ಮಂದಾರ ನ್ಯೂಸ್ ಹರಿಹರ:ಆಂಬ್ಯುಲೆನ್ಸ್ ಸೇವೆ ಎಂದರೆ ತುರ್ತು ವೈದ್ಯಕೀಯ ಪರಿಸ್ಥಿತಿಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ನೀಡುವ ಸೇವೆ. ಭಾರತದಲ್ಲಿ, ತುರ್ತು ಆಂಬ್ಯುಲೆನ್ಸ್ ಸೇವೆಗಾಗಿ 108 ಮತ್ತು 102 ನಂತಹ ಉಚಿತ ತುರ್ತು ಸಂಖ್ಯೆಗಳನ್ನು ಬಳಸಲಾಗುತ್ತದೆ. 108 ಅನ್ನು ಸಾಮಾನ್ಯವಾಗಿ ಸಾಮಾನ್ಯ ತುರ್ತು ಪರಿಸ್ಥಿತಿಗಳಿಗೆ ಬಳಸಲಾಗುತ್ತದೆ, ಆದರೆ 102 ಗರ್ಭಿಣಿಯರು ಮತ್ತು ಶಿಶುಗಳಿಗಾಗಿ ವಿಶೇಷವಾಗಿ ಲಭ್ಯವಿದೆ.
ಪ್ರಮುಖ ಆಂಬ್ಯುಲೆನ್ಸ್ ಸೇವೆಗಳು
108 ಸೇವೆ: ಇದು ತುರ್ತು ಆರೋಗ್ಯದ ಸಂದರ್ಭಗಳಲ್ಲಿ, ಉದಾಹರಣೆಗೆ ಅಪಘಾತಗಳು, ಆರೋಗ್ಯ ಸಮಸ್ಯೆಗಳು ಮತ್ತು ಹೆರಿಗೆ ಸಮಯದಲ್ಲಿ, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುತ್ತದೆ.
102 ಸೇವೆ: ಇದು ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ಅವರ ತಾಯಂದಿರಿಗೆ 24/7 ಉಚಿತ ವೈದ್ಯಕೀಯ ಸಾರಿಗೆಯನ್ನು ಒದಗಿಸುತ್ತದೆ. ಇದು ಗರ್ಭಿಣಿಯರ ಸುರಕ್ಷಾ ಯೋಜನೆ ಮತ್ತು ಜನನಿ ಶಿಶು ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ಬರುತ್ತದೆ.
ಸೇವೆಗಳ ವೈಶಿಷ್ಟ್ಯಗಳು
ವೈದ್ಯಕೀಯ ಸಿದ್ಧತೆ: ಆಂಬ್ಯುಲೆನ್ಸ್‌ಗಳು ತುರ್ತು ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳಿಂದ ಸುಸಜ್ಜಿತವಾಗಿವೆ. ಕೆಲವು ಸೇವೆಗಳು ವೈದ್ಯಕೀಯ ಸಿಬ್ಬಂದಿಯ ಸಹಾಯವನ್ನೂ ನೀಡುತ್ತವೆ.
ಜಿಪಿಎಸ್ ಟ್ರ್ಯಾಕಿಂಗ್: ಅನೇಕ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ, ಇದರಿಂದಾಗಿ ಸುಲಭವಾಗಿ ಟ್ರ್ಯಾಕ್ ಮಾಡಬಹುದು.
ಯಾವುದೇ ಸಮಯದಲ್ಲಿ: ಈ ಸೇವೆಗಳು ದಿನದ 24 ಗಂಟೆಗಳು, ವಾರದ 7 ದಿನಗಳು ಲಭ್ಯವಿರುತ್ತವೆ.
