ಮಂದಾರ ನ್ಯೂಸ್: ವಿಶ್ವಕ್ಕೆ ರಾಮಾಯಣದಂಥ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಪುತ್ಥಳಿ ಇರುವ ಪುಣ್ಯದ ಸ್ಥಳದಲ್ಲಿ ಅಬಕಾರಿ ಇಲಾಖೆಯವರು ಮತ್ತೊಂದು ಮಧ್ಯದ ಅಂಗಡಿಗೆ ಅನುಮತಿಯನ್ನು ನೀಡಿದ್ದಾರೆ.
ಮಹಿಳೆಯರೇ, ಮಾತೆಯರೇ ಎಚ್ಚೆತ್ತುಕೊಳ್ಳಿ ನಿಮ್ಮ ಕುಟುಂಬವನ್ನು ಬೀದಿಗೆ ತಳ್ಳಲು ಹಾಗೂ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಮತ್ತೊಂದು ಮಧ್ಯದ ಅಂಗಡಿಗೆ ಅನುಮತಿ ನೀಡುತ್ತಿದ್ದಾರೆ.
ಈಗಾಗಲೇ ಇರುವ ಎರಡು ಮಧ್ಯದ ಅಂಗಡಿಗಳಿಂದ ನಿಮ್ಮ ಕುಟುಂಬದ ಸದಸ್ಯರು ಮಧ್ಯದ ದಾಸರಾಗಿರುವುದು ನಿಮಗೆ ತಿಳಿದಿದೆ. ಇದರಿಂದ ತಾವುಗಳು ಪ್ರತಿ ದಿನ ಅನುಭವಿಸುತ್ತಿರುವ ನೋವುಗಳು ಹಾಗೂ ನಿಮ್ಮ ಕಣ್ಣೀರಿಗೆ ಕೊನೆ ಇಲ್ಲದಂತಾಗಿದೆ.
ಮಕ್ಕಳಗೆ ಉತ್ತಮ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆ ಮಾಡಲು ಪ್ರತಿದಿನ ಪರದಾಡುತ್ತಿರುವುದು ಸಾಲದು ಎಂಬಂತೆ ಮತ್ತೊಂದು ಮಧ್ಯದ ಅಂಗಡಿಗೆ ಅನುಮತಿಯನ್ನು ನೀಡಿದ್ದಾರೆ.
ತಾಯಿಂದಿರೆ ನೀವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯ ಕಾದಿರುತ್ತದೆ. ಇಂದಿನ ಮಕ್ಕಳು ಮುಂದಿನ ದೇಶದ ಭವ್ಯ ಪ್ರಜೆಗಳು ಎಂಬುವುದನ್ನು ಮರೆಯಬೇಕಾಗುತ್ತದೆ. ಓದುವ ವಯಸ್ಸಿನಲ್ಲಿ ನೋಡಬಾರದನ್ನು ನೋಡುವುದು. ಕಲಿಯಬಾರದನ್ನು ಕಲಿಯುವುದು ಬೆಳೆಸಿಕೊಳ್ಳಬೇಕಾಗುತ್ತದೆ. ಮಕ್ಕಳಲ್ಲಿ ನೀವು ಕಂಡ ಕನಸುಗಳು ನುಚ್ಚುನೂರಾಗುತ್ತದೆ. ಕುಟುಂಬದ ಆಧಾರ ಸ್ಥಂಬವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ.
ಅಬಕಾರಿ ಇಲಾಖೆಯವರು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುವ ಬರೆದಲ್ಲಿ ಎಲ್ಲಿಂದರಲ್ಲಿ ಹೇಗೆ ಬೇಕು ಹಾಗೆ ಮಧ್ಯದ ಅಂಗಡಿಗಳಿಗೆ ಅನುಮತಿಯನ್ನು ನೀಡುತ್ತಿದ್ದಾರೆ. ಹಣವುಳ್ಳವರು ತಮ್ಮ ಸ್ವಾರ್ಥಕ್ಕಾಗಿ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಬೀದಿಗೆ ತಳ್ಳುತ್ತಿದ್ದಾರೆ.
ಯಾರ ಕುಟುಂಬ ಬೀದಿಗೆ ಬಂದರೇನು. ಯಾರ ಮಕ್ಕಳು ಹಾಳಾದರೇನು. ನಮ್ಮ ಕುಟುಂಬ ,ನಮ್ಮ ಮನೆ ಚೆನ್ನಾಗಿದ್ದರೆ ಸಾಕು ಎಂಬ ಉದ್ದೇಶದಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಲಕ್ಷ, ಲಕ್ಷ ಹಣವನ್ನು ನೀಡಿ ಮಧ್ಯದ ಅಂಗಡಿಗಳನ್ನು ತೆರೆಯುತ್ತಿದ್ದಾರೆ ಬಡವರ ಮಕ್ಕಳನ್ನು ಬೀದಿಗೆ ತಳ್ಳುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಳ್ಳಬೇಕಾದ ಸಮಾಜ ಗಾಢ ನಿದ್ದೆಗೆ ಜಾರಿದರೆ ಹೇಗೆ?
ಕೂಡಲೆ ಎಚ್ಚೆತ್ತುಕೊಳ್ಳಿ. ಕೊಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಆರಂಭವಾಗುತ್ತಿರುವ ಮಧ್ಯದ ಅಂಗಡಿಯ ವಿರುದ್ಧ ನಿಮ್ಮ ಪ್ರಬಲವಾದ ಧ್ವನಿಯನ್ನು ಎತ್ತಬೇಕಾಗಿದೆ. ಆ ಮೂಲಕ ನಿಮ್ಮ ಕುಟುಂಬ ಹಾಗೂ ನಿಮ್ಮ ಕುಟುಂಬದ ಸದಸ್ಯರನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ.
ನೋಡಿ ನಿಮ್ಮ ಕುಟುಂಬ ರಕ್ಷಣೆ ಮಾಡಿಕೊಳ್ಳುತ್ತೀರೋ? ಅಥವಾ ಸದ್ದಿಲ್ಲದೆ ಆರಂಭವಾಗುತ್ತಿರುವ ಮಧ್ಯದ ಅಂಗಡಿಯ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುತ್ತಿರೋ ?ನಿಮಗೆ ಬಿಟ್ಟಿರುವುದು.
ನಮ್ಮ ಮಾಧ್ಯಮ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮಾಡಿದೆ. ಇದರಿಂದ ಎಚ್ಚೆತ್ತುಕೊಂಡು ಹೋರಾಟ ಮಾಡಿದರೆ ಮುಂದಿನ ದಿನದಲ್ಲಿ ನಿಮ್ಮ ಕುಟುಂಬ ಸುಭಿಕ್ಷವಾಗಿರುತ್ತದೆ. ನಿಮ್ಮ ಕುಟುಂಬ ಸಂತೋಷದಲ್ಲಿ ನೆಮ್ಮದಿಯ ಜೀವನ ನಡೆಸುತ್ತದೆ.
ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರ......
0 Comments