ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಆ ಒಂದು ತಪ್ಪನ್ನು ಮಾಡದಿರಲಿ.


ನಾವು ನಡೆಸಿದ ಸಮೀಕ್ಷೆಯಂತೆ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿಯಾಗಿ *ಬಿ.ಪಿ ಹರೀಶ್* ಅವರತ್ತ ಒಲವು ತೋರಿದ್ದಾರೆ.

*ರಾಜ್ಯ ಬಿಜೆಪಿ ಹೈಕಮಾಂಡ್ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿ.ಪಿ ಹರೀಶ್ ಅವರಿಗೆ  ಟಿಕೆಟ್ ನೀಡಿದರೆ ಒಳ್ಳೆಯ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ.*

ಬಿಜೆಪಿಯು ಈ ವಿಚಾರದಲ್ಲಿ ಅತಿ ಜಾಗ್ರತೆಯಿಂದ ಟಿಕೇಟ್ ಘೋಷಣೆ ಮಾಡಲಿ.ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಈ ಬಾರಿ ಬೇಡವೆನಿಸುತ್ತದೆ.
ಹರಿಹರ:-ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅವಧಿಗೆ ಮುಂಚೆ ನಡೆಯುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.ಮುಂದಿನ ತಿಂಗಳು ರಾಜ್ಯಕ್ಕೆ ಚುನಾವಣಾ ಚಾಣಕ್ಯ ಅಮಿತ್ ಷಾ ಎಂಟ್ರಿ ಕೊಡುವ ಮೂಲಕ ರಣಕಹಳೆಗೆ ವೇದಿಕೆ ಸಿದ್ಧ ಮಾಡಲಿದ್ದಾರೆ.

ಈಗಾಗಲೇ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ಮಾಡಿ ಕೆಲವು ಹಳೆಯ ಮುಖಗಳಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಸ್ಥಾನ ನೀಡುವ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆ ಹೊಂದಿದೆ.ಮಿಷನ್ 150 ಟಾರ್ಗೆಟ್ ಮಾಡಿಕೊಂಡು ಚುನಾವಣೆ ಅಖಾಡಕ್ಕಿಳಿಯುವುದು ಬಿಜೆಪಿಯ ತಂತ್ರವಾಗಿದೆ.

150 ಸೀಟನ್ನು ಪಡೆದು ಅಧಿಕಾರದ ಕುರ್ಚಿಯ ಮೇಲೆ ಯಾವುದೇ ಅಡೆ-ತಡೆಗಳಿಲ್ಲದೆ ನಿರಾಳವಾಗಿ ಸರ್ಕಾರ ನಡೆಸೋದು ಬಿಜೆಪಿಯ ಪ್ಲಾನ್ ಆಗಿದೆ .

ಮಿಷನ್ 150 ಸೀಟು ಪಡೆಯಬೇಕಾದರೆ ಕೆಲವು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದು ಒಳ್ಳೆಯದು.
ವಿಧಾನಸಭಾ ವ್ಯಾಪ್ತಿಯ ಅಭ್ಯರ್ಥಿಯ ಜನಪ್ರಿಯತೆ,ಜಾತಿ ಲೆಕ್ಕಾಚಾರ,ಕ್ಷೇತ್ರ ವ್ಯಾಪ್ತಿಯಲ್ಲಿ ಜನಸಾಮಾನ್ಯರೊಂದಿಗೆ ಅಭ್ಯರ್ಥಿಯ ಸ್ಪಂದನೆ,ಒಂದು ವೇಳೆ ಮಾಜಿ ಶಾಸಕರಾಗಿದ್ದ ಪಕ್ಷದಲ್ಲಿ,ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ  ಕ್ಷೇತ್ರದ ಅಭಿವೃದ್ದಿಗೆ ಎಷ್ಟರಮಟ್ಟಿಗೆ ಶ್ರಮಿಸಿದ್ದರು.ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಎಷ್ಟು ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದರು.ಈ ಬಾರಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲುವು ಪಡೆಯಲು ಸಾಧ್ಯವೇ ?ಹೀಗೆ ಅನೇಕ ವಿಚಾರಗಳನ್ನು ಸ್ಥಳೀಯ ವಿಧಾನಸಭಾ ವ್ಯಾಪ್ತಿಯಲ್ಲಿ ಇರುವಂತಹ ವಾತಾವರಣಕ್ಕೆ ತಕ್ಕಂತೆ ಬಿಜೆಪಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ .ಆಗ ಮಿಷನ್ 150 ಟಾರ್ಗೆಟ್ ತಲುಪಲು ಸಾಧ್ಯವಾಗುತ್ತದೆ,ಆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಗುತ್ತದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು 150 ಸ್ಥಾನಗಳನ್ನು ಪಡೆಯಬೇಕು ಎಂಬ ರಣತಂತ್ರದೊಂದಿಗೆ ಚುನಾವಣೆಯ ಅಖಾಡಕ್ಕೆ ಇಳಿಯಬೇಕಾದರೆ "ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಆ ಒಂದು ತಪ್ಪನ್ನ ಮಾಡದಿರಲಿ"

