ಹರಿಹರ ತಾಲೂಕಿನಾದ್ಯಂತ ಕಾಳ ಸಂತೆಯಲ್ಲಿ ಅನ್ನಭಾಗ್ಯಕ್ಕೆ ಮಾರಾಟ. ಕಡಿವಾಣ ಹಾಕುವಲ್ಲಿ ಆಹಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ.!


ಮಂದಾರ ನ್ಯೂಸ್ ಹರಿಹರ: ಬಡವರ ಹಸಿವನ್ನು ನೀಗಿಸಲು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ಜಾರಿಗೆ ತಂದರು.

ಬಿಪಿಎಲ್ ಕಾರ್ಡು ಹೊಂದಿರುವ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತಿದೆ ಇದರ ಜೊತೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. 

ಸದ್ಯ ರಾಜ್ಯ ಸರ್ಕಾರ 7 ಕೆಜಿ ಅಕ್ಕಿ ಮೂರು ಕೆಜಿ ರಾಗಿಯನ್ನು ನೀಡುತ್ತಿದ್ದರೆ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ನೀಡುತ್ತಿದೆ.

ಯಾವ ಉದ್ದೇಶವನ್ನ ಇಟ್ಟುಕೊಂಡು ಯೋಜನೆಯನ್ನು ಜಾರಿಗೆ ತರಲಾಯಿತು ಆ ಯೋಜನೆ ಕೆಲವು ದಂದೆಕೋರರಿಗೆ ವರವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಈ ಯೋಜನೆ ಕಳ್ಳರ ಪಾಲಾಗುತ್ತಿದೆ. 
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ  ಜಿಲ್ಲೆಯ ಹರಿಹರ. ಹರಿಹರ ತಾಲೂಕಿನಾದ್ಯಂತ ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ.

ಹರಿಹರ ನಗರ ಸೇರಿದಂತೆ ತಾಲೂಕಿನ ಕೆಲವು( ಹನಗವಾಡಿ, ಬೆಳ್ಳೂಡಿ , ರಾಜನಹಳ್ಳಿ, ಭಾನುವಳ್ಳಿ, ಸಾರಥಿ, ಕೊಂಡಜ್ಜಿ, ಗುತ್ತೂರು, ಬನ್ನಿ ಕೊಡು, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ) ದಾವಣಗೆರೆಯ ಕೆಲವು ದಂಧೆ ಕೋರರು ಸೇರಿದಂತೆ ಹರಿಹರದ ಕೆಲವು ದಂದೆ ಕೋರರು ತಮ್ಮ ಆಟೋಗಳು ಹಾಗೂ ಓಮಿನಿಗಳನ್ನು ಗ್ರಾಮೀಣ ಭಾಗದಕ್ಕೆ ಕಳುಹಿಸಿ ಅಲ್ಲಿನ ಮುಗ್ಧ ಜನರಿಗೆ ಹಣದ ಆಮಿಷವನ್ನು ನೀಡಿ ಕಡಿಮೆ ಬೆಲೆಗೆ ಅಕ್ಕಿಯನ್ನು ಖರೀದಿ ಮಾಡುತ್ತಿದ್ದಾರೆ.

