ಮಂದಾರ ನ್ಯೂಸ್ : ಉತ್ತರ ಕರ್ನಾಟಕದ ವಾಣಿಜ್ಯ ನಗರಿ ರಾಣೆಬೆನ್ನೂರು ಅಕ್ರಮ ಚಟುವಟಿಕೆಗಳಿಂದ ಕರ್ನಾಟಕ ರಾಜ್ಯದ ಗಮನ ಸೆಳೆದಿದೆ. ಕಾನೂನು ಸುವ್ಯವಸ್ಥೆ ದಾರಿ ತಪ್ಪಿದೆ. ಅಕ್ರಮ ಚಟುವಟಿಕೆಗಳಿಂದ ಛೋಟಾ ಮುಂಬೈ ಎನಿಸಿಕೊಂಡಿದೆ.
ರಾಣೆಬೆನ್ನೂರು ತಾಲೂಕಿನಾದ್ಯಂತ ಕೆಲವು ಪೊಲೀಸ್ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಚಟುವಟಿಕೆಗಳಾದ ಇಸ್ಪೀಟ್, ಮಟ್ಕಾ, ಅಕ್ರಮ ಮಧ್ಯ, ಸೇರಿದಂತೆ ಇನ್ನೂ ಅನೇಕ ಅಕ್ರಮ ಚಟುವಟಿಕೆಗಳು ಹಾಡು ಹಗಲೇ ರಾಜರೋಷವಾಗಿ ಕಾನೂನಿನ ಭಯವಿಲ್ಲದೆ ದಂಧೆಗಳು ನಡೆಯುತ್ತಿದೆ. ಇವುಗಳನ್ನು ನಿಯಂತ್ರಿಸಬೇಕಾದ ಇಲಾಖೆಗಳು ಮೌನಕ್ಕೆ ಶರಣಾಗಿದ್ದಾರೆ.
ರಾಣೆಬೆನ್ನೂರು ತಾಲೂಕು ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಗೇರಿ ಮಾರ್ಗ ರಾಣೇಬೆನ್ನೂರು ಕಡೆ ತೆರಳುವ ಶಿವಗಂಗಾ ಡಾಬದ ಪಕ್ಕದ ಮಣ್ಣಿನ ರಸ್ತೆಯಿಂದ ಕೆಲವು ದೂರದ ಅಂತರದಲ್ಲಿ ಹಗಲು ಹೊತ್ತಿನಲ್ಲಿ ಕೋಟಿ ಕೋಟಿ ಲೆಕ್ಕದಲ್ಲಿ ಅಕ್ರಮವಾಗಿ ಇಸ್ಪೀಟ್ ಆಟ ನಡೆಯುತ್ತಿದೆ.
ಜನ ವಸತಿ ಪ್ರದೇಶದಿಂದ ಕೆಲವು ದೂರದ ಅಂತರದಲ್ಲಿ ನಡೆಯುತ್ತಿರುವ ಈ ದಂಧೆಯಿಂದ ಸಭ್ಯೆ ನಾಗರಿಕರು ಬೇಸತ್ತು ಹೋಗಿದ್ದಾರೆ. ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದ್ದಾರೆ. ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಮಹಿಳೆ ಒಬ್ಬರು ತನ್ನ ಮನೆಯ ಯಜಮಾನ ಹಲಗೇರಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯುತ್ತಿರುವ ಇಸ್ಪೀಟ್ ದಂಧೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಮಕ್ಕಳ ಶಾಲೆಗೆ ಕಟ್ಟಬೇಕಾದ ಫೀಸ್ ಹಣವನ್ನು ಸಹ ಬಿಡದೆ ತೆಗೆದುಕೊಂಡು ಹೋಗಿ ಇಸ್ಪೀಟ್ ಆಟ ಆಡುತ್ತಿದ್ದಾರೆ. ಪ್ರತಿದಿನ ಮನೆಗೆ ಬಂದು ಅವ್ಯಾಚ್ಚ ಶಬ್ದಗಳಿಂದ ನಿಂದನೆ ಮಾಡಿ ಮನ ಬಂದಂತೆ ವಯಸ್ಸಿಗೆ ಬಂದ ಮಕ್ಕಳ ಎದುರು ಹೊಡೆಯುತ್ತಿದ್ದಾರೆ. ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿ ಇಸ್ಪೀಟ್ ಆಡುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ. ದಯವಿಟ್ಟು ಎಂಥ ಅಕ್ರಮ ಚಟುವಟಿಕೆಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿ ನೊಂದ ಕುಟುಂಬಗಳ ಕಣ್ಣೀರು ಒರೆಸುವಂತೆ ಬೇಡಿಕೊಂಡಿದ್ದಾರೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಹಲಗೇರಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯುತ್ತಿರುವ ಅಕ್ರಮ ಇಸ್ಪೀಟ್ ಮತ್ತು ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಮಾಹಿತಿಯನ್ನ ಪಡೆದು ಅಕ್ರಮವಾಗಿ ಇಂತಹ ಹಲ್ಕಟ್ಟು ದಂಧೆಗಳನ್ನು ನಡೆಸುತ್ತಿರುವ ಖದೀಮರನ್ನು ಒದ್ದು ಒಳಗೆ ಹಾಕುವ ಮೂಲಕ ನೊಂದ ಕುಟುಂಬಗಳ ಕಣ್ಣೀರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ.ಆ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಜವಾಬ್ದಾರಿ ಸ್ಥಾನದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆಯೇ? ಕಾದು ನೋಡಬೇಕಾಗಿದೆ.
ಅಕ್ರಮ ಚಟುವಟಿಕೆಗಳ ಮುಕ್ತ ರಾಣೇಬೆನ್ನೂರು ತಾಲೂಕು ಆಗಬೇಕು ಎಂಬ ಕನಸು ಕಾಣುತ್ತಿರುವ ನಾಗರಿಕರ ಬಹುದಿನದ ಬೇಡಿಕೆ ಕೊನೆಯಾಗಬಹುದೇ? ನಾಗರಿಕರ ಪ್ರಶ್ನೆಯಾಗಿದೆ.
0 Comments