ಕೊಡುಗೈ ದಾನಿ ಹೇಮಂತ್ ಕುಮಾರ್ ಎಚ್ ಜಿ...!

ಮಂದಾರ ನ್ಯೂಸ್, ಹರಿಹರ : ಶ್ರೀಮಂತಿಕೆ ಅನ್ನುವುದು ನಮ್ಮ ನಿತ್ಯ ಜೀವನದ ಆಚಾರ- ವಿಚಾರದಲ್ಲಿ ಇರಬೇಕು. ಶಿಕ್ಷಣ ಎಂಬುದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಿರಬೇಕು. 

ಮಾನವೀಯ ಗುಣಗಳು, ಸರಳತೆಯ ಜೀವನ ನಮ್ಮ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ.

ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ಮನೆಯಲ್ಲಿ ದೊರೆತಾಗ ಮಾತ್ರ ಮೇಲಿನ ಗುಣಗಳನ್ನು ಮೈಗೂಡಿಸಲು ಸಾಧ್ಯವಾಗುತ್ತದೆ.
"ಮನೆಯೇ ಮೊದಲ ಪಾಠಶಾಲೆ, ಜನನೀಯೇ ಮೊದಲ ಗುರು" ಜನನಿಯಿಂದ ಕಲಿತ ಸಂಸ್ಕಾರಯುತ ಶಿಕ್ಷಣವೇ ಉತ್ತಮ ನಾಗರಿಕ ಪ್ರಪಂಚಕ್ಕೆ ಬುನಾದಿ.

ಹರಿಹರ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೇಮಂತ್ ಕುಮಾರ್ ಇವರು ಈ ಮೇಲಿನ ಗುಣಗಳನ್ನು ಮೈಗೂಡಿಸಿಕೊಂಡ ಕಾರಣ ಇನ್ನೊಬ್ಬರ ಕಷ್ಟವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿದೆ.

ಎಚ್ ಟಿ ಗೋವಿಂದಯ್ಯ, ಗಂಗಮ್ಮ ಇವರ ಸುಪುತ್ರರಾಗಿ ಜನಿಸಿದ ಹೇಮಂತ್ ರಾಜ್ ತಮ್ಮ ತಂದೆ ತಾಯಿಯಿಂದಲೇ ಸಂಸ್ಕಾರಯುತ ಶಿಕ್ಷಣವನ್ನು ಬಾಲ್ಯದಿಂದ ಪಡೆದಿದ್ದರು.


ಎಚ್ ಟಿ ಗೋವಿಂದಯ್ಯ ಹಾಗೂ ಗಂಗಮ್ಮ ಇವರು ವೃತ್ತಿಯಲ್ಲಿ ಶಿಕ್ಷಕರು. ಮಣ್ಣಿನ ಮುದ್ದಿನಂತಿರುವ ಮಕ್ಕಳನ್ನು ತಿದ್ದಿ-ತೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ದೊಡ್ಡ ಜವಾಬ್ದಾರಿಯನ್ನ ಹೊಂದಿದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಈ ದಂಪತಿಗಳ ಪುತ್ರನೇ ಹೇಮಂತ್ ಕುಮಾರ್. ಹೇಳಿ,ಕೇಳಿ ಶಿಕ್ಷಕ ದಂಪತಿಗಳ ಪುತ್ರ ಹೇಮಂತ್ ರಾಜ್ ಮೌಲ್ಯಯುತ ಗುಣಗಳನ್ನು ಬಾಲ್ಯದಿಂದ ಕಲಿಯಲಿದ್ದರೆ ಹೇಗೆ ಹೇಳಿ. ಇಲ್ಲಿಂದಲೇ ಆರಂಭವಾದ ಮೌಲಯುತ ಶಿಕ್ಷಣ ಉತ್ತಮ ನಾಗರಿಕ ಪ್ರಪಂಚಕ್ಕೆ ಸಂಸ್ಕಾರಯುತ ಶಿಕ್ಷಣದ ಕೊಡುಗೆಯನ್ನು ನೀಡಲು ಸಾಧ್ಯವಾಯಿತು,ಹೆತ್ತವರ ಆಶೆ ಈಡೇರಿದಂತಾಯಿತು.
ಹೇಮಂತ್ ಕುಮಾರ್ ಅವರು ಬಾಲ್ಯದಿಂದಲೇ ಮಾನವೀಯ ಮೌಲ್ಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದವರು. ಕಷ್ಟ ಎಂದು ಇವರ ಬಳಿಗೆ ಬಂದವರಿಗೆ ತಮ್ಮ ಕೈಲಾದ ಸಹಾಯದ ಹಸ್ತ ನೀಡುತ್ತಿದ್ದರು. 

ಹಳ್ಳದ ಕೇರಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಹೇಮಂತ್ ಕುಮಾರ್ ಅವರು, ಪ್ರೌಢ ಶಿಕ್ಷಣವನ್ನ ಡಿ ಆರ್ ಎಂ ಪ್ರೌಢಶಾಲೆಯಲ್ಲಿ ಮುಗಿಸಿದರು. ಐಟಿಐ ಶಿಕ್ಷಣವನ್ನು ಮುಗಿಸಿ ತದನಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಹರಿಹರ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ 35 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ವಿಶ್ರಾಂತಿ ಜೀವನಕ್ಕೆ 1 ವರ್ಷ ಎಂಟು ತಿಂಗಳು ಬಾಕಿ ಉಳಿದಿದ್ದು, ಮುಂದಿನ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದರು.


