ಹರಿಹರ:ತಾಲ್ಲೂಕಿನ ಅಪ್ಪಟ ಹಿಂದೂ ಹುಲಿ,ಆರೆಸ್ಸೆಸ್ ಸ್ವಯಂ ಕಾರ್ಯಕರ್ತ, ಹಿಂದು ಕಾರ್ಯಕರ್ತರಿಗೆ ತೊಂದರೆಯಾದಾಗ ಅವರ ರಕ್ಷಣೆಗಾಗಿ ಮೊದಲು ಧಾವಿಸಿ ಬರುವ ನಾಯಕ.ತಾಲ್ಲೂಕಿನ ಸಮಸ್ತ ಹಿಂದೂಗಳ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಏಕೈಕ ತಾಲ್ಲೂಕಿನ ಹುಲಿ ಎಂದರೆ ಅದು ಬಿ. ಪಿ ಹರೀಶ್.
ಸಿಂಹದ ರೀತಿಯಲ್ಲಿ ಗರ್ಜಿಸುತ್ತ ತಾಲ್ಲೂಕಿನ ಹಿಂದೂಗಳ ಪರವಾಗಿ ಅಂದಿನಿಂದ ಇಂದಿನವರೆಗೂ ಹೋರಾಡುತ್ತಿರುವುದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಪಿ ಹರೀಶ್ ಅವರು.
ರಾಷ್ಟ್ರ, ರಾಷ್ಟ್ತ್ರಧ್ವಜಕ್ಕೆ, ರಾಷ್ಟ್ರಾಭಿಮಾನಕ್ಕೆ ಹಾಗೂ ಹಿಂದೂ ಕಾರ್ಯಕರ್ತರಿಗೆ ತೊಂದರೆಯಾಗಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಖುದ್ದು ಸ್ಥಳಕ್ಕೆ ಧಾವಿಸಿ ಬರುವ ಮುಂಚೂಣಿಯ ನಾಯಕರೆಂದರೆ ಅದು ಬಿ. ಪಿ ಹರೀಶ್
ಹಿಂದೂ ಕಾರ್ಯಕರ್ತರ ರಕ್ಷಣೆಗೆ ಪೊಲೀಸ್ ಇಲಾಖೆಯಿಂದ ಮಾಡಲು ಸಾಧ್ಯವಾಗದಿದ್ದರೆ ಆ ಅಧಿಕಾರವನ್ನು ನಾವೇ ಚಲಾಯಿಸುತ್ತೇವೆ ಎಂದು ಗುಡುಗುವ ಮೂಲಕ ಸಮಸ್ತ ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಿರುವ ಬಿ ಪಿ ಹರೀಶ್ ಇಂದು ತಾಲ್ಲೂಕಿನ ಬಿಜೆಪಿಯ ಕಾರ್ಯಕರ್ತರು ಮತ್ತು ಹಿಂದೂಪರ ಸಂಘಟನೆಗಳ ಪರ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ.ಕಾರ್ಯಕರ್ತರ ಜೊತೆಯಲ್ಲಿ ಇದ್ದು ಅವರೊಂದಿಗೆ ಬೆರೆತು ಅವರ ಕಷ್ಟ -ಸುಖದಲ್ಲಿ ಭಾಗಿಯಾಗಿ ಸದಾ ನಿಮ್ಮ ಜೊತೆ ಇರುತ್ತೇವೆ ಎಂಬ ಧೈರ್ಯ ತುಂಬುವುದರ ಜೊತೆಗೆ ಕಾರ್ಯಕರ್ತರ ಪ್ರತಿಕ್ಷಣದ ಮಾಹಿತಿಯನ್ನು ಪಡೆಯುತ್ತಾ ಆಳುವಂಥ ಸರ್ಕಾರ ತಮ್ಮದೇ ಇರಲಿ ಅಥವಾ ಬೇರೆ ಪಕ್ಷವೇ ಆಗಿರಲಿ ಯಾವುದಕ್ಕೂ ಅಂಜದೆ .ಸಂಬಂಧಿಸಿದ ಇಲಾಖೆಯನ್ನು ಎದುರುಹಾಕಿಕೊಂಡು ಪಕ್ಷದ ಕಾರ್ಯಕರ್ತರನ್ನು ರಕ್ಷಣೆ ಮಾಡುತ್ತಿರುವ ಬಿ.