ನಗರಸಭೆ ಹರಿಹರ : ಬಿಲ್ ಕಲೆಕ್ಟರ್ ಅಣ್ಣಪ್ಪ ಟಿ ಸಸ್ಪೆಂಡ್.!

ಮಂದಾರ ನ್ಯೂಸ್: ಹರಿಹರ ನಗರಸಭೆಯಲ್ಲಿ ಬಿಲ್ ಕಲೆಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಣ್ಣಪ್ಪ ಇವರನ್ನು ದಾವಣಗೆರೆ ಮಾನ್ಯ ಜಿಲ್ಲಾಧಿಕಾರಿಗಳಾದ ಜಿಎಂ ಗಂಗಾಧರ ಸ್ವಾಮಿ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. 

ಬಿ - ಖಾತಾ ನೀಡುವಲ್ಲಿ ಕರ್ತವ್ಯ ಲೋಪ ಎಸೆಗಿದ ಆರೋಪದ ಮೇಲೆ ಬಿಲ್ ಕಲೆಕ್ಟರ್ ( ಕರ ವಸೂಲಿಗಾರ) ಅಣ್ಣಪ್ಪ ಟಿ ಇವರನ್ನು  ಅಮಾನತ್ತು ಮಾಡಲಾಗಿದೆ. 

ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ನೆಟ್ಟಿನಲ್ಲಿ ಫೆಬ್ರವರಿ 17 ರಿಂದ ಬಿ ಖಾತಾ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಯಿತು. ಅದರಂತೆ ಹರಿಹರದಲ್ಲೂ ಸಹ ಫೆಬ್ರವರಿ 17 ರಿಂದ ಬಿ ಖಾತಾ  ಅಭಿಯಾನ ಆರಂಭವಾಗಿತ್ತು. ಬಿಲ್ ಕಲೆಕ್ಟರ್ ಅಣ್ಣಪ್ಪ ಅವರು 764 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿದ್ದರು. ಇದರಲ್ಲಿ 120 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿದ್ದರು. ಉಳಿದ 644 ಅರ್ಜಿಗಳನ್ನು ತಮ್ಮಲ್ಲೇ ಬಾಕಿ ಉಳಿಸಿಕೊಂಡಿರುವುದು ಜಿಲ್ಲಾಧಿಕಾರಿಗಳು ನಡೆಸಿರುವ ತನಿಖೆಯಿಂದ ಪತ್ತೆಯಾಗಿದೆ.

ಜಿಲ್ಲಾಧಿಕಾರಿಗಳು ನಡೆಸುವ ಗೂಗಲ್ ಮೀಟ್ ನಲ್ಲಿ ಹಲವು ಬಾರಿ ಎಚ್ಚರಿಕೆಯನ್ನು ನೀಡಿದ್ದರು .ಎರಡು ಬಾರಿ ಕಾರಣವನ್ನು ಕೇಳಿ ನೋಟಿಸ್ ಜಾರಿ ಮಾಡಲಾಯಿತು. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ಖಡಕ್ ಸೂಚನೆಯನ್ನು ನೀಡಿದ್ದರು. ತಮ್ಮ ಜವಾಬ್ದಾರಿಯನ್ನ ನಿರ್ವಹಿಸದೆ ಅನುಮತಿಯನ್ನು ಪಡೆಯದೆ ರಜೆಯ ಮೇಲೆ ತೆರಳಿದ್ದರು. ಈ ಎಲ್ಲಾ ವಿಚಾರಗಳು ಹಾಗೂ ನಗರಸಭೆಯ ಕಂದಾಯ ಶಾಖೆಯ ಅಧಿಕಾರಿಗಳ ವರದಿ ಹಾಗೂ ಪರಿಶೀಲನೆಯ ವೇಳೆ ಕಂಡು ಬಂದ ಅಂಶಗಳನ್ನು ಪರಿಗಣಿಸಿ ಅಣ್ಣಪ್ಪ. ಟಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Post a Comment

0 Comments