ಮಂದಾರ ನ್ಯೂಸ್: ಹರಿಹರ ಸಾರ್ವಜನಿಕರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಆಡಳಿತ ಅಧಿಕಾರಿಯಾಗಿ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹನುಮನಾಯ್ಕ ಅವರು ಇದೇ ದಿನಾಂಕ 31 /10 /2025 ರಂದು ಅಂದರೆ ನಾಳೆ ನಿವೃತ್ತಿ ಹೊಂದುತ್ತಿದ್ದಾರೆ.
ವೈದ್ಯರಾಗಿ, ತಾಲೂಕು ಆರೋಗ್ಯಧಿಕಾರಿಗಳಾಗಿ, ಸಾರ್ವಜನಿಕರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಹನುಮನಾಯ್ಕ ಅವರು ನಿವೃತ್ತಿ ಹೊಂದುತ್ತಿರುವುದು ಅವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.
ವಿಶೇಷ ಏನೆಂದರೆ ಅವರ ಹೆಚ್ಚಿನ ಸೇವಾ ಅವಧಿಯನ್ನು ಹರಿಹರ ತಾಲೂಕಿನಲ್ಲಿ ಕಳೆದಿದ್ದಾರೆ. ಸಾರ್ವಜನಿಕರ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯ ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮವಾದ ಗುಣಮಟ್ಟದ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವಲ್ಲಿ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು ತಪ್ಪಾಗಲಾರದು.
ರೋಗಿಗಳ ಅನುಕೂಲಕ್ಕಾಗಿ ಡಯಾಲಿಸಿಸ್, ಐಸಿಯು, ವಿಶ್ರಾಂತಿ ಗೃಹ ಸೇರಿದಂತೆ ಅನೇಕ ಸೌಲಭ್ಯಗಳನ್ನು ತರುವಲ್ಲಿ ಅವರ ಪಾತ್ರ ಅಮೂಲ್ಯವಾದದ್ದು.
ಹೆಮ್ಮಾರಿ ಕರೋನ ಸಂದರ್ಭದಲ್ಲಿ ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ರೋಗಿಗಳ ಸೇವೆ ಮಾಡುವುದರ ಜೊತೆಗೆ ಕರೋನ ರೋಗಿಗಳಿಗಾಗಿ ಬೇಕಾದ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ಅವರು ದಿಟ್ಟವಾದ ಹೆಜ್ಜೆಯನ್ನು ಇಟ್ಟಿದ್ದರು.
ಇವರು ನಿವೃತ್ತಿ ಹೊಂದುವ ಕೆಲವು ತಿಂಗಳುಗಳ ಹಿಂದೆ ಸಾರ್ವಜನಿಕರ ಆಸ್ಪತ್ರೆಯ ಹಿಂಬದಿಯಲ್ಲಿ ನಿರ್ಮಾಣವಾಗಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಯನ್ನು ಮಾಡಿಸಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ರೋಗಿಗಳಿಗೆ ಇನ್ನೂ ಸೇವೆ ಸಿಗುತ್ತಿಲ್ಲ. ನಿವೃತ್ತಿ ಹೊಂದುವ ಮೊದಲು ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಸೇವೆ ಕಲ್ಪಿಸಕೊಡಬೇಕು ಎಂಬ ಆಸೆ ಕೊನೆಗೂ ಈಡೇರಲಿಲ್ಲ. ಆದರೂ ಸಾರ್ವಜನಿಕರ ಆಸ್ಪತ್ರೆಯ ಸುಧಾರಣೆಗಾಗಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಕ್ಕಾಗಿ ತಮ್ಮ ಅಧಿಕಾರವಧಿಯಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.
ಇಂದು ಅವರು ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನವು ಚೆನ್ನಾಗಿರಲಿ ಎಂದು ನಮ್ಮ ಮಾಧ್ಯಮವು ಆಶಿಸುತ್ತದೆ.
0 Comments