ಆದರೆ ಹರಿಹರದ ಸಾರ್ವಜನಿಕರ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಆಂಬುಲೆನ್ಸ್ ಸೇವೆ ಇಲ್ಲದಂತಾಗಿದೆ. ಸದ್ಯ 2 ಆಂಬುಲೆನ್ಸ್ ಗಳು ಇದ್ದು ಅವುಗಳ ವಿಮೆ ಅವಧಿ ಮುಗಿದಿರುತ್ತದೆ. ಇನ್ನು ತಾಯಿ ಮಗು ಅಂಬುಲೆನ್ಸ್ ಇದ್ದರೂ ಇಲ್ಲದಂತಾಗಿದೆ.
ಆಸ್ಪತ್ರೆಯಲ್ಲಿರುವ ಕೆ ಎ 17 ಜಿ 0618 ನೊಂದಾವಣಿ ಸಂಖ್ಯೆ ಹೊಂದಿರುವ ಅಂಬುಲೆನ್ಸ್ ವಿಮೆ ಅವಧಿ 28/10/2025 ರಂದು ಮುಗಿದಿರುತ್ತದೆ. ಈ ವಾಹನದ ಎಫ್ ಸಿ ದಿನಾಂಕವು ಮುಗಿದಿದೆ. ಇನ್ನು ಮತ್ತೊಂದು ಆಂಬುಲೆನ್ಸ್ ಕೆಎ 02 ಜಿ 5118 ನೊಂದಾವಣಿ ಸಂಖ್ಯೆ ಹೊಂದಿರುವ ಅಂಬುಲೆನ್ಸ್ ವಿಮೆ ಅವಧಿ 31/ 8 /2025 ರಲ್ಲಿ ಮುಗಿದಿರುತ್ತದೆ. ಈ ಅಂಬುಲೆನ್ಸ್ ಗಳು ಹರಿಹರ ಸಾರ್ವಜನಿಕರ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ತಮ್ಮ ಸೇವೆಯನ್ನು ನೀಡಬೇಕಾಗುತ್ತದೆ. ಈ ವಾಹನದಲ್ಲಿ ರೋಗಿಗಳನ್ನು ವೈದ್ಯರು ಹೇಳಿದ ಸಮಯದ ಒಳಗೆ ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಕೆಲವೊಮ್ಮೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕಾಗುತ್ತದೆ.ಈ ವಾಹನಗಳಿಗೆ ವೇಗದಲ್ಲಿ ನಿಯಂತ್ರಣ ಇರುವುದಿಲ್ಲ. ವೇಗವಾಗಿ ಅಂಬುಲೆನ್ಸ್ ಹೋಗುವ ಸಂದರ್ಭದಲ್ಲಿ ಏನಾದರೂ ಅವಘಡ ಸಂಭವಿಸಿ ಸಾವು-ನೋವುಗಳು ಆದರೆ ಯಾರು ಜವಾಬ್ದಾರಿ? ವಾಹನದ ವಿಮೆ ಇದ್ದರೆ ಸಾಧ್ಯವಾದಷ್ಟು ಪರಿಹಾರ ಕೊಡಲು ಸಾಧ್ಯವಾಗುತ್ತದೆ. ವಿಮೆಯೇ ಇಲ್ಲದಿದ್ದರೆ ಏನು ಮಾಡುವುದು. ಈ ಎಲ್ಲಾ ವಿಚಾರವನ್ನು ಆಸ್ಪತ್ರೆ ಅಡಳಿತದ ಚುಕ್ಕಾಣಿ ಹಿಡಿದವರು ಯೋಚನೆ ಮಾಡಬೇಕು.ವಾಹನದ ವಿಚಾರದಲ್ಲಿ ನಿರ್ಲಕ್ಷ ಒಳ್ಳೆಯದಲ್ಲ. ವಿಮೆ ಅವಧಿ ಮುಗಿದ ವಾಹನಗಳನ್ನು ರೋಡಿಗೆ ಇಳಿಸುವ ಮೊದಲು ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿರುವವರು ಈ ಕೆಳಗಿನ ಕಾಯ್ದೆಯನ್ನ ತಿಳಿದುಕೊಳ್ಳಿ.
