ಮಟ್ಕಾ ದಂಧೆ ಕಡಿವಾಣ ಹಾಕುವಲ್ಲಿ ಖಾಕಿ ವಿಫಲ.!?



ಇಂಡಿ : ತಾಲೂಕಿನಾದ್ಯಂತ ಮಟ್ಕಾ ದಂಧೆಯಿಂದ ಲಕ್ಷಾಂತರ ರೂ.ಗಳ ಅಕ್ರಮ ವಹಿವಾಟು ನಡೆಯುತ್ತಿದ್ದರೂ ಪೊಲೀಸರು ಇಲಾಖೆ ಕಣ್ಣುಮುಚ್ಚಿ ಕುಳಿತಿದ್ದು, ಬಡವರ ಬದಕು ಮೂರಾಬಟ್ಟೆಯಾಗಿದೆ.

ನಗರ ಸೇರಿದಂತೆ ತಾಲೂಕಿನ  ವಿವಿಧ ಗ್ರಾಮಗಳಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ರೂಗಿ ಗ್ರಾಮದ ಬಸ್ಸ ಸ್ಟಾಂಡ್ ಹತ್ತಿರ ಸುರೇಶ ಗುಡಿ ಎಂಬಾತ, ಯಾರಿಗೂ ಹೆದರದೆ ನಾನೇ ರಾಜ್ಯ ನಂದೇ ರಾಜ್ಯ ಎನ್ನುವ ಹಾಗೆ ಮೆರೆಯುತ್ತಿದ್ದಾನೆ. ಇವನಿಗೆ ಕಡಿವಾಣ ಅನ್ನೋದೇ ಇಲ್ಲ, ಗ್ರಾಮಸ್ಥರು ಹೊಟ್ಟೆ ಬಟ್ಟೆ ಕಟ್ಟಿ ದುಡಿದ ದುಡ್ಡನ್ನು ಮಕ್ಕಳು ಬಾಯಲ್ಲಿ ಮಣ್ಣು ಹಾಕಿ ಸುರೇಶ ಗುಡಿ ಅಲಿಯಾಸ್ (ಮಟ್ಕಾ ಸುರೇಶ ನ ಎದೆಮೇಲೆ ಸುರಿಯುತ್ತಿದ್ದಾರೆ.

ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಖಾಸಗಿ ಬಸ್‌ ನಿಲ್ದಾಣ, ಸಣ್ಣ ಪುಟ್ಟ ಟೀ ಅಂಗಡಿಗಳಲ್ಲಿ ,  ಗೌಪ್ಯವಾಗಿ ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದಾರೆ.
*ಮತ್ತೆ ಚಿಗುರಿದ ದಂಧೆ*: ಈ ಹಿಂದೆ ಇಂಡಿ ನಗರ ಸೇರಿದಂತೆ ಗ್ರಾಮೀಣ ಸ್ಟೇಷನ್ ಗೆ ಆಗಮಿಸಿದ ಹೆಚ್ ಡಿ ಆನಂದಕುಮಾರ ರೌಡಿ ಪರೇಡ್ ಸಮಯದಲ್ಲಿ ಆಗಮಿಸಿದ ಸಮಯದಲ್ಲಿ ಎಲ್ಲಾ ಪೊಲೀಸ್ ಸಿಬ್ಬಂದಿಳಿಗೆ ಖಡಕ್ ಸೂಚನೆ ನೀಡಿದ್ದರು. ಎಲ್ಲಾ ಪೊಲೀಸ್ ಸಿಬಂದಿಗಳು ತಮ್ಮ ತಮ್ಮ ಬಿಟ್ ಗಳಲ್ಲಿ ಒಸಿ ಮಟ್ಕಾ ಸಂಪೂರ್ಣ ಬಂದ್ ಮಾಡಿಸುವಂತೆ ಸೂಚನೆ ನೀಡಿದ್ದರು. ಆದರೆ ಬಿಟ್ ಗಳು ಮೂಕ್ ಪ್ರೇಕ್ಷಕರಂತೆ ಸುಮ್ಮನೆ ನೋಡುತ್ತಿರುವದು ವಿಪರ್ಯಾಸದ ಸಂಗತಿ. ಹಿಂದೆ ಪೊಲೀಸರು ಮಟ್ಕಾ ಆಟದ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ತಾಲೂಕಿನ ಮಟ್ಕಾ ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ದರು, . ಆದರೂ ಮಟ್ಕಾ ಮತ್ತೆ ಚಿಗುರಿಕೊಂಡಿದ್ದು, ಬಡವರ ಬದುಕನ್ನು ಮಟ್ಕಾ ತೆಗೆದುಕೊಳ್ಳುತ್ತಿದೆ.

*ಮೂರಾಬಟ್ಟೆಯಾಯ್ತು ಬದುಕು*: ಪ್ರತಿನಿತ್ಯ ಕೂಲಿನಾಲಿ ಮಾಡಿ ಬದುಕು ಸಾಗಿಸುವ ಮಂದಿ ಹಣದಾಸೆಗೆ ಬೆವರು ಹರಿಸಿ, ದುಡಿದ ಹಣವನ್ನು ಮಟ್ಕಾ ಆಟದಲ್ಲಿ ತೊಡಗಿಸಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನೂ ಮಧ್ಯಮ ವರ್ಗದ ಜನರು ಮೊಬೈಲ್‌ ಮೂಲಕ ಮಟ್ಕಾ ಆಟದಲ್ಲಿ ತೊಡಗಿಸಿಕೊಂಡಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ತಾಲೂಕಿನಲ್ಲಿ ಅದೆಷ್ಟೋ ಮಂದಿ ಹಣದ ಆಸೆಗೆ ಬಿದ್ದು ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡು ಊರು ಬಿಟ್ಟಿರುವ ಉದಾಹರಣೆಗಳು ಸಾಕಷ್ಟಿವೆ.

Post a Comment

0 Comments