ಮಂದಾರ ನ್ಯೂಸ್: ಸಾರ್ವಜನಿಕ ವಿನಾಯಕ ಸಂಘ ಹರಿಹರ ಹಾಗೂ ಚಿರಂಜೀವಿ ಆಸ್ಪತ್ರೆ ಇವರ ಸಹಯೋಗದಲ್ಲಿ ನಾಳೆ 63ನೇ ಗಣೇಶೋತ್ಸವ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಸಾರ್ವಜನಿಕ ವಿನಾಯಕ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ ನಂದಿಗಾವಿ ಅವರು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಹೇಳಿದರು.
ನುರಿತ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು. ವಿಶೇಷವಾಗಿ ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು, ಆಟೋ ಚಾಲಕರು ಹಾಗೂ ಮಾಲೀಕರು, ಮಹಿಳೆಯರು ಈ ಒಂದು ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು.
ಶನಿವಾರದಂದು ವಿವಿಧ ರೀತಿಯ ಸಾಂಸ್ಕೃತಿಕ ಕಲಾತಂಡದೊಂದಿಗೆ ನಗರದ ಪ್ರಮುಖ ರಾಜಬೀದಿಯಲ್ಲಿ ಬೃಹತ್ ಶೋಭಾ ಯಾತ್ರೆಯನ್ನು ನಡೆಸಿ, ನಗರಸಭೆಯವರು ನಿರ್ಮಿಸಿರುವ ಕೊಳದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಸಾರ್ವಜನಿಕ ವಿನಾಯಕ ಸಂಘದ ಅಧ್ಯಕ್ಷರಾದ ಎಂಬಿ ಅಣ್ಣಪ್ಪ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಖಜಾಂಚಿ ಕೆಬಿ ರಾಜಶೇಖರ್ ಕಾರ್ಯದರ್ಶಿ ಸಚಿನ್ ಕೊಂಡಜ್ಜಿ ಚಿರಂಜೀವಿ ಆಸ್ಪತ್ರೆಯ ವೈದ್ಯರಾದ ಡಾ. ಜಗನ್ನಾಥ್, ಹರೀಶ, ಟಿ ಹೆಚ್ ಮಂಜುನಾಥ್ ಕೆ ಬಿ ನಾರಾಯಣ, ತಿಪ್ಪೇಶ್, ಆಕಾಶ, ಭೂತೆ ಸಿದ್ದಾರ್ಥ್ ವಿಶ್ವನಾಥ್ ಸೇರಿದಂತೆ ಸಾರ್ವಜನಿಕ ವಿನಾಯಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments