ಏನೇ ಹೇಳ್ರಿ ಮತದಾರರೇ.ಸಾಗರಕ್ಕೆ ಗೋಪಾಲ ಬೆಸ್ಟ್.!!!



2023 ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರೇ ಅಭ್ಯರ್ಥಿಗಳಿಗೆ ಹಣವನ್ನು ನೀಡುತ್ತಿದ್ದಾರೆ. ಮತದಾರ ಅಭ್ಯರ್ಥಿಗೆ ಹಣ ನೀಡುತ್ತಿದ್ದಾನೆ, ಅಂದಮೇಲೆ ಅಭ್ಯರ್ಥಿ ಮತದಾರರ ಮನ ಗೆದ್ದಿದ್ದಾನೆ ಎಂದಲ್ಲವೇ? ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸಿ ವಾಮ ಮಾರ್ಗದ ಮೂಲಕ ಹಣ ಸಂಪಾದಿಸಿದ ಅಭ್ಯರ್ಥಿಗೂ , ಜನರ ಮಧ್ಯೆ ಇದ್ದು ಜನರ ಕಷ್ಟ ಸುಖವನ್ನು ಆಲಿಸಿ ಅವರೊಂದಿಗೆ ಸ್ನೇಹಿತನಂತೆ ವರ್ತಿಸುವ ನಡೆಯುವ ಜನನಾಯಕರ ನಡುವೆ ನಡೆಯುವ ರೋಚಕ ಹಣಾಹಣಿ ಈ ಬಾರಿಯ ವಿಧಾನಸಭಾ ಚುನಾವಣೆ.
ಮತದಾರರೇ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರವನ್ನು ಗಮನಿಸಿ ಮತದಾರರೇ ಈ ಬಾರಿ ಅಭ್ಯರ್ಥಿಗೆ ದೇಣಿಗೆ ರೂಪದಲ್ಲಿ ಹಣ ನೀಡುತ್ತಿದ್ದಾನೆ.

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇವರಿಗೆ ರಾಷ್ಟ್ರದಲ್ಲೆ ಪ್ರಥಮ ಎನ್ನುವಂತೆ ಮತದಾರ ಪ್ರಭುಗಳೇ ತಮ್ಮ ನೆಚ್ಚಿನ ಅಭ್ಯರ್ಥಿಗೆ ತಮ್ಮ ಕೈಲಾದ ಆರ್ಥಿಕ ಧನಸಾಯವನ್ನ ಕಾಣಿಕೆಯ ರೂಪದಲ್ಲಿ ತಾ ಮುಂದು ,ನಾ ಮುಂದು ಎನ್ನುವಂತೆ ನೀರತೊಡಗಿದರು ಆ ಮೂಲಕ ಇಡೀ ರಾಷ್ಟ್ರದ ಗಮನ ಸಾಗರ ವಿಧಾನಸಭಾ ಕ್ಷೇತ್ರದ ಮತದಾರರು ಸೆಳೆದರು.
ಸಾಗರ ವಿಧಾನಸಭಾ ಕ್ಷೇತ್ರ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೇಲೂರು ಗೋಪಾಲಕೃಷ್ಣ ಸರಳವಾಗಿ ನಾಮಪತ್ರವನ್ನು ಸಲ್ಲಿಸುತ್ತೇನೆ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು. ಬೇಳೊರು ಬೇಳೊರು ನಾಮಪತ್ರ ಸಲ್ಲಿಸುವ ಎರಡು ದಿನಗಳ ಹಿಂದೆ ಅವರ ಎದುರಾಳಿ ಅಭ್ಯರ್ಥಿ ಸಹಸ್ರಾರು ಜನರ ಸಮ್ಮುಖದಲ್ಲಿ ನಾಮಪತ್ರವನ್ನು ಸಲ್ಲಿಸಲಾಗಿತ್ತು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೇಳೂರು ಗೋಪಾಲಕಷ್ಣ ಅಭಿಮಾನಿಗಳಿಗೆ ಸರಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಕರೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಮತ್ತು ಬೇಳೂರು ಗೋಪಾಲಕೃಷ್ಣ ಅವರ ಮೇಲೆ ಅನುಕಂಪ ಎರಡು ಒಟ್ಟಿಗೆ ಹುಟ್ಟಿತು. ಆಗ ಕಾರ್ಯಕರ್ತರೇ ನಿರ್ಧರಿಸಿದರು ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮ ಸರಳವಾದರೂ ಅದ್ದೂರಿಯಾಗಿ ನಡೆಯಬೇಕು ನಾಯಕನ ಪ್ರೀತಿಯ ಕರೆಗೆ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕು ಎಂದು ಮತದಾರ ನಾಮಪತ್ರ ಸಲ್ಲಿಕೆ ಹಿಂದಿನ ದಿನವೇ ನಿರ್ಧರಿಸಿ ಒಂದು ತೀರ್ಮಾನಕ್ಕೆ ಬಂದೇ ಬಿಟ್ಟಿದ್ದ.

