ಮಂದಾರ ನ್ಯೂಸ್, ಹರಿಹರ : ಇತಿಹಾಸ ಪ್ರಸಿದ್ಧ ಹರಿಹರದ "ಹಿಂದೂ ಮಹಾ ಗಣಪತಿ"ಯ ಬೃಹತ್ ಶೋಭಾ ಯಾತ್ರೆ ಇದೆ ಭಾನುವಾರ ನಡೆಯಲಿದೆ. ಈಗಾಗಲೇ ಹರಿಹರ ಸಿಂಗಾರಗೊಂಡಿದೆ. ಎಲ್ಲಿ ನೋಡಿದರಲ್ಲಿ ಕೇಸರಿಮಯ.
ಈ ಬಾರಿ "ಹಿಂದೂ ಮಹಾರಾಜ ಗಣಪತಿ"ಯ ಬೃಹತ್ ವಿಸರ್ಜನಾ ಮೆರವಣಿಗೆ ಹೊಸ ಇತಿಹಾಸ ನಿರ್ಮಾಣ ಮಾಡಲು ದಿನಗಣನೆ ಆರಂಭವಾಗಿದೆ. ರಾಜ್ಯ ಹಾಗೂ ಹೊರ ರಾಜ್ಯದ ಸುಪ್ರಸಿದ್ದ ಸಾಂಪ್ರದಾಯಿಕ ಕಲಾತಂಡಗಳು ವಿಸರ್ಜನ ಮೆರವಣಿಗೆಯಲ್ಲಿ ಗಮನ ಸೆಳೆಯಲಿದೆ. ಹಿಂದೂ ಮಹಾ ಗಣಪತಿಯ ಭಕ್ತರು ತಮ್ಮ ಭಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಈ ಬಾರಿ ಡಿಜೆ ಗೆ ಅನುಮತಿ ಇಲ್ಲದಿದ್ದರೂ ಹಿಂದೂ ಮಹಾರಾಜ್ ಗಣೇಶನ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನೆರವೇರಲಿದೆ ಎಂಬ ಮಾಹಿತಿ ಮೋಷಿಕ ವಾಹನನ ಭಕ್ತರ ವಲಯದಲ್ಲಿ ಹರಿದಾಡುತ್ತಿದೆ.
ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ಅರಮನೆಯಲ್ಲಿ ಹಿಂದೂ ಮಹಾರಾಜ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು ಪ್ರತಿದಿನ ದೇಶಿಯ ಸಂಸ್ಕೃತಿಯನ್ನು ಸಾರುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಸನಾತನ ಸಂಸ್ಕೃತಿಯನ್ನ ಎತ್ತಿ ಹಿಡಿಯುವ ಕೆಲಸ ನಡೆಯುತ್ತಿದೆ.
ಇದೇ ಭಾನುವಾರ ನಡೆಯಲಿರುವ ಬೃಹತ್ ಶೋಭಾಯಾತ್ರೆ ಸಾಂಸ್ಕೃತಿಕ ಸಾಂಪ್ರದಾಯಿಕ ಕಲಾತಂಡದೊಂದಿಗೆ ಹೊಸ ಇತಿಹಾಸಕ್ಕೆ ನಾಂದಿ ಹಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಿಜೆ ಇಲ್ಲದಿದ್ದರೇನು, ನಮ್ಮ ಭಕ್ತಿಗೆ ಕಡಿಮೆ ಇಲ್ಲ. ಹಿಂದೂ ಮಹಾರಾಜ ಗಣೇಶನ ವಿಸರ್ಜನಾ ಮೆರವಣಿಗೆಗೆ ಅದ್ದೂರಿಯಾಗಿ ನಡೆದೇ ನಡೆಯುತ್ತದೆ ಎಂದು ಹೇಳುತ್ತಾರೆ ಗಣೇಶನ ಭಕ್ತರು.
ಆತ್ಮೀಯ ಗಣೇಶನ ಭಕ್ತರೇ .ಇದೇ ದಿನಾಂಕ 14.9.2025 ಭಾನುವಾರ ಮಧ್ಯಾಹ್ನ 12 ಗಂಟೆಗೆ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಸಾಂಸ್ಕೃತಿಕ ಕಲಾತಂಡದೊಂದಿಗೆ ನಡೆಯಲಿದೆ.
0 Comments