ನಮ್ಮ ಮಂದಾರ ನ್ಯೂಸ್ ಸುದ್ದಿವಾಹಿನಿಯು ತಾಲ್ಲೂಕಿನಾದ್ಯಂತ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿದ ಸಮಯದಲ್ಲಿ ಮತದಾರರಿಂದ ಬಂದಿರುವ  ಅಭಿಪ್ರಾಯದಂತೆ ಜಾತಿ ಲೆಕ್ಕಾಚಾರ, ಅಭಿವೃದ್ಧಿಯ ಮಾನದಂಡ.ನಾಯಕನ ಜನಪ್ರಿಯತೆ,ಹಿಂದಿನ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ,ವಿವಿಧ ಸಮುದಾಯದ ಮುಖಂಡರೊಂದಿಗೆ ಇರುವಂತಹ ಬಾಂಧವ್ಯ,ಹೀಗೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಹೊಟೇಲ್ ಗಳು, ಸಣ್ಣ,ಸಣ್ಣ ಗೂಡಂಗಡಿಗಳು,ಹೊಲದಲ್ಲಿ  ಕೆಲಸ ಮಾಡುವ ರೈತರು,ಮತದಾನದ ಹಕ್ಕು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು.ಗ್ರಾಮಗಳಲ್ಲಿರುವ ಸಂಘಟನೆಯ ಕಾರ್ಯಕರ್ತರು,ಗುತ್ತಿಗೆದಾರರು ,ಕಾರ್ಮಿಕರು,ಮನೆಯಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುವ ಗೃಹಿಣಿಯರು ,ಮುಪ್ಪಿನಲ್ಲಿ ಸಮಯ ಕಳೆಯಲು ಮರದ ಕಟ್ಟೆಯ ಮೇಲೆ ಕುಳಿತುಕೊಳ್ಳುವ ಪಿಂಚಣಿ ಪಡೆಯುವ, ಪಡೆಯದೇ ಇರುವ ವೃದ್ಧರು, ಅಂಗವಿಕಲರು,ಹೀಗೆ ನಾನಾ ವರ್ಗದ ಜನರಿಂದ ಬಂದಿರುವ ಅಭಿಪ್ರಾಯದಂತೆ ನಾವು ಈ ಈ ಸಮೀಕ್ಷೆಯನ್ನು  ಬಿಜೆಪಿ ಹೈಕಮಾಂಡ್ ಮುಂದೆ ಇಡಲು ಇಚ್ಛಿಸುತ್ತೇವೆ.
ನಾವು ಒಟ್ಟಾರೆ ನಡೆಸಿದ್ದು ಸರ್ವಪಕ್ಷದ ಸರ್ವ ಅಭ್ಯರ್ಥಿಗಳ ಸಮೀಕ್ಷೆ. ಅದರಲ್ಲಿ ಒಂದು ಭಾಗ ಬಿಜೆಪಿ ಅಭ್ಯರ್ಥಿಗೆ ಸಂಬಂಧಿಸಿದ ಸಮೀಕ್ಷೆಯ ವರದಿಯನ್ನ ಮುಂದಿಡುತ್ತಿದ್ದೇನೆ.