ತಮ್ಮ ಅಧಿಕಾರ ಅವಧಿಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಮತ್ತು ಅವರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡುವ ಅಭ್ಯಾಸವನ್ನು ಮಾಡಿಕೊಂಡು ಬಂದವರು. ಇಷ್ಟು ಸುದೀರ್ಘ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ಜನಸ್ನೇಹಿ ಅಧಿಕಾರಿ ಎನ್ನಿಸಿಕೊಂಡರು.

ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ಎರಡು ಕಾಲುಗಳ ಸ್ವಾಧೀನವನ್ನ ಕಳೆದುಕೊಂಡ ,ವಿಕಲಚೇತನ ಸಿದ್ದೇಶ್ ಇವರು ಸಹಾಯದ ಹಸ್ತವನ್ನು ಬೇಡಿ ಹೇಮಂತ್ ಕುಮಾರ್ ಅವರ ಮನೆಗೆ ಬಂದರು, ಏನಾದರೂ ಸಹಾಯ  ಮಾಡುವಂತೆ ವಿನಂತಿಸಿಕೊಂಡರು. ಅಸಹಾಯಕ ಪರಿಸ್ಥಿತಿಯಲ್ಲಿದ್ದ ಸಿದ್ದೇಶ್ವರನ ಗಮನಿಸಿದ ಹೇಮಂತ್ ಕುಮಾರ್ ಅವರು ಕೂಡಲೇ ಅವರನ್ನು ಮನೆಯ ಒಳಗೆ ಕರೆಸಿಕೊಂಡು ತಮ್ಮ ಪಕ್ಕದಲ್ಲಿ ಕುರಿಸಿಕೊಂಡು, ಊಟೋಪಚಾರದ ಸೇವೆಯನ್ನು ಮಾಡಿ, ಅವರ ಕಷ್ಟವನ್ನು ಆಲಿಸಿದರು.

ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡ ಸಿದ್ದೇಶ್ ಅವರಿಗೆ 10000ಗಳ ಧನಸಹಾಯವನ್ನು ನೀಡಿ ,ಮುಂದೆ ಇನ್ನೂ ಹೆಚ್ಚಿನ ಸಹಾಯ ಮಾಡುವ ಭರವಸೆಯನ್ನ ನೀಡಿದರು.
ಹೀಗೆ ಹೇಮಂತ್ ರಾಜ್ ಅವರು ಅಸಹಾಯಕ ಪರಿಸ್ಥಿತಿಯಲ್ಲಿರುವ ಕಡು ಬಡವರಿಗೆ ಯಾವುದೇ ಪ್ರಚಾರದ ಹಂಗಿಲ್ಲದೆ ಕಳೆದ 35 ವರ್ಷದಿಂದ ನಿರಂತರವಾದ ಸೇವೆಯನ್ನ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಅದೆಷ್ಟು ಜನರಿಗೆ ಸರ್ಕಾರಕ್ಕೆ ಸಂದಾಯ ಮಾಡುವ ಹಣವನ್ನು ತಾವೇ ಕಟ್ಟಿ ಜನರಿಗೆ ಉತ್ತಮ ಸೇವೆಯನ್ನು ಒದಗಿಸಿದ್ದಾರೆ. ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವುದರ ಜೊತೆಗೆ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ ಹೇಮಂತ್ ಕುಮಾರ್. ಕಷ್ಟ ಇದೆ ಎಂದು ಹೇಳಿಕೊಂಡು ಬರುವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಕೊಡಗೈ ದಾನಿ ಎನಿಸಿಕೊಂಡಿದ್ದಾರೆ.

ಶಿಕ್ಷಣ ಮಾನವೀಯ ಮೌಲ್ಯಗಳನ್ನ ಎತ್ತಿ ಹಿಡಿಯುವಂತಿರಬೇಕು. ಅಸಹಾಯಕರಿಗೆ ಸಹಾಯ ಮಾಡುವ ಹೃದಯ ಶ್ರೀಮಂತಿಕೆ ಹೊಂದಿರಬೇಕು. ಇನ್ನೊಬ್ಬರ ಕಷ್ಟ ನನ್ನದೇ ಕಷ್ಟ ಎಂಬ ಭಾವನೆ ಇರಬೇಕು. ಹಾಗಾದಾಗ ಮಾತ್ರ ಅವರು ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಹೆತ್ತವರ ಮೊಗದಲ್ಲಿ ನೆಮ್ಮದಿಯ ಮಂದಹಾಸ ಮೂಡುತ್ತದೆ.

ಹರಿಹರ ತಾಲೂಕು ಗ್ರಾಮ ಆಡಳಿತ ಅಧಿಕಾರಿ ಹೇಮಂತ್ ಕುಮಾರ್  ಎಚ್ ಜಿ ಅವರು ಹೃದಯ ಶ್ರೀಮಂತಿಕೆ ಹೊಂದಿರುವ, ಮಾನವೀಯ ಮೌಲ್ಯಗಳನ್ನ ಎತ್ತಿ ಹಿಡಿಯುವ, ಸರಳತೆಯಿಂದ ಇನ್ನಷ್ಟು ಜನರಿಗೆ ಸಾಹುಕಾರರಾಗಿ ಇನ್ನಷ್ಟು ಜನರಿಗೆ ಸಹಾಯ ಮಾಡುವ ಶಕ್ತಿ ಆ ಭಗವಂತ ನೀಡಲಿ ಎಂದು ಆಶಿಸುತ್ತಾ, ಈ ಬರಹಕ್ಕೆ ವಿರಾಮ ನೀಡುತ್ತಿದ್ದೇನೆ.......

Post a Comment

0 Comments