ಯಾವುದೇ ವಾಹನದ ವಿಮೆ ಅವಧಿ ಮುಗಿದಿದ್ದರೆ ಅದನ್ನು ಈ ಕೆಳಗಿನ ಕಾಯ್ದೆಯಂತೆ ದಂಡ ಹಾಕಲು ಅಧಿಕಾರವಿದೆ.
ಮೋಟಾರು ವಾಹನ ಕಾಯ್ದೆ 1988ರ ಕಲಂ 196 ಪ್ರಕಾರ ವಿಮೆ ಇಲ್ಲದ ವಾಹನಗಳು ರಸ್ತೆಯಲ್ಲಿ ಚಲಿಸುವಂತಿಲ್ಲ. ಸುಪ್ರೀಂಕೋರ್ಟ್ ಸಿವಿಲ್ ಅಪೀಲು ಪ್ರಕರಣದಲ್ಲಿ ಮೋಟಾರು ವಾಹನ ಕಾಯಿದೆ ಪ್ರಕಾರ, ಒಂದು ವೇಳೆ ಈ ರೀತಿಯ ವಿಮೆ ಮಾಡಿಸದ ವಾಹನಗಳು ರಸ್ತೆಯಲ್ಲಿ ಸಂಚರಿಸಿ ಅದರಿಂದ ಅಪಘಾತ ಉಂಟಾದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಸಂಬಂಧಪಟ್ಟ ವಾಹನದ ವಾರಸುದಾರರಿಂದ ಪಾವತಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು 2018ರ ಮಾರ್ಚ್ 26ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಕಾರಣ, ಎಲ್ಲ ವಾಹನ ಸವಾರರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಅಂತೆಯೇ ವಿಮೆ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರ ಪೊಲೀಸ್ ಇಲಾಖೆಗೆ ಸೂಚಿಸಿದೆ ಎನ್ನಲಾಗಿದೆ.
ಕೂಡಲೇ ಸಂಬಂಧಪಟ್ಟ ಜವಾಬ್ದಾರಿತನದ ಅಧಿಕಾರಿಗಳು ಹರಿಹರ ಸಾರ್ವಜನಿಕರ ಆಸ್ಪತ್ರೆಯಲ್ಲಿರುವ ಅಂಬುಲೆನ್ಸ್ ಗಳ ವಿಮೆಯನ್ನು ನವೀಕರಣ ಮಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೌಲಭ್ಯ ನೀಡುವಂತಾಗಲಿ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಬೇರೆ ಅಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಜವಾಬ್ದಾರಿ ಆಸ್ಪತ್ರೆಯವರು ವಹಿಸಿಕೊಳ್ಳಲಿ. ತಾಯಿ ಮಗು ಆಂಬುಲೆನ್ಸ್ ಬಂದ ದಿನದಿಂದ ಇದುವರೆಗೂ ಒಂದೇ ಕಡೆ ನಿಂತು ಕೊಂಡಿದೆ. ಇದರ ಬಗ್ಗೆಯೂ ತನಿಖೆಯಾಗಲಿ. ಆಸ್ಪತ್ರೆಯ ಆಡಳಿತ ಕಚೇರಿಯಲ್ಲಿರುವ ಸಿಬ್ಬಂದಿಗಳ ನಿರ್ಲಕ್ಷಕ್ಕೆ ತಕ್ಕ ಶಿಕ್ಷೆ ಆಗಲಿ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಜೊತೆ ಚೆಲ್ಲಾಟವಾಡುವರಿಗೆ ಮೂಗುದಾರ ಹಾಕಬೇಕಾಗಿದೆ. ಒಟ್ಟಾರೆಯಾಗಿ ಆಸ್ಪತ್ರೆಯ ಸುಧಾರಣೆಗಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.
0 Comments