ಮತದಾನ ಹೇಗೆ ಗುಪ್ತವಾಗಿ ನಡೆಯುತ್ತದೆಯೋ ಹಾಗೆ ಮತದಾರ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ವಿಚಾರದಲ್ಲೂ ತನ್ನ ಗೌಪ್ಯತೆಯನ್ನ ಬೆಳಿಗ್ಗೆಯವರೆಗೂ ಕಾಯ್ದಿರಿಸಿಕೊಂಡಿದ್ದ. ಸಮಯ 10 ಗಂಟೆ ಆಯ್ತು ನೋಡಿ ಬಂತು ,ಬಂತು ನೋಡ್ರಿ ಕಾಗೋಡು ,ಬೇಳೊರು ಅದು ಯಾವ ರೀತಿಯಲ್ಲಿ ಜನ ಸಂಪಾದಿಸಿದ್ದಾರೆ ಎಂಬುದು ಸರಳವಾಗಿ ನಡೆಯಬೇಕಿದ್ದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಮತದಾರನ ನಿರ್ಧಾರದಂತೆ ಅದ್ದೂರಿಯಾಗಿ ನಡೆಯಿತು ವಿರೋಧಿಗಳು ಬೆಚ್ಚು ಬೀಳುವಂತೆ ಕಾರ್ಯಕ್ರಮ ನಡೆಯಿತು. 

ಸರಳವಾಗಿ ಕಾರ್ಯಕ್ರಮ ಎಂದು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿದ ಮತದಾರ ಪ್ರಭುಗಳು ಎಲ್ಲಿ ಮತದಾನದ ದಿನವೂ ಇದೇ ರೀತಿಯಲ್ಲೇ ಮತದಾನ ಮಾಡಿ ಬಿಡುತ್ತಾರೋ ಎಂಬ ಭಯ ವಿರೋಧಿ ಪಾಳೆಯದ ನಾಯಕರಲ್ಲಿ ಹುಟ್ಟಿದಂತು ಸತ್ಯ.
ಬೇಲೂರು ಹಣ ಸಂಪಾದಿಸಿಲ್ಲ ಜನ ಸಂಪಾದಿಸಿದ್ದಾರೆ ಜನರ ಪ್ರೀತಿಯ ಕರೆಗೆ ಓಗೊಟ್ಟು ಅವರೊಂದಿಗೆ ಸ್ನೇಹಿತನಂತೆ ಹೆಗಲ ಮೇಲೆ ಕೈ ಹಾಕಿ ಅವರೊಟ್ಟಿಗೆ ಬೆರೆತು ಅವರ ಕಷ್ಟ ಸುಖವನ್ನ ಶಾಂತಚಿತ್ತ ದಿಂದ ಆಲಿಸುವ ಸ್ವಭಾವ ಬೇಳೂರು ಗೋಪಾಲಕೃಷ್ಣ ಮೈಗೂಡಿಸಿಕೊಂಡ ಪರಿಣಾಮವೇ ನಿನ್ನೆಯ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದ ಜನ ಸೇರಿರುವುದೇ ಒಂದು ತಾಜಾ ಉದಾಹರಣೆ ಅಲ್ಲವೇ?

ಅದಕ್ಕೆ ಕಂಡ್ರಿ ಹೇಳೋದು. ಸಾಗರಕ್ಕೆ ಬೇಳೊರ್ ಗೋಪಾಲಕೃಷ್ಣ ಬೆಸ್ಟ್.!!




Post a Comment

0 Comments