ಹರಿಹರ :ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ರಿ.ಸ. ನಂ.52 ರಲ್ಲಿನ 2-24 ಎ-ಗು ಇನಾಮ್ ಜಮೀನನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು .ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ಜಾಗವನ್ನು ಹದ್ದುಬಸ್ತು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವನ್ನ ಹರಿಹರ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್ ಗೋವಿಂದ ಮಾಡಿದ್ದಾರೆ.
ಇಂದು ತಾಲ್ಲೂಕಿನ ಬೊಂಗಾಳೆ ಮೆಡಿಕಲ್ ಸರ್ಕಲ್ನಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು .ಈ ಸಂದರ್ಭದಲ್ಲಿ ನಮ್ಮ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು .ಶಾಲೆಗೆ ನೀಡಿರುವಂಥ ದಾನದ ರೂಪದ ಸರ್ಕಾರಿ ಜಾಗವನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ರಿ.ಸ.ನಂ.52 ರಲ್ಲಿನ ಸುಮಾರು 2 ಎಕರೆ 24 ಗುಂಟೆ ಜಮೀನು ಮಂಜೂರಾತಿ ಆಧಾರದ ಮೇಲೆ ಈ ಹಿಂದೆ ಅಂದರೆ 1955 ರಲ್ಲಿ ವಿನಾಯಕ್ ಜೋಶಿ ಎಂಬ ಬ್ರಾಹ್ಮಣ ಕುಟುಂಬವು ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಶಾಲಾ ಅಭಿವೃದ್ಧಿಗಾಗಿ ಜಮೀನನ್ನು ದಾನವಾಗಿ ನೀಡಿದ್ದರು.ದಾನವಾಗಿ ನೀಡಿರುವ ಜಮೀನನ್ನು ಶಾಲಾ ಮಕ್ಕಳಿಗೆ ಆಟದ ಮೈದಾನಕ್ಕಾಗಿ ಮೀಸಲಿಟ್ಟಿದ್ದರು.ಶಾಲಾ ಮೈದಾನಕ್ಕಾಗಿ ಕಾಯ್ದಿರಿಸಲಾದ ಜಮೀನನ್ನು ಸದರಿ ಜಮೀನಿನ ಸರ್ವೇ ನಂಬರಿನ ಅಕ್ಕಪಕ್ಕದ ಜಮೀನಿನ ಮಾಲೀಕರು ದಾನದ ರೂಪದಲ್ಲಿ ನೀಡಿದಂಥ ಸರ್ಕಾರಿ ಜಮೀನನ್ನು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿದ್ದಾರೆ.ಒತ್ತುವರಿ ಜಾಗವನ್ನು ಬಿಡಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ.ಅಲ್ಲದೆ ತಾಲ್ಲೂಕು ಕೇಂದ್ರದಿಂದ ಗಂಗನರಸಿ ಗ್ರಾಮದ ಅವರಿಗೆ ಜೈ ಕರ್ನಾಟಕ ಸಂಘಟನೆಯ ವತಿಯಿಂದ ಪಾದಯಾತ್ರೆಯನ್ನು ಸಹ ನಡೆಸಿದ್ದೇವೆ .ಆದರೆ ಈ ದಪ್ಪ ಚರ್ಮದ ಎಂಜಲು ಕಾಸಿಗೆ ಕೈಯೊಡ್ಡುವ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಶಾಲಾ ಜಾಗವನ್ನು ಮತ್ತೆ ಶಾಲಾ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.ಆದ್ದರಿಂದ ಇಂದು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬೇಸತ್ತು ಮತ್ತೊಮ್ಮೆ ತಾಲ್ಲೂಕಿನಲ್ಲಿ ದಾನದ ರೂಪದಲ್ಲಿ ಶಾಲೆಗೆ ನೀಡಿರುವ ಸರ್ಕಾರಿ ಜಮೀನನ್ನು ಗುರುತಿಸಿ ಹದ್ದುಬಸ್ತು ಮಾಡಿಕೊಡುವಂತೆ ಆಗ್ರಹಿಸಿ ಇಂದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ .ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ಹೇಳಿದರು .
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸದರಿ ಸರ್ವೆ ನಂಬರಿನ ಜಾಗವನ್ನು ಹದ್ದುಬಸ್ತು ಮಾಡಿ ಹಾಗೂ ಶಾಲಾ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಅಕ್ಕಪಕ್ಕದ ಜಮೀನಿನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೂ,ಸರ್ಕಾರಿ ಶಾಲಾ ಗಡಿ ಭಾಗವನ್ನು ಗುರುತಿಸಿ ಕೊಡುವವರಿಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂಬ ಎಚ್ಚರಿಕೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನೀಡಿದರು.