ಪಿ ಹರೀಶ್. ಇಂದು ಹರಿಹರ ತಾಲ್ಲೂಕಿನ ಸಮಸ್ತ ಹಿಂದೂ ಕಾರ್ಯಕರ್ತರ ಗಟ್ಟಿ ಧ್ವನಿಯಾಗಿ ಅವರ ಜೊತೆ ಜೊತೆಯಾಗಿ ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹಿಂದು ಕಾರ್ಯಕರ್ತರ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೆ ತಮ್ಮ ಕಾರ್ಯಕರ್ತರ ಪರವಾಗಿ ಎಲ್ಲರನ್ನೂ ಎದುರು ಹಾಕಿಕೊಂಡು ಸಿಂಹದ ಘರ್ಜನೆ ಯಲ್ಲಿ ಹೆಜ್ಜೆ ಹಾಕುತ್ತಿರುವ ಬಿ.ಪಿ ಹರೀಶ್ ಇಂದು ಹರಿಹರ ತಾಲ್ಲೂಕಿನ ಸಮಸ್ತ ಹಿಂದೂ ಕಾರ್ಯಕರ್ತರ ಆಪದ್ಬಾಂಧವರಾಗಿ ಸಮರ್ಥವಾಗಿ ದೇಶದ್ರೋಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ .ನಿನ್ನೆಯ ದಿನ ಮಲೆಬೆನ್ನೂರಿನಲ್ಲಿ ದೇಶದ್ರೋಹಿಗಳಿಂದ ಭಾರತದ ಧ್ವಜಕ್ಕೆ ಅವಮಾನವನ್ನು ಉಗ್ರವಾಗಿ ಖಂಡಿಸುವ ಮೂಲಕ ತಮ್ಮ ಆಕ್ರೋಶವನ್ನು ಮಾತಿನ ಮೂಲಕ ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ ."ನಿಮ್ಮಿಂದ ಸಾಧ್ಯವಾಗದಿದ್ದರೆ ಹೇಳಿ, ನಮ್ಮ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ"ಒಂದು ವೇಳೆ ನಾವೇನಾದರೂ ಅಧಿಕಾರವನ್ನ ಚಲಾಯಿಸಿದರೆ ದೇಶದ್ರೋಹಿಗಳು ದೇಶದಿಂದಲೇ ಓಡಿ ಹೋಗುತ್ತಾರೆ .ಇದುವರೆಗೂ ತಾಳ್ಮೆ ವಹಿಸಿದ್ದು ಸಾಕಾಗಿದೆ. ಇನ್ನು ಮುಂದೆ ಅದು ಅಸಾಧ್ಯವಾದ ಮಾತು .ಕೂಡಲೇ ದೇಶದ್ರೋಹಿಗಳನ್ನ ಬಂಧಿಸುವ ಕೆಲಸ ಮಾಡಿ, ಇಲ್ಲದಿದ್ದರೆ ಆ ಕೆಲಸವನ್ನು ನಾವೇ ಮಾಡುತ್ತೇವೆ. ಆ ಅವಕಾಶವನ್ನು ಮಾಡಿಕೊಡಬೇಡಿ ಎಂದು ಗಟ್ಟಿ ಧ್ವನಿಯಲ್ಲಿ ತಮ್ಮ ಆಕ್ರೋಶವನ್ನ ಹೊರಹಾಕುವುದರ ಜೊತೆಗೆ ಸಂಬಂಧಿಸಿದ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.ಇಂಥ ಮಾತು ಬಿ.ಪಿ.ಹರೀಶ್ ಹೊರತು ಮತ್ಯಾರಿಂದಲೂ ಬರಲು ಸಾಧ್ಯವಿಲ್ಲ ಅಲ್ಲವೇ ?
0 Comments