ಮಂದಾರ ನ್ಯೂಸ್: ಪ್ರತಿ ಮೂರು ವರ್ಷಕ್ಕೊಮ್ಮೆ ಹರಿಹರ ನಗರದ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆಯನ್ನು ಅತ್ಯಂತ ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಇದೆ ದಿನಾಂಕ 18ರಂದು ಹರಿಹರ ನಗರದ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲು ದೇವಿಯ ಭಕ್ತರು ಕಾತರರಾಗಿದ್ದಾರೆ.
ಊರಮ್ಮ ದೇವಿಯ ಜಾತ್ರೆಗೆ ಆಗಮಿಸುವ ಸರ್ವ ಭಕ್ತರಿಗೆ ಶುಭ ಕೋರಲು ನಗರದ ಪ್ರಮುಖ ವೃತ್ತಗಳು ಸೇರಿದಂತೆ ಕೆಲವು ರಸ್ತೆಗಳು ಹಾಗೂ ವಾರ್ಡ್ಗಳಲ್ಲಿ ದೇವಿಯ ಭಕ್ತರು ಪ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದಾರೆ.
ಹರಿಹರ ನಗರದ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆ ಆಗಿರುವ ಕಾರಣ ಎಲ್ಲಾ ಭಕ್ತರು ಶುಭಕೋರುವ ಹಾಗೂ ಸ್ವಾಗತಿಸುವ ಫ್ಲೆಕ್ಸ್ ಗಳನ್ನು ಅಳವಡಿಸುತ್ತಿದ್ದಾರೆ. ಇದು ದೇವಿಯ ಜಾತ್ರೆ ಆಗಿರುವ ಕಾರಣ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಪ್ಲೆಕ್ಸ್ ಗಳನ್ನು ಅಳವಡಿಸಲಾಗುತ್ತಿದೆ.
ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಹರಿಹರ ನಗರ ಸಭೆಯ ಅಧಿಕಾರಿಗಳು ತಲೆ ನೋವಾಗಿದ್ದಾರೆ. ಪ್ಲೆಕ್ಸ್ ಗಳನ್ನು ಅಳವಡಿಸಲು ಅನುಮತಿಯನ್ನು ಪಡೆಯಬೇಕು ಎಂಬ ವಿಚಾರವನ್ನು ಮಾನ್ಯ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ಹರಿಹರ ನಗರಸಭೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮಾತನ್ನು ಮುಂದಿಟ್ಟುಕೊಂಡು ದೇವಿಯ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅನುಮತಿ ನೀಡುವ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಇಂದು ಹರಿಹರ ನಗರ ಸಭೆಯ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು.
ಒಂದು ಪ್ಲೆಕ್ಸ್ ರೆಡಿ ಮಾಡಲು ಒಂದು ಅಡಿಗೆ ಎಂಟು ರೂಪಾಯಿ ನೀಡುತ್ತಾರೆ. ಆದರೆ ಅದೇ ಪ್ಲೆಕ್ಸ್ ಗಳನ್ನು ಅಳವಡಿಸಲು ಒಂದು ಅಡಿಗೆ ಹರಿಹರ ನಗರಸಭೆಗೆ ಹತ್ತು ರುಪಾಯಿ ನೀಡಬೇಕು. ತಯಾರು ಮಾಡುವುದಕ್ಕಿಂತ ಅಳವಡಿಸುವ ಖರ್ಚು ಅಧಿಕವಾಗಿದೆ. ಅಂದಾಜು 10×15 ಅಳತೆಯ ಫ್ಲೆಕ್ಸ್ ಅಳವಡಿಸಲು ನಗರ ಸಭೆಗೆ 1190 ಹಣವನ್ನು ಪಾವತಿಸಬೇಕಾಗಿದೆ. 150 ಅಡಿ ಅಳತೆಯ ಪ್ಲೆಕ್ಸ್ ತಯಾರಿಸಲು ತಗುಲಿದ್ದ ವೆಚ್ಚ 1200 ರೂಪಾಯಿಗಳು. ಆದರೆ ಅನುಮತಿ ಪಡೆಯಲು ತಗುಲಿದ ವೆಚ್ಚ 1190 ರೂಪಾಯಿಗಳು. ಇದು ಯಾವ ಸೀಮೆಯ ನ್ಯಾಯ ಸ್ವಾಮಿ.
ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಊರಮ್ಮ ದೇವಿಯ ಜಾತ್ರೆಯನ್ನು ಸಡಗರ - ಸಂಭ್ರಮದಿಂದ ಆಚರಣೆ ಮಾಡಲು ನಗರ ಸಭೆಯವರು ಸಹಕಾರ ನೀಡಬೇಕು. ಮಾನ್ಯ ಜಿಲ್ಲಾಧಿಕಾರಿಗಳ ಮಾತನ್ನು ನೆಪವಾಗಿ ಇಟ್ಟುಕೊಂಡು ಹಗಲು ದರೋಡೆಗೆ ಇಳಿಯಬಾರದು. ಯಾರಿಗೂ ಇಲ್ಲದ ಕಿರಿಕಿರಿ ನಮ್ಮ ಹಿಂದುಗಳ ಹಬ್ಬಕ್ಕೆ ಯಾಕೆ ಸ್ವಾಮಿ.! ನಾವು ಹಬ್ಬ- ಹರಿದಿನಗಳನ್ನು ಸಂಭ್ರಮದಿಂದ ಆಚರಿಸಬಾರದೇ? ಇಲ್ಲದ ನೆಪಗಳನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ಇಲ್ಲದ ಹೇರಿಕೆಗಳನ್ನು ಹೇರಬೇಡಿ. ಹಬ್ಬದ ಸಂಭ್ರಮದಲ್ಲಿ ಪ್ಲೆಕ್ಸ್ ಗಳನ್ನು ಅಳವಡಿಸಲು ದೇವಿಯ ಭಕ್ತರಿಗೆ ಸಹಕಾರ ನೀಡಿ. ಅನುಮತಿ ನೀಡುವ ಸಂದರ್ಭದಲ್ಲಿ 150 ರಿಂದ 200 ರೂಪಾಯಿ ಹಣವನ್ನು ಪಡೆಯಿರಿ. ಅದು ಬಿಟ್ಟು ಜಿಲ್ಲಾಧಿಕಾರಿಗಳ ಮಾತನ್ನೇ ಮುಂದಿಟ್ಟುಕೊಂಡು ಹಗಲು ದರವರಿಗೆ ಇಳಿಯಬೇಡಿ. ದೇವಿಯ ಭಕ್ತರು ಎಲ್ಲಾ ಸಂದರ್ಭದಲ್ಲಿ ಪ್ಲೆಕ್ಸ್ ಅಳವಡಿಸುವುದಿಲ್ಲ. ಏನೋ ಗ್ರಾಮ ದೇವತೆಯ ಹಬ್ಬ ಎಂದು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಪ್ಲೆಕ್ಸ್ ಗಳನ್ನು ಅಳವಡಿಸಲಾಗುತ್ತಿದೆ. ಇದು ಒಂದು ರೀತಿ ಸಂಭ್ರಮ. ಇವುಗಳು ಇದ್ದಾಗ ಹಬ್ಬಕ್ಕೆ ಒಂದು ಕಳೆ. ಇಲ್ಲದಿದ್ದರೆ ಹಬ್ಬ ಬಿಕೋ ಎನ್ನುತ್ತದೆ. ಇಂತಹ ಸಂದರ್ಭದಲ್ಲಿ ತೊಂದರೆ ನೀಡಬೇಡಿ. ಕೆಲವು ಸಲಹೆಗಳನ್ನು ನೀಡಿ. ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ. ವಿದ್ಯುತ್ ಕಂಬಗಳಿಗೆ ತಾಗದಂತೆ, ವಿದ್ಯುತ್ ದೀಪ ಅಲಂಕಾರವು ಮರೆಯಾಗದಂತೆ, ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಹೀಗೆ ಹಲವು ರೀತಿಯ ಸಲಹೆಗಳನ್ನ ನೀಡಿ ಅವುಗಳನ್ನು ಪಾಲನೆ ಮಾಡಲು ತಿಳಿಸಿ .ಅದು ಬಿಟ್ಟು ಹಗಲು ದರೋಡೆಗೆ ಇಳಿಯಬೇಡಿ. ಒಂದು ವಾರ, ಹತ್ತು ದಿನಗಳ ಮಟ್ಟಿಗೆ ರಿಯಾಯಿತಿ ನೀಡಿ ಹಬ್ಬದ ಸಂಭ್ರಮಕ್ಕೆ ನೀವು ಕಾರಣರಾಗಿ.
ಹಬ್ಬದ ಯಶಸ್ವಿಗೆ ಏನು ಬೇಕು ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ನಗರದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳ ಅಳವಡಿಕೆ, ಹಬ್ಬದ ಸಂದರ್ಭದಲ್ಲಿ ಕರೆಂಟು ಕೈಕೊಡದಂತೆ, ಸಾಂಕ್ರಾಮಿಕ ರೋಗ ಹರಡದಂತೆ, ಸಂಚಾರಿ ಮಾರ್ಗದಲ್ಲಿ ಬದಲಾವಣೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಹೀಗೆ ನಿಮ್ಮಿಂದ ಹತ್ತು-ಹಲವು ಕಾರ್ಯಗಳು ಆಗಬೇಕಾಗಿದೆ. ಅದರ ಕಡೆ ಗಮನ ನೀಡಿ. ಸುಮ್ಮನೆ ಭಕ್ತರಿಗೆ ಕಿರಿಕಿರಿ ಉಂಟುಮಾಡುವ ಯೋಚನೆಯನ್ನು ಬಿಡಿ. ಹಬ್ಬದ ಯಶಸ್ವಿಗೆ ನೀವು ಕಾರಣರಾಗಿ ಜನತೆಯಿಂದ ಪ್ರಶಂಸೆಯ ಮಾತುಗಳನ್ನು ಪಡೆಯಿರಿ.
ಹಬ್ಬದ ಸಂಭ್ರಮದಲ್ಲಿರುವ ಊರಮ್ಮ ದೇವಿಯ ಭಕ್ತರಿಗೆ ನಗರಸಭೆಯವರ ಸಹಕಾರವಿರಲಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
0 Comments