ನಂದಿನಿ ಲಾಡ್ಜಿನಲ್ಲಿ ಯುವಕ ಆತ್ಮಹತ್ಯೆ;ಕಾರಣ ನಿಗೂಢ!?


ಹರಿಹರ:ನಗರದ ಪಿಬಿ ರಸ್ತೆಯಲ್ಲಿರುವ ನಗರಸಭೆಯ ಮುಂಭಾಗದ ನಂದಿನಿ ಲಾಡ್ಜಿನಲ್ಲಿ ಭುವನೇಶ್ವರ್ ಸರಿಸುಮಾರು ನಲವತ್ತು ವರ್ಷದ ಜಗಳೂರು ತಾಲ್ಲೂಕಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ .
2ದಿನದ ಹಿಂದೆ 18/6/22/ರಂದು ನಂದಿನಿ ಲಾಡ್ಜಿನಲ್ಲಿ ರೂಮೊಂದನ್ನು ಪಡೆದಿದ್ದ.ಕಳೆದ 2ದಿನದಿಂದ ಯುವಕ ಬಾಗಿಲನ್ನು  ತೆರೆಯದಿದ್ದ ಕಾರಣ ಅನುಮಾನಗೊಂಡ ಲಾಡ್ಜ್ ಮಾಲೀಕರು ನಗರ ಠಾಣೆಯ ಪೊಲೀಸ್ ಠಾಣಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ .

ಪೊಲೀಸ್ ಠಾಣಾಧಿಕಾರಿ ಸುರೇಶ್ ಅವರು  ಯುವಕನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಕುಟುಂಬದ ಸದಸ್ಯರಿಗೆ ವಿಷಯ ಮುಟ್ಟಿಸಿದ್ದಾರೆ .ಕುಟುಂಬದ ಸದಸ್ಯರು ಬಂದ ನಂತರ ಲಾಡ್ಜ್ ವೊಂದರಲ್ಲಿ ಯುವಕನ ಕೋಣೆಯ ಬಾಗಿಲನ್ನು ಪೊಲೀಸ್ ಅಧಿಕಾರಿ ಸುರೇಶ್ ಅವರ ಸಮ್ಮುಖದಲ್ಲಿ ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಮುರಿದು ಒಳಪ್ರವೇಶಿಸಿದ್ದಾರೆ .
ಯುವಕ ಕೋಣೆಯೊಂದರ ಬಾತ್ ರೂಂನಲ್ಲಿ ಅಂಗಾತವಾಗಿ ಬಿದ್ದಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂಬ ಖಚಿತ ಮಾಹಿತಿ ತಿಳಿದುಬಂದಿಲ್ಲ .

ಯುವಕ 2ದಿನದ ಹಿಂದೆ ಮೃತಪಟ್ಟಿದ್ದಾನೆ. ಕಾರಣ ಮೃತಪಟ್ಟ ವ್ಯಕ್ತಿಯ ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿತ್ತು.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .ಮುಂದಿನ ವಿಚಾರಣೆಯಿಂದ ಸತ್ಯ ತಿಳಿದು ಬರಲಿದೆ .

ವರದಿ.ತಿಪ್ಪೇಶ್ ಎಲ್ .

Post a Comment

0 Comments