ಮಂದಾರ ನ್ಯೂಸ್, ರಾಣೆಬೆನ್ನೂರು: ಉತ್ತರ ಕರ್ನಾಟಕದ ಹೆಬ್ಬಾಗಿಲು ಕುಮಾರ ಪಟ್ಟಣಂ ಪೊಲೀಸ್ ಠಾಣಾ ಸರಹದ್ದು ಮಾಕನೂರು ಕ್ರಾಸ್ ಬಳಿ ಅನ್ನಭಾಗ್ಯ ಅಕ್ಕಿ ತುಂಬಿದ 16 ಚಕ್ರದ ಲಾರಿಯನ್ನು ಕುಮಾರ ಪಟ್ಟಣಂ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು.
ದಿನಾಂಕ 13/11/2025 ರಂದು ಸರಿಸುಮಾರು 5:00 ಸಮಯದಲ್ಲಿ ಮಾಕನೂರು ಕ್ರಾಸ್ ಕಡೆಯಿಂದ ಹರಿಹರದ ಕಡೆಗೆ ಹೋಗುವ ರಸ್ತೆ ಮಾಕನೂರ ಕ್ರಾಸ್ ಬಳಿ ಯಾವುದೇ ತುಂಬಿದ 16 ಚಕ್ರದ ಲಾರಿಯನ್ನು ತಡೆದು ಪರಿಶೀಲಿಸಿದಾಗ ಆ ವಾಹನದಲ್ಲಿ ಇರುವುದು ಸರ್ಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯ ಅಕ್ಕಿ ಎಂಬುದು ಪೊಲೀಸರಿಗೆ ತಿಳಿದು ಬಂದಿರುತ್ತದೆ. ಯಾವುದೇ ಪಾಸು ಅಥವಾ ಪರ್ಮಿಟ್ ಇರುವುದಿಲ್ಲ.
ಕೂಡಲೇ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ನಂತರ ಆಹಾರ ಇಲಾಖೆಯವರಿಗೆ ಮಾಹಿತಿಯನ್ನು ನೀಡುತ್ತಾರೆ.
ಆಂಧ್ರಪ್ರದೇಶದ ನೋಂದಾವಣೆ ಸಂಖ್ಯೆ ಹೊಂದಿರುವ 16 ಚಕ್ರದ ಲಾರಿಯಲ್ಲಿ ಸರ್ಕಾರದ ಮಹತ್ವದ ಯೋಜನೆಯಾದ ಅನ್ನಭಾಗ್ಯ ಅಕ್ಕಿಯ 700 ಚೀಲಗಳು ಸರಿಸುಮಾರು 560000/-ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಿರುತ್ತಾರೆ.
ಲಾರಿ ಚಾಲಕ ವಿಜಯ್ ಕುಮಾರ್ ತಂದೆ ರಾಮಕೃಷ್ಣ ಹಾಗೂ ಅವನೊಂದಿಗೆ ಇದ್ದ ನಿಂಗಪ್ಪ ತಂದೆ ಮುತ್ತಣ್ಣ ಪೂಜಾರಿ ಇವರ ಮೇಲೆ ಕುಮಾರ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಾರ ಪಟ್ಟಣಂ ಪೊಲೀಸ್ ಇಲಾಖೆಯವರು ಈಗಾಗಲೇ ತಮ್ಮ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಆ ನಿಟ್ಟಿನಲ್ಲಿ ಪೋಲಿಸ್ ಠಾಣೆಯ ಉಪ-ನಿರೀಕ್ಷಕರಾದ ಪ್ರವೀಣ್ ವಾಲೀಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.
0 Comments