ಮಂದಾರ ನ್ಯೂಸ್, ಕಡರನಾಯ್ಕನಹಳ್ಳಿ: ಈ ದೇಶ ಮತ್ತು ನಾಡು ಹೆಮ್ಮೆ ಪಡುವಂತ ಕರ್ನಲ್ ಎಂ ಬಿ ರವೀಂದ್ರನಾಥ ಕಾರ್ಗಿಲ್ ಯುದ್ದದಲ್ಲಿ ಶೌರ್ಯ ಪ್ರದರ್ಶಿಸಿದರು.ಇಂದಿನ ಯುವ ಪೀಳಿಗೆಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಶಾಸಕ ಬಿಪಿ ಹರೀಶ್ ಮಾತನಾಡಿದರು.
ಗ್ರಾಮದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ಅಂಗವಾಗಿ ದಿ ಕರ್ನಲ್ ಎಂ ಬಿ ರವೀಂದ್ರನಾಥ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕರ್ನಲ್ ಎಂ.ಬಿ. ರವೀಂದ್ರನಾಥ್ ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದವರು.
ಅವರು 2ನೇ ಬೆಟಾಲಿಯನ್, ರಜಪೂತಾನಾ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿಯಾಗಿದ್ದರು ಮತ್ತು ಟೋಲೋಲಿಂಗ್, ಪಾಯಿಂಟ್ 4590 ಮತ್ತು ಬ್ಲ್ಯಾಕ್ ರಾಕ್‌ನಂತಹ ಪ್ರಮುಖ ಬೆಟ್ಟಗಳನ್ನು ವಾಪಸ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಇವರ ಧೈರ್ಯ, ಶೌರ್ಯದ ಹೋರಾಟಕ್ಕೆ ಭಾರತ ಸರ್ಕಾರ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ದಾವಣಗೆರೆ ಜಿಲ್ಲೆಯ ಹೊಳೆಸಿರಿಗೆರೆ ಗ್ರಾಮದಲ್ಲಿ ಜನಿಸಿದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಅವರು ಟೋಲೋಲಿಂಗ್ ಮೇಲಿನ ದಾಳಿಯ ಸಮಯದಲ್ಲಿ ತಮ್ಮ ಬೆಟಾಲಿಯನ್‌ನ ತಂಡಗಳನ್ನು ಮುನ್ನಡೆಸಿದರು ಮತ್ತು ನಂತರ ಬ್ಲ್ಯಾಕ್ ರಾಕ್ ಅನ್ನು ವಶಪಡಿಸಿಕೊ್ಳುವಲ್ಲಿ ಯಶಸ್ವಿಯಾದರು . ಅವರ ಶೌರ್ಯ ಮತ್ತು ಸೇವೆಗಾಗಿ, ಅವರಿಗೆ ಆಗಸ್ಟ್ 15, 1999 ರಂದು ವೀರ ಚಕ್ರವನ್ನು ನೀಡಲಾಯಿತು. ರವೀಂದ್ರನಾಥ್ ಅವರು ಏಪ್ರಿಲ್ 8, 2018 ರಂದು ನಿಧನರಾದರೂ ಸಹ ಚಿರಸ್ಥಾಯಿಯಾಗಿ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಬೆಂಗಳೂರಿನ ಇಂಜಿನಿಯರ್ ರೋಹಿತ್ ನಾಗ್ ಮಾತನಾಡಿದರು.
ಕರ್ನಲ್ ಎಂ ಬಿ ರವೀಂದ್ರನಾಥ ಸಹೋದರ ಮಾಗೋಡು ಓಂಕಾರಪ್ಪ ಮಾತನಾಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅನಗವಾಡಿ ವೀರೇಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಐರಣಿ ಅಣ್ಣೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್, ಕಾರ್ಯದರ್ಶಿ ಹುಗ್ಗಿ ಮಹಾಂತೇಶ್,ಜಿಗಳಿ ಹನುಮಗೌಡ, ಮಹಿಳಾ ಮೋರ್ಚಾ ಕಾರ್ಯದರ್ಶಿ ಸಾಕ್ಷಿ, ಸದಸ್ಯೆ ಅಂಬುಜಾ ಕಾಟ್ವೆ,ಅಶ್ವಿನಿ ಅರುಣ್ ಕುಮಾರ್, ಟಿ ಧನರಾಜ್, ಕುಂದೂರು ಮಂಜಪ್ಪ ಭಾಗವಹಿಸಿದ್ದರು.
ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಕರ್ನಲ್ ರವೀಂದ್ರನಾಥ್ ಸಮಾದಿ ಸ್ಥಳದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
0 Comments