ಮಂದಾರ ನ್ಯೂಸ್ ಸಾಗರ (ನ.29): ಊಹಾಪೋಹಗಳಿಗೆ ಸದ್ಯದಲ್ಲೇ ತೆರೆಬೀಳಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರಿಗೆ ಅವರು ಪ್ರಸ್ತುತ ರಾಜ್ಯ ರಾಜಕಾರಣದ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿ, ಗೊಂದಲವೇನೇ ಇರಲಿ, ಸಂಪುಟ, ವಿಸ್ತರಣೆ ಮತ್ತು ಬದಲಾವಣೆಯಾಗಲೇಬೇಕು ಎಂಬುದು ನನ್ನ ಒತ್ತಾಯ. ಈಗಾಗಲೇ ಹೈಕಮಾಂಡ್ ಸೇರಿದಂತೆ ಎಲ್ಲರ ಮನೆ ಬಾಗಿಲಿಗೂ ಹೋಗಿ ಕಾಲಿಗೆ ಬಿದ್ದಿದ್ದೇನೆ.
ಹೈಕಮಾಂಡಿನ ಕೈ-ಕಾಲಿಗೂ ಬಿದ್ದು ಸಾಕಾಗಿದೆ. ಎಲ್ಲರೂ ಪ್ರೀತಿಯಿಂದ ಮಾತನಾಡಿಸಿ ಭರವಸೆ ನೀಡಿದ್ದಾರೆ. ಗೊಂದಲ ಆದಷ್ಟು ಬೇಗ ನಿವಾರಣೆಯಾಗಲೇಬೇಕು. ತಡವಾದಷ್ಟು ಪಕ್ಷಕ್ಕೆ ಹೆಚ್ಚಿನ ಹಾನಿಯಾಗಲಿದೆ ಎಂದರು. ಶೀಘ್ರದಲ್ಲೇ ಹೈಕಮಾಂಡ್ ಗೊಂದಲಕ್ಕೆ ಇತಿಶ್ರೀ ಹಾಡಲೇಬೇಕು. ಸಚಿವ ಮಧುಬಂಗಾರಪ್ಪನವರು ಕೂಡ ನಾನು ಸಚಿವ ಆಗಲಿ ಎಂದು ಹಾರೈಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
0 Comments