ನಾಳೆ ಹರಿಹರ ನಗರಕ್ಕೆ ನಿಖಿಲ್ ಕುಮಾರಸ್ವಾಮಿ. "ಜನರೊಂದಿಗೆ ಜನತಾದಳ" ಬೃಹತ್ ಕಾರ್ಯಕರ್ತರ ಸಮಾವೇಶ.!


ಮಂದಾರ ನ್ಯೂಸ್ :ಜನರೊಂದಿಗೆ ಜನತಾದಳ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಆ.12 ರಂದು ನಗರದ ಹಳೆ ಪಿ ಬಿ ರಸ್ತೆಯಲ್ಲಿ ಇರುವ ಭಾಗೀರಥಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಎಚ್ ಎಸ್ ಶಿವಶಂಕರ್ ಅವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡರು.

ನಗರದ ಜೆಡಿಎಸ್ ಕಚೇರಿಯ ಆವರಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ  ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಅಭಿಯಾನದೊಂದಿಗೆ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ರಾಜ್ಯಾದ್ಯಂತ ನಡೆಸುತ್ತಿದ್ದಾರೆ. ಅದರಂತೆ ಇದೇ ಆಗಸ್ಟ್ 12ರಂದು ಹರಿಹರ ವಿಧಾನಸಭಾ ಕ್ಷೇತ್ರಕ್ಕೂ ಆಗಮಿಸಲಿದ್ದಾರೆ ಎಂದು ಹೇಳಿದರು. 
ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆಗೆ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಲಿದ್ದು ಅಂದು ನಗರದ ಪರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಬೃಹತ್ ಬೈಕ್ ರ್ಯಾಲಿಯ ಮೂಲಕ ಅದ್ದೂರಿ ಮೆರವಣಿಗೆಯೊಂದಿಗೆ ಹೊರಟು ಹರಿಹರೇಶ್ವರ ಸ್ವಾಮಿಯ ಸನ್ನಿಧಾನಕ್ಕೆ ತೆರಳಿ ಸ್ವಾಮಿಯ ದರ್ಶನವನ್ನು ಪಡೆದು ಅಲ್ಲಿಂದ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯ ಮೂಲಕ ನಗರದ ಭಾಗೀರಥಿ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದರು. 
ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ಬರಬೇಕು ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಮಾವೇಶ ಇದಾಗಿದೆ ಎಂದರು. 

ಮಾಜಿ ಮುಖ್ಯಮಂತ್ರಿಗಳು ಹಾಲಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನ ಜಾರಿಗೆ ತರುವ ಮೂಲಕ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತಿದ್ದರು. ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಅನೇಕ ಜನಪರ ಯೋಜನೆಗಳನ್ನ ಜಾರಿಗೆ ತರುವ ಮೂಲಕ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಬೇಕಾಗಿದೆ ಎಂದರು.
ಜೆಡಿಎಸ್ ಪಕ್ಷವು ಜನರೊಂದಿಗೆ ಸದಾ ಇದೆ. ಜನರ ಸಮಸ್ಯೆಗಳಿಗೆ ಪರಿಹರಿಸುವಲ್ಲಿ ಸದಾ ಮುಂದೆ ಇರುತ್ತದೆ ಎಂಬ ಉದ್ದೇಶದಿಂದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಇಲ್ಲ ಹಾಗೂ ತಾಲೂಕ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ನೇತೃತ್ವದಲ್ಲಿ ಸಭೆ- ಸಮಾರಂಭಗಳನ್ನು ಆಯೋಜಿಸುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ.

ಹರಿಹರದಲ್ಲಿ ನಡೆಯಲಿರುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ವೆಂಕಟರಾಮ ನಾಡಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶಪ್ಪನವರ್, ಆಲ್ಕೋಡ್ ಹನುಮಂತಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾಪೂರ ನಾಯ್ಕ್, ನೇಮಿರಾಜ್ ನಾಯ್ಕ್, ಬೋಜೇಗೌಡ ,ಮಾಜಿ ಎಂಎಲ್ಎ ಗಳಾದ ರಾಜ ವೆಂಕಟಪ್ಪ ನಾಯ್ಕ್, ಪಾವಗಡ ತಿಮ್ಮರಾಯಪ್ಪ, ಮಾಜಿ  ಎಂಎಲ್‌ಸಿಗಳಾದ ಚೌಡರೆಡ್ಡಿ ,ಶಿವಮೊಗ್ಗ ಪ್ರಸನ್ನ ಕುಮಾರ್, ದಾವಣಗೆರೆ ಜಿಲ್ಲಾಧ್ಯಕ್ಷರಾದ ಬಿ.ಚಿದಾನಂದಪ್ಪ, ತುಮಕೂರು ಜಿಲ್ಲಾಧ್ಯಕ್ಷರಾದ ಅಂಜನಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಜಯಣ್ಣ, ಮಾಯಕೊಂಡ ಆನಂದಪ್ಪ, ಹರಿಹರ ತಾಲೂಕ್ ಅಧ್ಯಕ್ಷರಾದ ಪರಮೇಶ್ವರಪ್ಪ ಹರಳಹಳ್ಳಿ ಭಾಗವಹಿಸುವರು ಎಂದು ಎಚ್ ಎಸ್ ಶಿವಶಂಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಚಿದಾನಂದಪ್ಪ, ಹರಿಹರ ನಗರಸಭೆಯ ಅಧ್ಯಕ್ಷರಾದ ಕವಿತಾ ಮಾರುತಿ ಬೇಡ, ಸದಸ್ಯರಾದ ಜಂಬಣ್ಣ, ಆರ್ ಸಿ ಜಾವೇದ್, ಬಿ ಅಲ್ತಾಫ್, ಪಕ್ಷದ ಮುಖಂಡರಾದ ಹೊಳೆ ಸಿರಿಗೆರಿ ಪರಮೇಶ್ವರಪ್ಪ ಗೌಡ್ರು, ಮೋಹನ್ ದುರುಗೋಜಿ, ಅಮರಾವತಿ ಬಾಡಿ ನಾಗರಾಜ್, ಜೆಡಿಎಸ್ ಯುವ ಘಟಕದ ತಾಲೂಕ ಅಧ್ಯಕ್ಷರಾದ ಅಡಿಕಿ ಪ್ರೇಮ್ ಕುಮಾರ್, ಮಾರುತಿ ಬೇಡರ್, ಜಿ ನಂಜಪ್ಪ, ಸದಾನಂದ, ಜಾಕೀರ್, ಕಮಲಾಪುರ ಮಹಾದೇವ, ಹೆರಿಗೆರೆ ಪಾಪಯ್ಯ, ಹೊಸಳ್ಳಿ ನಿಂಗಪ್ಪ, ಎಂ ಜಿ ಕುಮಾರ್, ರಾಜು ವೆಲ್ಡಿಂಗ್, ವಿಜಯ್ ಕುಮಾರ್, ಚೂರಿ ಜಗದೀಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0 Comments