ನಿಧಿ ಶೋಧನೆಗಾಗಿ ದೇವರ ಮೂರ್ತಿಯನ್ನ ಕಿತ್ತೆಸೆದ ದುಷ್ಕರ್ಮಿಗಳು, ಇಬ್ಬರ ಬಂಧನ.!!

ಮಂದಾರ ನ್ಯೂಸ್ ತ್ಯಾಗರ್ತಿ : ಶಿವಮೊಗ್ಗ ಜಿಲ್ಲೆ ಸಾಗರ  ತಾಲ್ಲೂಕು ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ನಿಧಿ ಶೋಧನೆಗಾಗಿ ದೇವರ ವಿಗ್ರಹವನ್ನು ಕಿತ್ತೆಸೆದು ದೇವಿಯ ಮೂರ್ತಿಗೆ ಹಾನಿಯನ್ನು ಉಂಟು ಮಾಡಿ ಭೂಮಿ ಅಗೆದ ಪ್ರಕರಣವೊಂದು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಇದು ಬೆಳಂದೂರಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಈ ಸಂಬಂಧ ಐವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಅದರಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ನಡೆದಿದ್ದೇನು?
ಸಾಗರ ತಾಲೂಕು ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ರಂಗನಾಥ ಸ್ವಾಮಿ ದೇವರ ಮೂರ್ತಿಯನ್ನು ಹಾನಿ ಮಾಡಿದ್ದ ಆರೋಪಿಗಳು ತಡರಾತ್ರಿ ಭೂಮಿಯನ್ನು ಅಗೆದು ನಿಧಿಶೋಧ ನಡೆಸಿದ್ದಾರೆ.

ಪಕ್ಕದ ಗ್ರಾಮದ ನರ ಮಾನವರ ಮೇಲೆ ಚೌಡೇಶ್ವರಿ ದೇವಿ ಒಂದು ಮೈಮೇಲೆ ಬಂದು ದೇವಿಯು ಅಪ್ಪಣೆಯಂತೆ ಇಂತಹ ದೇವಸ್ಥಾನದಲ್ಲಿ ನಿಧಿ ಇದೆ ಎಂದು ಸೂಚನೆ ನೀಡಿತ್ತು, ಅದರಂತೆ ಐದು ಜನ ಖದೀಮರು ದೇವಸ್ಥಾನದ ಮೂರ್ತಿಯನ್ನು ಕಿತ್ತೆಸೆದು ನಿಧಿಶೋದನೆಯನ್ನು ನಡೆಸಿದ್ದಾರೆ ಎಂಬ ಆರೋಪವನ್ನು ಬೆಳಂದೂರಿನ ಕೆಲವು ಗ್ರಾಮಸ್ಥರು ಮಾಡಿದ್ದಾರೆ.

ಹಾಗಾದರೆ ದೇವಿ ಮಹಿಳೆ ಬಂದ ಆ ನರ ಮಾನವ ಯಾರು? ಆ ನರ ಮಾನವನ ಮೈಮೇಲೆ ಬಂದ ದೇವರು ಇನ್ನೆಷ್ಟು ಮನೆಗಳನ್ನು ಹಾಳು ಮಾಡಿದೆ. ಇನ್ನೂ ಯಾವ್ಯಾವ ದೇವಸ್ಥಾನಗಳನ್ನು ಶೋಧನೆಗಾಗಿ ದೇವರ ಮೂರ್ತಿಗಳನ್ನ ಕಿತ್ತೆಶುದು ನಿಧಿಶೋಧನೆ ಮಾಡುವ ಪ್ರಯೋಗ ಏನಾದರೂ ಹೊಂದಿದ್ದಾರೆಯೇ? ಈ ಹಿಂದೆ ಯಾವುದಾದರೂ ದೇವಸ್ಥಾನಗಳನ್ನು ಹಾನಿ ಮಾಡಿದ್ದಾರೆಯೇ? ಯುವಕರನ್ನು ದಾರಿ ತಪ್ಪಿಸಿದ ಆ ನರ ಮಾನವನನ್ನು ಕೂಡಲೇ ಪೊಲೀಸ್ ಇಲಾಖೆಯವರು ಬಂಧಿಸಿ ತೀವ್ರ ತನಿಖೆ ನಡೆಸಬೇಕಾಗಿದೆ. ಮೂಡನಂಬಿಕೆ ಕಾಯ್ದೆ ಅಡಿಯಲ್ಲಿ ಅವರ ಮೇಲೆ ಕೇಸನ್ನು ದಾಖಲಿಸಿಕೊಳ್ಳಬೇಕು. ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿರುವ ಇಂಥವರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಈ ಸಂಬಂಧ ಗ್ರಾಮ ಸುಧಾರಣೆ ಸಮಿತಿ ಪ್ರಮುಖರು ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ ಕಾರಣ ಪೊಲೀಸ್ ಇಲಾಖೆಯವರು ದೂರನ್ನು ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ ಕಾರಣ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. 

ಪ್ರಕರಣದ ತನಿಖೆ ಆರಂಭಿಸಿದ್ದ ಆನಂದಪುರ ಪೊಲೀಸರು,  ಕೇಶವ, ಸಾಜು, ಅಂತೋನಿ, ಜನಾರ್ಧನ, ಸೋಮಶೇಖರ ಎಂಬುವವರ ವಿರುದ್ಧ  ಕೇಸ್​  ದಾಖಲಿಸಿ , ಈ ಪೈಕಿ ಕೇಶವ, ಅಂತೋನಿಯನ್ನು  ಬಂಧಿಸಿದ್ದಾರೆ. 

ಇನ್ನೂ ಮೂರು ಜನ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಎಲ್ಲೇ ಅಡಗಿದ್ದರೂ ಅವರ ಎಡೆಮುಡಿ ಕಟ್ಟಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.

Post a Comment

0 Comments