ಗಾಂಧಿ ಜಯಂತಿ ಪ್ರಯುಕ್ತ ಖಾದಿ ಉಡುಪುಗಳನ್ನು ಖರೀದಿಸಿದ ಬಿ.ಪಿ ಹರೀಶ್.!!


ಹರಿಹರ:ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ನಡೆಸಿ ಭಾರತದ ಸ್ವಾತಂತ್ರಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎನಿಸಿಕೊಂಡ ಗಾಂಧೀಜಿ ಅವರ ಜಯಂತಿ ಇಂದು .

ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಖಾದಿ ಉಡುಪುಗಳನ್ನು ಖರೀದಿಸುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹರಿಹರದ ಮಾಜಿ ಶಾಸಕ ಬಿ.ಪಿ ಹರೀಶ್ ಅವರು ತಾಲ್ಲೂಕಿನ ಜನತೆಗೆ ಕರೆ ನೀಡಿದರು.
ಇಂದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಪಿ ಹರೀಶ್ ಅವರು ಖಾದಿ ಭಂಡಾರದಲ್ಲಿ ಖಾದಿ ಉಡುಪುಗಳನ್ನು ಖರೀದಿಸುವ ಮೂಲಕ ಮಹಾತ್ಮ ಗಾಂಧೀಜಿ ಮತ್ತು ಲಾಲಬಹದ್ದೂರ ಶಾಸ್ತ್ರಿಜಿಯವರ ಜಯಂತಿ ಯನ್ನು ಅರ್ಥಪೂರ್ಣವಾಗಿ ಆಚರಿಸಿದರು .ಅಲ್ಲದೆ ಎಲ್ಲರೂ ಖಾದಿ ಉಡುಪುಗಳನ್ನು ಖರೀದಿಸುವಂತೆ ಕರೆ ನೀಡಿದರು .

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್ ಮಾಜಿ ತಾಲ್ಲೂಕು ರಾಜು ರೋಖಡೆ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಜತೆ ಇದ್ದರು.

Post a Comment

0 Comments