ಪ್ರತಿ ತಿಂಗಳು 10 ಮತ್ತು 11ನೇ ತಾರೀಖಿನಿಂದ ಈ ದಂದೆ ಆರಂಭವಾಗುತ್ತದೆ. ಸುಮಾರು ಒಂದು ವಾರಗಳ ಕಾಲ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಖರೀದಿ ಮಾಡಿ ಸಾಗಾಣಿಕೆ ಮಾಡುತ್ತಾರೆ.
ಈ ಹಿಂದಿನಿಂದಲೂ ಎಪಿಎಂಸಿ ಆವರಣದಲ್ಲಿರುವ ಆಹಾರ ಇಲಾಖೆಯ ಉಗ್ರಾಣದಿಂದ ನೇರವಾಗಿ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಆಗುತ್ತಿದೆ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬಂದಿತ್ತು. ಆದರೆ ಇದೀಗ ಅಂದರೆ ಕಳೆದ ನಾಲ್ಕು ತಿಂಗಳಿಂದ ಎಪಿಎಂಸಿ ಆವರಣದಲ್ಲಿರುವ ಉಗ್ರಾಣದಿಂದ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಆಗುವುದು ನಿಂತಿದೆ. ಇದರಿಂದ ಕೆಲವು ನ್ಯಾಯಬೆಲೆ ಅಂಗಡಿಯವರಿಗೆ ದಿಕ್ಕು ತೋಚದಂತಾಗಿದೆ. ಇದೀಗ ಕೆಲವು ನ್ಯಾಯಬೆಲೆ ಅಂಗಡಿಯವರು ನೇರವಾಗಿ ದಂದೆ ಕೋರರಿಗೆ ಅಕ್ಕಿಯನ್ನು ತಡರಾತ್ರಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವು ಪ್ರಬಲವಾಗಿ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕೆಲವು ನ್ಯಾಯಬೆಲೆ ಅಂಗಡಿಯ ಮಾಲೀಕರು ಸರ್ಕಾರದ ಯೋಜನೆಯನ್ನು ಜನರಲ್ಲಿ, ಜನರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯವನ್ನ ಮೂಡಿಸಿ. ಈ ಬಾರಿ ಕಳಪೆ ಗುಣಮಟ್ಟದ ಅಕ್ಕಿ ಬಂದಿದೆ ಎಂದು ಯಾವುದೋ ಹಿಂದಿನ ವರ್ಷದ ಹುಳು ಹಿಡಿದಿರುವ ಅಕ್ಕಿಯನ್ನು ತೋರಿಸಿ ಜನರ ಮನಸ್ಸನ್ನು ಹಾಗೂ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುವ ಮೂಲಕ ತಮ್ಮ ಸ್ವಾರ್ಥ ಸಾಧನೆಯನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಕಾಳ ಸಂತೆಯಲ್ಲಿ ಖರೀದಿ ಮಾಡುವ ದಂದೆಕೋರರಿಗೆ ಮಾರಾಟ ಮಾಡುತ್ತಿದ್ದಾರೆ .
ಮಾನ್ಯ ಜಿಲ್ಲಾಧಿಕಾರಿಗಳೇ.. ನ್ಯಾಯಬೆಲೆ ಅಂಗಡಿಗಳು ನಿಮ್ಮ ಅಧೀನದಲ್ಲಿರುವ ಆಹಾರ  ಇಲಾಖೆಯಿಂದ ಅನುಮತಿಯನ್ನು ಪಡೆದಿರುತ್ತಾರೆ ಅಲ್ಲವೇ? ಆದರೆ ಅದೇ ನ್ಯಾಯಬೆಲೆ ಅಂಗಡಿಯ ಮಾಲೀಕರು ಸರ್ಕಾರದ ಯೋಜನೆಯನ್ನು ಅಪಪ್ರಚಾರ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಸರ್ಕಾರದ ನೌಕರರಿಗೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರ ಜೊತೆಗೆ ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇದು ನಿಮ್ಮ ಗಮನದಲ್ಲಿ ಇಲ್ಲವೇ? ಯಾರೇ ಆಗಲಿ ( ಸರ್ಕಾರದ ಪ್ರತಿನಿಧಿಗಳು, ಸರಕಾರಿ ನೌಕರರು, ಅನುದಾನಿತ ಸಂಸ್ಥೆಗಳು ) ಆಳುವಂತ ಸರ್ಕಾರದ ರೀತಿ- ನೀತಿಗಳನ್ನು ಟೀಕೆಸುವ ಮಟ್ಟಕ್ಕೆ ಹೋಗೋದಿಲ್ಲ ಅಂದುಕೊಂಡಿದ್ದೇವೆ. ಆದರೆ ಆಹಾರ ಇಲಾಖೆಯ ಅಧೀನದಲ್ಲಿರುವ ಕೆಲವು ನ್ಯಾಯಬೆಲೆ ಅಂಗಡಿಯ ಮಾಲೀಕರು ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ಯೋಜನೆಗಳನ್ನು ಅಪಪ್ರಚಾರ ಮಾಡುವ ಮೂಲಕ ಕಾಲ ಸಂತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ. 

ಕಾಳ ಸಂತೆಯಲ್ಲಿ ಅನ್ನ ಭಾಗ್ಯ ಅಕ್ಕಿ ಮಾರಾಟವನ್ನು ತಡೆಯುವಲ್ಲಿ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸದೇ ಇರುವುದು ಈ ದಂದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯಲು ನೇರ ಕಾರಣವಾಗಿದೆ.

ಹರಿಹರ ತಾಲೂಕಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಅನ್ನಭಾಗ್ಯ ಅಕ್ಕಿಯ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವ ಇಂದಿನ ಮರ್ಮವನ್ನು ಮಾನ್ಯ ಜಿಲ್ಲಾಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾಗಿದೆ.
ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಕನಸಿನ ಯೋಜನೆ ಯಾವ ರೀತಿಯಲ್ಲಿ ದಾರಿ ತಪ್ಪುತ್ತಿದೆ ಎಂಬುದನ್ನು ಮಧ್ಯ ಕರ್ನಾಟಕದ ಕೇಂದ್ರಬಿಂದು ಹರಿಹರದ ಸರ್ಕಾರದ ಅಧಿಕಾರಿಗಳಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಿ.

ಇನ್ನು ಮುಂದಾದರೂ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಪೋಲಿಸ್ ವರಿಷ್ಠಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇಂತಹ ಅಕ್ರಮ ದಂಧೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಡಕ್ಕಾಗಿ ಸೂಚನೆಯನ್ನು ನೀಡುತ್ತಾರ ಕಾದು ನೋಡಬೇಕಾಗಿದೆ. ಮುಂದಿನ ದಿನದಲ್ಲಿ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸುವ ಮೂಲಕ ಅನ್ನಭಾಗ್ಯ ಅಕ್ಕಿ ಮಾರಾಟಕ್ಕೆ ಕಡಿವಾಣ ಹಾಕಬಹುದೇ?........

Post a Comment

0 Comments