ಹರಿಹರ ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ಎಟಿಎಂ ಕಳ್ಳನ ಬಂಧನ.!!


ಹರಿಹರ :ಎಟಿಎಂಗೆ ಹಣ ಬಿಡಿಸಲು ಹೋದ ಹಿರಿಯ ನಾಗರಿಕರಿಗೆ ಹಾಗೂ  ಸಾರ್ವಜನಿಕರಿಗೆ ಹಣ ಬಿಡಿಸಿ ಕೊಡುವ ನೆಪದಲ್ಲಿ ಎಟಿಎಂ ಬದಲಾಯಿಸಿ ಪಿನ್ ನಂಬರ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದ ಆರೋಪಿತನನ್ನು ಹರಿಹರದ ಪೋಲಿಸ್ ಇಲಾಖೆಯವರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಶ್ರೀಮತಿ ಕನ್ನಿಕಾ ಸಕ್ರಿವಾಲ್ ಐಪಿಎಸ್, ದಾವಣಗೆರೆ ಗ್ರಾಮಾಂತರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸತೀಶ್ ಕುಮಾರ್.ಯು ಸಿಪಿಐ ವೃತ್ತ ನಿರೀಕ್ಷಕರು ಹರಿಹರ ಇವರ ನೇತೃತ್ವದಲ್ಲಿ ಶಂಕರ್ ಗೌಡ ಪಾಟೀಲ್ ಪಿಎಸ್ ಐ ಮತ್ತು ಶ್ರೀ ಚಿದಾನಂದಪ್ಪ ಪಿಎಸ್ಸೈ ಯವರ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಶ್ರೀ ಮಂಜುನಾಥ, ಶ್ರೀ ಮಂಜುನಾಥ್ ಕ್ಯಾತಮ್ಮನವರ,ಶ್ರೀ  ಹನುಮಂತಪ್ಪ ಗೋಪನಾಳ ರವರ ತಂಡ ದಿನಾಂಕ 1-10-22 ರಂದು ಹರಿಹರ ನಗರದ ಎಸ್ ಬಿಐ ಬ್ಯಾಂಕ್ ಎಟಿಎಂ ಹತ್ತಿರ ಅರುಣ್ ಕುಮಾರ್ (35) ಶಿರಾ ತಾಲ್ಲೂಕು,ತುಮಕೂರು ಜಿಲ್ಲೆ ಎಂಬ ಆರೋಪಿತರನ್ನು ದಸ್ತಗಿರಿ ಮಾಡಿದ್ದು ಅಲ್ಲದೆ ಸದರಿ ಆರೋಪಿತನ ದಾವಣಗೆರೆ ಜಿಲ್ಲೆ ಹರಿಹರ ನಗರ ಠಾಣೆಯಲ್ಲಿ ಗುನ್ನೆ ನಂ 18/2022,182/2022,183/2022,185/2022,185/2022,ಬಸವನಗರ ಠಾಣೆ ಗುನ್ನೆ ನಂ 25/2022,ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ 47/2022, ರ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದ ಹಿನ್ನೆಲೆ ಆರೋಪಿತರ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.
ಹರಿಹರ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಆರೋಪಿ  ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿತ ಕೃತ್ಯಕ್ಕೆ ಸಂಬಂಧಿಸಿದಂತೆ 3ಲಕ್ಷ₹ನಗದು ಹಣ ಮೂವತ್ತೆರಡು ಎಟಿಎಂ ಕಾಡುಗಳು ಹಾಗೂ ಕೆಎ 03 ಎಂಜೆ9646 ಕಾರನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ.ಆರೋಪಿತನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ತನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಹರಿಹರದ ಪೊಲೀಸ್ ಇಲಾಖೆಯವರು ಕಾರ್ಯಕ್ಕೆ ಮಾನ್ಯ ಜಿಲ್ಲಾ ವರಿಷ್ಠಾಧಿಕಾರಿ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್, ದಾವಣಗೆರೆ.ಹಾಗೂ ಶ್ರೀ ಆರ್ ಬಿ ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ  ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಟಿಎಂ ಗಳಲ್ಲಿ ಅಪರಿಚಿತ ವ್ಯಕ್ತಿಗಳ ಬಳಿ ಎಟಿಎಂ ಕಾರ್ಡ್ ಹಾಗೂ ಪಾಸ್ ವರ್ಡ್ ಗಳನ್ನು ನೀಡಬೇಡಿ, ಒಂದು ವೇಳೆ ನೀಡಿದ್ದೇ ಆದಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಾಗೂ ಪಾಸ್ ವರ್ಡ್ ಗಳನ್ನು ಬಳಸಿಕೊಂಡು ನಿಮ್ಮ ಹಣವನ್ನು ಲಪಟಾಯಿಸುವ ಸಾಧ್ಯತೆಯಿರುತ್ತದೆ ಜಾಗರೂಕರಾಗಿರಿ!!!

Post a Comment

0 Comments