ಇದು ಅಧಿಕೃತ ನ್ಯಾಯಬೆಲೆ ಅಂಗಡಿಯೋ? ಅನಧಿಕೃತ ನ್ಯಾಯಬೆಲೆ ಅಂಗಡಿಯೋ? ಆಹಾರ ಇಲಾಖೆಯ ಅಧಿಕಾರಿಗಳೇ ನೀವೇ ಉತ್ತರಿಸಿ.!


ಮಂದಾರ ನ್ಯೂಸ್, ಹರಿಹರ: ಹರಿಹರ ಕಸಬಾ ವ್ಯಾಪ್ತಿಯ ಬೆಂಕಿ ನಗರದ ಮಸೀದಿ ಕಾಂಪ್ಲೆಕ್ಸ್ ನಲ್ಲಿ ಇರುವ ಪಡಿತರ ವಸ್ತುಗಳನ್ನು ವಿತರಣೆ ಮಾಡುತ್ತಿರುವ ಈ ನ್ಯಾಯಬೆಲೆ ಅಂಗಡಿ ಆಹಾರ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಅಧಿಕೃತ ನ್ಯಾಯಬೆಲೆ ಅಂಗಡಿಯೋ? ಅಥವಾ ಖಾಸಗಿ ನ್ಯಾಯಬೆಲೆ ಅಂಗಡಿಯೋ? ಆಹಾರ ಇಲಾಖೆಯ ಅಧಿಕಾರಿಗಳು ಉತ್ತರ ನೀಡಬೇಕು.

ಒಂದು ಮಾಹಿತಿಯ ಪ್ರಕಾರ ಈ ನ್ಯಾಯಬೆಲೆ ಅಂಗಡಿಯೂ ಅತೀ ಹೆಚ್ಚು ಪಡಿತರ ಚೀಟಿಯನ್ನು ಹೊಂದಿರುವ ನ್ಯಾಯಬೆಲೆ ಅಂಗಡಿ ಎಂಬ ಮಾಹಿತಿ ಇದೆ. ಸರಿಸುಮಾರು 600 ರಿಂದ 700 ಪಡಿತರ ಕಾರ್ಡನ್ನು ಹೊಂದಿದೆ. 

ಎಷ್ಟು ದೊಡ್ಡ ಸಂಖ್ಯೆಯ ಪಡಿತರ ಕಾರ್ಡ್ ಹೊಂದಿರುವ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ಇಲಾಖೆಯ ಲೋಗೋ ಇರುವ ನಾಮಫಲಕ ಇಲ್ಲದೆ ಇರುವುದು ಅನೇಕ ಅನುಮಾನವನ್ನು ಹುಟ್ಟು ಹಾಕಿದೆ.
ಪಡಿತರ ದಾಸ್ತಾನನ್ನು ಶೇಖರಣೆ ಮಾಡಿಕೊಳ್ಳಲು ದೊಡ್ಡ ಗಾತ್ರದ ಮಳಿಗೆ ಇಲ್ಲದೆ ಇರುವುದು. ಕೇವಲ ಅರವತ್ತರಿಂದ ಎಪ್ಪತ್ತು ಚೀಲ ಪಡಿತರ ಸಾಮಗ್ರಿಗಳನ್ನು ದಾಸ್ತಾನು ಮಾಡುವಷ್ಟು ಜಾಗ ಮಾತ್ರ ಹೊಂದಿದೆ. ಸರ್ಕಾರದ ಪಡಿತರ ಪಡಿತರ ಚೀಟಿದಾರರಿಗೆ ಸಾಮಗ್ರಿಗಳನ್ನು ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿಯ ಮುಂಭಾಗದಲ್ಲಿ ನಾಮಫಲಕ ಇಲ್ಲದೇ ಇರುವುದು ಇಲಾಖೆಯ ಕಾರ್ಯ ವೈಖರಿಯನ್ನು ಎತ್ತಿ ತೋರಿಸುತ್ತದೆ. 

ಕೂಡಲೆ ಈ ನ್ಯಾಯಬೆಲೆ ಅಂಗಡಿ ಆಹಾರ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದೆ ಆಗಿದ್ದರೆ ನ್ಯಾಯ ಬೆಲೆ ಅಂಗಡಿ ಯಾರ ಹೆಸರಿನಲ್ಲಿ ನೋಂದಾವಣೆಯಾಗಿದೆ ಅವರಿಗೆ ಕೂಡಲೇ ನೋಟಿಸ್ ಅನ್ನು ಜಾರಿ ಮಾಡಿ ಸಮರ್ಪಕವಾದ ಉತ್ತರವನ್ನು ಪಡೆದುಕೊಳ್ಳಬೇಕಾಗಿದೆ.
ಅತಿ ಹೆಚ್ಚು ಪಡಿತರ ಚೀಟಿಗೆ ಹೊಂದಿದ್ದರೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ ಪಡಿತರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವಷ್ಟು ಮಳಿಗೆಯ ವ್ಯವಸ್ಥೆಯನ್ನು ಹೊಂದುವಂತೆ ಸೂಚನೆಯನ್ನು ನೀಡಬೇಕಾಗಿದೆ. 

ಆಗಿಂದಾಗಿ ಈ ನ್ಯಾಯಬೆಲೆ ಅಂಗಡಿಗೆ ಆಹಾರ ನಿರೀಕ್ಷಕರು ಭೇಟಿ ನೀಡಿ ಸಹಿ ಮಾಡಿದ ವರದಿಯ ಪುಸ್ತಕವನ್ನು ಪರಿಶೀಲನೆ ಮಾಡಬೇಕಾಗಿದೆ. 

ಆಹಾರ ನಿರೀಕ್ಷಕರ ಗಮನಕ್ಕೆ ನಾಮಫಲಕ ಹಾಕದೆ ಇರುವ ವಿಚಾರ ಹಾಗೂ ಪಡಿತರ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವಷ್ಟು ಮಳಿಗೆಯ ವ್ಯವಸ್ಥೆಯು ಹೊಂದಿಲ್ಲದ ವಿಚಾರಕ್ಕೆ ಸಂಬಂಧಿಸಿದಂತೆ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆಯೇ? ಅಥವಾ ಇಲ್ಲವೇ? ಎಂಬ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿದೆ.

ಒಟ್ಟಾರೆ ಹಲವು ಲೋಪಗಳನ್ನು ಹೊಂದಿರುವ ಬೆಂಕಿ ನಗರದ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ನ್ಯಾಯಬೆಲೆ ಅಂಗಡಿ ವಿರುದ್ಧ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಶಿಸ್ತು ಕ್ರಮವನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Post a Comment

0 Comments