ಮುಂದಿನ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಬಿ.ಪಿ
ಹರೀಶ್ ಅವರಿಗೆ ಟಿಕೆಟ್ ನೀಡಿದರೆ ಮುಂದೆ ಬರಲಿರುವ ವಿಧಾನಸಭೆ  ಚುನಾವಣೆಯಲ್ಲಿ ಅನ್ಯ ಪಕ್ಷದ ಅಭ್ಯರ್ಥಿಗಳೊಂದಿಗೆ ಉತ್ತಮ ರೀತಿಯ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ .ಬಹುತೇಕ ಕ್ಷೇತ್ರದ ಮತದಾರರು ಬಿಜೆಪಿ ಅಭ್ಯರ್ಥಿಯಾಗಿ ಬಿ. ಪಿ.ಹರೀಶ್ ಅವರತ್ತ  ಒಲವು ತೋರಿದ್ದಾರೆ.ಇದೊಂದು ಬಾರಿ ಬಿ.ಪಿ ಹರೀಶ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಬೇಕು.ಅವರಿಂದ ಮಾತ್ರ ಬಿಜೆಪಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯವಾಗಿದೆ .

ಕ್ಷೇತ್ರದ ಮತದಾರರ ಅಭಿಪ್ರಾಯದಂತೆ ಬಿಜೆಪಿ ಈ ಬಾರಿ ಯಾವುದೇ ತಪ್ಪನ್ನು ಮಾಡದೆ ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿ.ಪಿ.ಹರೀಶ್ ಅವರಿಗೆ ಟಿಕೆಟ್ ನೀಡುವುದು ಒಳಿತು.ಮುಂದಿನ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಿ.ಅಲ್ಲಿಯವರೆಗೆ ಪಕ್ಷದ ಆಕಾಂಕ್ಷಿ  ಅಭ್ಯರ್ಥಿಗಳು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ.ಆದ್ದರಿಂದ ತಾಲ್ಲೂಕಿನ ಮತದಾರರ ಅಭಿಪ್ರಾಯದಂತೆ ಬಿಜೆಪಿ ಈ ಬಾರಿ "ಆ ಒಂದು ತಪ್ಪನ್ನು ಮಾಡದಿರಲಿ" ಎಂಬ ಬರಹದ ಮೂಲಕ ತಮ್ಮ ಮುಂದೆ ......

ಈ ಸಮೀಕ್ಷೆ ಕ್ಷೇತ್ರದ ಮತದಾರರಿಂದ ಸಂಗ್ರಹಿಸಿದ ಮಾಹಿತಿಯ ವರದಿಯಾಗಿರುತ್ತದೆ ವಿನಃ ಯಾವುದೇ ಪಕ್ಷದ ಅಭ್ಯರ್ಥಿಯ ಪರ-ವಿರೋಧದ ವರದಿಯಾಗಿರುವುದಿಲ್ಲ .

ಪತ್ರಕರ್ತನಾಗಿ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಜನಸಾಮಾನ್ಯರ ಧ್ವನಿಯಾಗಿ.ನೈಜ್ಯ ಸತ್ಯ ವಿಚಾರವನ್ನ ಜನರ ಮುಂದೆ ಇಡುವುದು ಮಾಧ್ಯಮದ ಆದ್ಯ ಕರ್ತವ್ಯ ಆ ನಿಟ್ಟಿನಲ್ಲಿ ಮಂದಾರ ನ್ಯೂಸ್ ದಿಟ್ಟ ಹೆಜ್ಜೆ ಇಟ್ಟಿದೆ .

ಎಲ್ಲಾ ಸಮುದಾಯದ, ಎಲ್ಲಾ ಪಕ್ಷದ,ಕ್ಷೇತ್ರದ ಜನಸಾಮಾನ್ಯರ ಧ್ವನಿ "ಮಂದಾರ ನ್ಯೂಸ್" 

ಪ್ರಕಾಶ್ ಮಂದಾರ 
ಸಂಪಾದಕರು.
888049990

Post a Comment

0 Comments