ಮಂದಾರ ನ್ಯೂಸ್ ಹರಿಹರ: ಹರಿಹರ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದ ಕೊಪ್ಪ ಎಂಬ ಒಂದು ಗ್ರಾಮವಿದೆ, ಆ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆ ಶಾಲೆಯಲ್ಲಿ 24 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂಬ ಮಾಹಿತಿ ಹರಿಹರದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲ್ವಂತೆ.
67 ವರ್ಷ ಇತಿಹಾಸ ಹೊಂದಿರುವ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಗೆ ಇದುವರೆಗೂ ಯಾವುದೇ ದಾಖಲೆಗಳು ಇಲ್ಲದೆ ಇರುವುದು ಅನೇಕ ಅನುಮಾನಗಳ ಜೊತೆಗೆ ಆಶ್ಚರ್ಯವನ್ನು ಹುಟ್ಟು ಹಾಕಿದೆ.
67 ವರ್ಷ ಇತಿಹಾಸ ಹೊಂದಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಾವ ಜಾಗದಲ್ಲಿದೆ, ಈ ಶಾಲೆಯು ಎಷ್ಟು ವಿಸ್ತೀರ್ಣದಲ್ಲಿದೆ, ಈ ಶಾಲಾ ಜಾಗ ಸರ್ಕಾರಿ ಜಾಗದಲ್ಲಿದೆ ಅಥವಾ ಗ್ರಾಮಠಾಣ ಜಾಗದಲ್ಲಿದೆ ಅಥವಾ ಗೋಮಾಳ ಜಾಗದಲ್ಲಿ ಇದೆ ಎಂಬ ಮಾಹಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲ್ವಂತೆ.
ಈಗಾಗಲೇ ಕೊಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಯಾವುದೇ ರೀತಿಯ ಅಧಿಕೃತ ದಾಖಲೆಗಳು ಇಲ್ಲ ಎಂಬ ಮಾಹಿತಿ ಇದೆ. ಹಾಗಾದರೆ 67 ವರ್ಷ ಇತಿಹಾಸ ಹೊಂದಿದ ಸರ್ಕಾರಿ ಶಾಲೆಗೆ ಇದುವರೆಗೂ ಏಕೆ ದಾಖಲೆಗಳನ್ನು ಹೊಂದಿಸಿಲ್ಲ ಎಂಬ ಪ್ರಶ್ನೆ ಗ್ರಾಮದ ನಾಗರಿಕರಲ್ಲಿ ಹುಟ್ಟು ಹಾಕಿದೆ.
ಶಾಲಾ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಮುಂದಿನ ದಿನದಲ್ಲಿ ಶಾಲೆಯನ್ನು ವಿಸ್ತೀರ್ಣ ಮಾಡಬೇಕಾದರೆ ಶಾಲೆಗೆ ಸಂಬಂಧಿಸಿದ ಜಾಗ ಎಷ್ಟಿದೆ ಎಂಬ ಮಾಹಿತಿ ಬೇಕಾಗುತ್ತದೆ. ಶಾಲೆಯ ಅಕ್ಕ -ಪಕ್ಕದಲ್ಲಿ ಶಾಲೆಗೆ ಸಂಬಂಧಿಸಿದ ಜಾಗ ಒತ್ತುವರಿಯಾಗಿದೆಯೇ? ಶಾಲೆಯ ಜಾಗ ಈಗ ಎಷ್ಟು ಕಟ್ಟಡ ಹೊಂದಿದೆ .ಅಷ್ಟು ಕಟ್ಟಡಗಳು ಮಾತ್ರ ಶಾಲೆ ಜಾಗವೇ? ಅಥವಾ ಹೆಚ್ಚುವರಿ ಜಾಗ ಇದೆಯೇ? ಶಾಲೆಗೆ ಆಟದ ಮೈದಾನ ಇದೆಯೇ? ಅಥವಾ ಆಟದ ಮೈದಾನ ಒತ್ತುವರಿಯಾಗಿದೆಯೇ? ಹೀಗೆ ಹಲವು ಮಾಹಿತಿ ಮತ್ತು ದಾಖಲೆಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಇರಬೇಕಿತ್ತು. ಆದರೆ ಇದ್ಯಾವುದೂ ಇಲಾಖೆಯಲ್ಲಿ ಇಲ್ಲದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಕೂಡಲೇ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹರಿಹರ ತಾಲೂಕು ವ್ಯಾಪ್ತಿ ಸಂಬಂಧಿಸಿದ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದ ಶಾಲಾ ದಾಖಲೆಗಳನ್ನು ಪತ್ತೆ ಹಚ್ಚಬೇಕು ಹಾಗೂ ಶಾಲೆಯ ಅಕ್ಕ-ಪಕ್ಕದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಒತ್ತುವರಿಯಾಗಿದೆಯೇ? ಎಂಬ ಮಾಹಿತಿ ಕಲೆಹಾಕಿ. ಶಾಲೆ ಜಾಗವನ್ನು ಹದ್ದು-ಬಸ್ತು ಮಾಡಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಹೊರಬೇಕಾಗಿದೆ. ಆ ನಿಟ್ಟಿನಲ್ಲಿ ಕೂಡಲೇ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾರ್ಯಪವೃತ್ತರಾಗಲಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
ತಾಲೂಕಿನಲ್ಲಿ ಕೊಪ್ಪ ಎಂಬ ಗ್ರಾಮ ಒಂದು ಇದೆ, ಆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ ಎಂಬ ಮಾಹಿತಿಯನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ. ಈಗಾಗಲೇ ಶಾಲೆಯಲ್ಲಿ 24 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಶಾಲಾ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡಲೇ ಪತ್ತೆ ಹಚ್ಚಿ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳಿಗೆ ನೀಡುವ ಜವಾಬ್ದಾರಿಯನ್ನು ಹೊಂದಬೇಕಾಗಿದೆ.
0 Comments