ಪ್ರಭು ಕೆಳಗಿನ ಮನೆ ವರ್ಗಾವಣೆ ಬೆನ್ನಲ್ಲೇ ಶುರುವಾಯಿತು ಅಕ್ರಮ ಚಟುವಟಿಕೆಗಳು.!?


ಮಂದಾರ ನ್ಯೂಸ್, ಹರಿಹರ: ಹರಿಹರ ತಾಲೂಕು ಮಲೆಬೆನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಅಕ್ರಮ ಚಟುವಟಿಕೆಗಳು ಆರಂಭವಾಗಿದೆ. 

ಈ ಹಿಂದೆ ಇದೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭು ಕೆಳಗಿನ ಮನೆ ಅವರು ತಾವು ಇರುವಷ್ಟು ದಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿದರು. ಇವರು ಮಲೇಬೆನ್ನೂರು ಜನತೆಯ ಅಚ್ಚು ಮೆಚ್ಚಿನ ಪೊಲೀಸ್ ಅಧಿಕಾರಿಯಾಗಿ ಜನ ಮನ್ನಣೆ ಪಡೆದಿದ್ದರು. 
ಇವರು ಅಕ್ರಮ ಮರಳು, ಮಟ್ಕಾ, ಇಸ್ಪೀಟ್, ಅನ್ನಭಾಗ್ಯ ಅಕ್ಕಿ ದಂಧೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದರು. ಈಗ ಇವರು ವರ್ಗಾವಣೆ ಆಗುತ್ತಿದ್ದಂತೆ ಒಂದೊಂದೇ ಅಕ್ರಮ ಚಟುವಟಿಕೆಗಳು ಆರಂಭವಾಗಿದೆ. ಮಲೇಬೆನ್ನೂರು ಗುಡ್ಡದ ಮೇಲೆ ಅಕ್ರಮ ಇಸ್ಪೀಟ್ ಆಟ ಕಳೆದ ಒಂದು ತಿಂಗಳಿಂದ ನಿರಂತರವಾಗಿ ನಡೆಯುತ್ತಿದೆ. ಇವರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗ್ರಾಮಗಳಲ್ಲಿ ಮಟ್ಕಾ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟವಾಗುತ್ತಿದೆ. ಇವೆಲ್ಲ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕಾದ ಪೊಲೀಸ ಇಲಾಖೆ ಮೌನಕ್ಕೆ ಶರಣಾಗಿದೆ. 
ಮೆಲೇಬೆನ್ನೂರು ಪೊಲೀಸ್ ಠಾಣೆಗೆ ಪ್ರಭು ಕೆಳಗಿನ ಮನೆ ಇವರ ವರ್ಗಾವಣೆಯ ನಂತರ ಠಾಣಾಧಿಕಾರಿಯಾಗಿ ಬಂದಿರುವ ಹಾರೂನ್ ಅಖ್ತರ್ ಅವರು ಮಲೇಬೆನ್ನೂರು ಪೊಲೀಸ್ ಠಾಣಾ, ಸರಹದ್ದಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಮುಂದಾಗಬೇಕಾಗಿದೆ. ಮಲೇಬೆನ್ನೂರು ಪೋಲಿಸ್ ಠಾಣಾ ಸರಹದ್ದು ಅಕ್ರಮ ಚಟುವಟಿಕೆಗಳಿಂದ ಮುಕ್ತವಾಗಬೇಕಾಗಿದೆ. ಆ ನಿಟ್ಟಿನಲ್ಲಿ ನೂತನ ಪಿಎಸ್ಐ ಅವರು ದಿಟ್ಟ ಹೆಜ್ಜೆ ಇಡಲಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.

Post a Comment

0 Comments