ಮಂದಾರ ನ್ಯೂಸ್ ಹರಿಹರ:ಮೇ 26 ರಿಂದ ದಿ ಕೇರಳ ಸ್ಟೋರಿ ಚಲನಚಿತ್ರ ನಗರದ ಶ್ರೀಕಾಂತ್ ಚಿತ್ರಮಂದಿರದಲ್ಲಿ ದಿನದ ನಾಲ್ಕು ಪ್ರದರ್ಶನಗಳು ಉಚಿತ.
ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿರುವ `ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ನೀಡದಂತೆ ಬ್ಯಾನ್ ಮಾಡಿದ್ದು, ಕೆಲವೆಡೆ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ನಡುವೆ ಹರಿಹರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ, ಹಾಗೂ ಪೋಷಕರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು. ಹರಿಹರದ ಶಾಸಕರಾದ ಬಿ.ಪಿ.ಹರೀಶ್ ಹಾಗೂ ಹಿಂದು ಪರ ಸಂಘಟನೆಯ ಕಾರ್ಯಕರ್ತರ ಸಹಯೋಗದಲ್ಲಿ ನಗರದ ಶ್ರೀ ಕಾಂತ್ ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ (ಮೇ 26) ಒಂದು ವಾರಗಳ ಕಾಲ ದಿನದ ನಾಲ್ಕು ಪ್ರದರ್ಶನಗಳು ನಗರದ ಹಾಗೂ ಗ್ರಾಮೀಣ ಭಾಗದ ಜನರು ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ವೀಕ್ಷಿಸಲು ಅವಕಾಶ ಮಾಡಿಕೊಡಲಾಗದೆ.
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಜಾಗೃತವಾಗಲು ಈ ಸಿನಿಮಾ ಸಹಕಾರಿಯಾಗಿದೆ. ಅಲ್ಲದೆ ನೈಜ್ಯ ಘಟನೆಗಳನ್ನು ಒಳಗೊಂಡ ಸಿನಿಮಾವಾಗಿದೆ. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದು ಹರಿಹರದ ಶಾಸಕರಾದ ಬಿ.ಪಿ ಹರೀಶ್ ಹಾಗೂ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದಾರೆ.
0 Comments