ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಉಚ್ಚಾಟನೆ !?


ಶಿವಮೊಗ್ಗ: ಕರ್ನಾಟಕ ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ಇಂದು ಉಚ್ಚಾಟಿಸಲಾಗಿದೆ.

ಶಿವಮೊಗ್ಗದಲ್ಕಿ ಇಂದು  ಜರುಗಿದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 
ಚಂದ್ರಶೇಖರ್ ಅವರು ತಮ್ಮ‌ಮೇಲೆ ಬಂದ ಹಣ ಕೇಳಿದ ಆರೋಪವನ್ನು ನಿರಾಕರಿಸಿಲ್ಲ. 
ಇದರಿಂದ ಸಂಘದವರೆಲ್ಲ ತಲೆತಗ್ಗಿಸುವಂತಾಗಿದೆ. ರೈತ ಚಳವಳಿಗೆ ಇದು ಕಪ್ಪು ಚುಕ್ಕೆಯಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ವಿರುದ್ಧ ತನಿಖೆಗೆ ನಿರ್ಧರಿಸಲಾಗಿದೆ. ಅವರೇ ರಾಜಿನಾಮೆ ಕೊಟ್ಟು ಸಂಘದ ಮರ್ಯಾದೆ ಉಳಿಸಬೇಕಿತ್ತು. ಆದರೆ ಅದಕ್ಕೆ ಒಪ್ಪಲಿಲ್ಲ. ಇದರಿಂದಾಗಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ವಿವರಿಸಿದರು.

Post a Comment

0 Comments