠಾಪನೆಯ ದಿನಾಂಕವನ್ನು ನಿಗದಿಗೊಳಿಸುವವರೆಗೂ ನಡೆದ ಎಲ್ಲಾ ವಿದ್ಯಮಾನಗಳನ್ನು ಒಮ್ಮೆ ಅವಲೋಕನ ಮಾಡಿಕೊಳ್ಳಿ. ಆಗ ತಿಳಿಯುತ್ತದೆ ತ್ಯಾಗರ್ತಿ ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ಶಕ್ತಿ ಮತ್ತು ದೇವಿಯ ಪ್ರೇರಣೆ ಎಂತದ್ದು ಎಂಬುದು.

ದೇವಸ್ಥಾನ ಯಾವಾಗ, ಯಾವ ಸಮಯದಲ್ಲಿ, ಎಷ್ಟು ವರ್ಷಗಳ ನಂತರ ಲೋಕಾರ್ಪಣೆಗೊಳ್ಳಬೇಕು .ಆ ನೂತನ ಕಟ್ಟಡದಲ್ಲಿ ನನ್ನ ಪ್ರತಿಷ್ಠಾಪನೆ ಯಾವಾಗ ಆಗಬೇಕು ಎಂಬುದು ಆ ದೇವಿಯೇ ತನ್ನ ದಿನಾಂಕವನ್ನು ನಿಶ್ಚಯ ಮಾಡಿಕೊಂಡಿರುತ್ತಾಳೆ ಎಂಬುವುದನ್ನು ಯಾರು ಮರೆಯಬಾರದು. ಆ ತಾಯಿಯು ಇಚ್ಚೆ ಪಟ್ಟ ದಿನಾಂಕದಂದು ಯಾವುದೇ ಅಡೆ-ತಡೆ ಇಲ್ಲದೆ ಸರ್ವ ಸಮಾಜದ ,ಸರ್ವ ಭಕ್ತರ ಸಮ್ಮುಖದಲ್ಲಿ ದೇವಿಯು ಪ್ರತಿಷ್ಠಾಪನೆಗೊಳ್ಳುತ್ತಿದ್ದಾರೆ. ಅದರಂತೆ 2025 ರಲ್ಲಿ ನಡೆಯುವ ಜಾತ್ರೆಯೂ ದೇವಿಯ ಆಶೀರ್ವಾದದಂತೆ ಅದ್ದೂರಿಯಾಗಿ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಕ್ತರೇ ಆಗಮ ಶಾಸ್ತ್ರದಂತೆ ಹಾಗೂ ಬಹಳಷ್ಟು ಪ್ರಾಚೀನ ದೇವಾಲಯಗಳ ಪುನರ್ಜೀವನಗೊಳಿಸಿದ ಅನುಭವವನ್ನು ಹೊಂದಿರುವ ಪುರೋಹಿತರ ಮಾರ್ಗದರ್ಶನ ಹಾಗೂ ಸಲಹೆಯಂತೆ, ಊರಿನ ಗುರು ಹಿರಿಯರಿಗೆ ಹಾಗೂ ಕಮಿಟಿ ಪದಾಧಿಕಾರಿಗಳಿಗೆ ಶುಭ ಮುಹೂರ್ತದ ದಿನವನ್ನು ತಿಳಿಸಿದಂದು. ಅಂದರೆ ದಿನಾಂಕ 24, 25 ,26 ರ ಶುಭದಿನದಂದು ನೂತನ ಭವ್ಯ ಮಂದಿರದ ಗರ್ಭಗುಡಿಯಲ್ಲಿ ಶ್ರೀ ಮಾರಿಕಾಂಬ ಮತ್ತು ದುರ್ಗಾಂಬಾ ದೇವಿಯ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರಾಣಾ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಆ ಮೂರು ದಿನದ ಕಾರ್ಯಕ್ರಮದಲ್ಲಿ ದೇವಿಯ ಸಮಸ್ತ ಭಕ್ತರು ಪಾಲ್ಗೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗೋಣ ಎಂಬುದು ನಮ್ಮ ಮಾಧ್ಯಮದ ಭಕ್ತಿ ಪೂರಕವಾದ ನಮನಗಳು....

Post a Comment

0 Comments