ಹರಿಹರದ ಜೈಕರ್ನಾಟಕ ಸಂಘಟನೆಯ ಹೋರಾಟಗಾರರು ತಾಲ್ಲೂಕಿನ ಜಲ್ವಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದ್ದಾರೆ.ಆದರೆ ಇವರ ಹೋರಾಟಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಗೌರವ ಕೊಡದೆ ಇರುವುದು ಅವರ ದುರಹಂಕಾರದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ.
ಹರಿಹರ ತಾಲ್ಲೂಕಿನಲ್ಲಿ ಅದರಲ್ಲೂ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕಳೆದ ಹದಿನೈದು ಇಪ್ಪತ್ತು ವರ್ಷದಿಂದ ಬೇರೆ ಕಡೆ ವರ್ಗಾವಣೆಯಾಗದೆ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.ತಮ್ಮ ಹುದ್ದೆಯಿಂದ ಮುಂಬಡ್ತಿ ಪಡೆದರು ಸಹ ವರ್ಗಾವಣೆ ಆಗುತ್ತಿಲ್ಲ .ಜಾತಿಯ ಬಲದಿಂದ,ಅಧಿಕಾರದ ಬಲದಿಂದ ,ಹಣದ ಬಲದಿಂದ ಆಳುವಂಥ ಸರ್ಕಾರಕ್ಕೆ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವನ್ನು ನೀಡಿ ಒಂದೇ ಕಡೆ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ .ಇದರಿಂದ ಜನ ಸಾಮಾನ್ಯರ ಕೆಲಸ ಕಾರ್ಯಗಳು ಸುಲಲಿತವಾಗಿ ನಡಿಯದೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ.ಇದರಿಂದ ತಾಲ್ಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿದಿನ ಕಚೇರಿಗೆ ಅಲೆದು ಅಲೆದು ಬೇಸತ್ತು ಹೋಗಿದ್ದಾರೆ.
ಆಳುವಂತಹ ಸರ್ಕಾರಗಳು ಸರ್ಕಾರದ ಆದೇಶ ಸುತ್ತೋಲೆ ಯಂತೆ ಪ್ರತಿ ಸರ್ಕಾರಿ ಕಚೇರಿಯ ಅಧಿಕಾರಿಗಳನ್ನು ಪ್ರತಿ 3ವರ್ಷಕ್ಕೊಮ್ಮೆ ವರ್ಗಾವಣೆ ಮಾಡಿದಾಗ ಮಾತ್ರ ತಾಲ್ಲೂಕಿನ ಜನ ಸಾಮಾನ್ಯರ ಕೆಲಸ ಕಾರ್ಯಗಳು ಸುಲಲಿತವಾಗಿ ಸಮಯಕ್ಕೆ ಸರಿಯಾಗಿ ಮಾಡಿಕೊಡಲು ಸಾಧ್ಯವಾಗುತ್ತದೆ .ಆ ನಿಟ್ಟಿನಲ್ಲಿ ಹರಿಹರ ತಾಲ್ಲೂಕು ಕಚೇರಿಗೆ ನೂತನವಾಗಿ ದಂಡಾಧಿಕಾರಿಗಳು ಬಂದಿದ್ದು ಇವರಿಂದ ಕಂದಾಯ ಇಲಾಖೆಯಲ್ಲಿ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ನೌಕರರ ಮಾಹಿತಿಯನ್ನು ಪಡೆದು ಬೇರೆ ಕಡೆ ವರ್ಗಾವಣೆಗೆ ಆಳುವಂಥ ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಗಾವಣೆ ಮಾಡಿಸುತ್ತಾರೆ ?ಅಥವಾ ಎಲ್ಲರಂತೆ ಹೊಸತರಲ್ಲಿ ಬಂದಂತಹ ಅಧಿಕಾರಿಗಳು ತುಂಬಾ ಕಟ್ಟುನಿಟ್ಟಿನ ಅಧಿಕಾರಿಗಳು ಎಂದು ತೋರಿಸಿಕೊಂಡು ತದನಂತರ "ಅದೇ ರಾಗ ಅದೇ ಹಾಡು" ಎನ್ನುವಂತಹ ಅಧಿಕಾರಿ ಆಗುತ್ತಾರೋ ಕಾದು ನೋಡಬೇಕಾಗಿದೆ.
ಈ ಸಂದರ್ಭದಲ್ಲಿ ಮಧು, ಬಸವರಾಜ್, ಶಬರೀಶ್, ಮಣಿ, ಭರತ್, ಪರಮೇಶ್, ಶೀನಾ, ಪುನೀತ್, ದೀಪು,ಹಿಸುಪ್,ವರ್ಷ ಸುದೀಪ್, ವೀರೇಶ, ತರುಣ, ಮರಿಯಾ, ಬಾಬು, ಕಾರ್ತಿಕ್ ಸೇರಿದಂತೆ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಕಾಶ್ ಮಂದಾರ.
ಸಂಪಾದಕರು.
8880499904
0 Comments