ಹರಿಹರದ ಹಿಂದೂ ಮಹಾ ಗಣಪತಿ ಭಕ್ತರಿಗೆ ಗುಡ್ ನ್ಯೂಸ್..!



ಮಂದಾರ ನ್ಯೂಸ್ ಹರಿಹರ: ಹರಿಹರದ ಹಿಂದೂ ಮಹಾ ಗಣಪತಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಗಣೇಶ ವಿಸರ್ಜನೆಯ ಶೋಭಾ ಯಾತ್ರೆ ವರ್ಷದಿಂದ ವರ್ಷಕ್ಕೆ ಹೊಸ ಮೆರಗನ್ನು ನೀಡುತ್ತಾ ಬಂದಿದೆ. ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ಹೊಸ ಇತಿಹಾಸವನ್ನು ನಿರ್ಮಾಣ ಮಾಡುತ್ತಿದ್ದಾರೆ. 
ಈ ಬಾರಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯವರು ಗಣೇಶ ಭಕ್ತರಿಗೆ ಒಂದು ದೊಡ್ಡ ಗುಡ್ ನ್ಯೂಸ್ ಅನ್ನು ನೀಡಿದೆ. ಈ ಬಾರಿ ಮೆರವಣಿಗೆಯಲ್ಲಿ ಡಿಜೆ ಇಲ್ಲದಿದ್ದರೂ ರಾಜ್ಯ ಹಾಗೂ ವರ ರಾಜ್ಯದ ಸಾಂಪ್ರದಾಯಿಕ ಕಲಾತಂಡಗಳು ಶೋಭ ಯಾತ್ರೆಯ ಮೆರವಣಿಗೆಯನ್ನು ಹೆಚ್ಚಿಸಲಿದೆ. ಇದರ ಜೊತೆಗೆ ಹರಿಹರ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿವಿಧ ಬಡಾವಣೆಯ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. 
ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಶೋಭಾಯಾತ್ರೆಯ ಮೆರವಣಿಗೆ ಹೊಸ ಇತಿಹಾಸ ಒಂದಕ್ಕೆ ನಾಂದಿ ಹಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಪ್ರತಿ ಬಾರಿಯೂ ವಿಭಿನ್ನವಾಗಿ ಆಚರಣೆ ಮಾಡುವ ಮನಸ್ಥಿತಿ ಹೊಂದಿರುವ ಯುವಕರ ಪಡೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಲ್ಲಿ ಇದ್ದಾರೆ. ಅವರು ಪ್ರತಿ ಬಾರಿಯೂ ಕಾರ್ಯಕ್ರಮದ ಯಶಸ್ವಿಗೆ ಹೊಸ ಹೊಸ ಯೋಚನೆಗಳನ್ನು ಮಾಡುತ್ತಿದ್ದಾರೆ. ನಾಳೆ ನಡೆಯಲಿರುವ ಶೋಭಾ ಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಸಮುದ್ರ ಮಂಥನ ಮಾಡುವ ದೃಶ್ಯಾವಳಿಯನ್ನು ನಗರದ ಬೊಂಗಾಳೆ ಸರ್ಕಲ್ ನಲ್ಲಿ ಅಳವಡಿಸಿದ್ದಾರೆ. ಇದು ಗಣೇಶಭಕ್ತರನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಡಿಜೆ ಇಲ್ಲದಿದ್ದರೂ ವಿಶೇಷ ಸಾಂಪ್ರದಾಯಿಕ ಕಲಾತಂಡಗಳು ವಿಸರ್ಜನ ಮೆರವಣಿಗೆಯ ಮೆರಗವನ್ನು ಹೆಚ್ಚಿಸಲಿದ್ದಾರೆ ಹಾಗೂ ಭಕ್ತರಿಗೆ ವಿಶೇಷ ಮನರಂಜನೆಯನ್ನು ನೀಡಲಿದ್ದಾರೆ. 
ನಾಳೆ ನಡೆಯಲಿರುವ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ತಮ್ಮ ಭಕ್ತ ಹಾಗೂ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ.

Post a Comment

0 Comments