ಜಿಲ್ಲಾಧಿಕಾರಿಗಳೇ ತನಿಖೆಗೆ ಆದೇಶಿಸಿ. ತಾಲೂಕು ಕಚೇರಿಯ ಹೆಸರು ದುರ್ಬಳಕೆ ,ಮಣ್ಣು ಸಾಗಾಣಿಕೆದಾರರಿಂದ ಹಣ ವಸೂಲಿ!?

ಮಂದಾರ ನ್ಯೂಸ್, ಹರಿಹರ: ಮಧ್ಯ ಕರ್ನಾಟಕದ ಕೇಂದ್ರಬಿಂದು ಹರಿಹರ. ಈ ಹಿಂದೆ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪನೆ ಮಾಡಲು ಎಲ್ಲಾ ಅನುಕೂಲಗಳನ್ನು ಹೊಂದಿರುವಂತಹ ನಗರಗಳಲ್ಲಿ ಅಗ್ರಗಣ್ಯ ನಗರ ಹರಿಹರ. ಅದೇಕೋ ಹಲವು ಕಂಪನಿಗಳು ಹರಿಹರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿಲ್ಲ.

ಈ ಹಿಂದೆ ಹರಿಹರದಲ್ಲಿ ಮೈಸೂರ್ ಕಿಲೊಸ್ಕರ್ ಕಂಪನಿ ಇಲ್ಲಿನ ಸಾವಿರಾರು ಜನರ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿತ್ತು. ಕಂಪನಿ ತನ್ನ ಬಾಗಿಲು ಮುಚ್ಚಿದ ನಂತರ ಈ ಕಂಪೆನಿಯನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದವು. ಹರಿಹರದ ಆದಾಯ ಮೂಲಕ್ಕೆ ಪೆಟ್ಟು ಬಿದ್ದಿತ್ತು. ಹರಿಹರದ ಅಭಿವೃದ್ಧಿ ಕುಂಟು ಸಾಗಿತ್ತು. ಸದ್ಯ ಹರಿಹರದ ಪ್ರಮುಖ ಆದಾಯ ಇಟ್ಟಿಗೆ ಭಟ್ಟಿಗಳು.
ಹರಿಹರದಲ್ಲಿರುವ ಸಾವಿರಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿಂದ ಸರಿಸುಮಾರು 40 ರಿಂದ 50 ಸಾವಿರ ಕುಟುಂಬಗಳು ಬದುಕುತ್ತಿದ್ದಾವೆ. ಈ ವೃತ್ತಿಯನ್ನೇ ನಂಬಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ಇಲ್ಲಿನ ಇಟ್ಟಿಗೆ ಭಟ್ಟಿಯ ಮಾಲೀಕರು ಸಾವಿರಾರು ಸಂಖ್ಯೆಯ ಜನರಿಗೆ ಉದ್ಯೋಗ ನೀಡುವ ಮೂಲಕ ತಾಲೂಕಿನ ನಿರೋದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದಾರೆ. ಸದ್ಯ ಇವರಿಂದ ಅದೆಷ್ಟೋ ಕುಟುಂಬಗಳು ಒಂದು ಹೊತ್ತಿನ ಊಟವನ್ನು ನೆಮ್ಮದಿಯಿಂದ ಮಾಡುತ್ತಿದ್ದಾರೆ.


ಇಲ್ಲಿ ತಯಾರಾಗುವ ಇಟ್ಟಿಗೆಗಳು ರಾಜ್ಯದಲ್ಲದೆ ಹೊರರಾಜ್ಯದಲ್ಲೂ ತನ್ನದೇ ಆದ ಹೆಸರನ್ನು ಗಳಿಸಿದೆ. ಉತ್ತಮವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿದ್ದರೂ ತಮ್ಮ ವ್ಯಾಪಾರವನ್ನ ಹೊರರಾಜ್ಯದವರಿಗೂ ಚಾಚ್ಚಿರುವುದು ಹೆಮ್ಮೆಯ ಸಂಗತಿ.

ಇಟ್ಟಿಗೆ ಭಟ್ಟೆಗಳನ್ನು ನಡೆಸಲು ಪ್ರತ್ಯೇಕವಾದ ಕಾನೂನು, ಮನದಂಡಗಳು ಇಲ್ಲದ ಕಾರಣ ಅಸಂಘಟಿತ ಕಾರ್ಮಿಕ ಕಾಯ್ದೆ ವ್ಯಾಪ್ತಿ ಅಡಿಯಲ್ಲೇ ಈ ಭಟ್ಟಿಗಳು ನಡೆಯುತ್ತಿದ್ದಾವೆ.
ಇಟ್ಟಿಗೆಗಳನ್ನು ತಯಾರಿಸಲು ಪ್ರಮುಖವಾಗಿ ಮಣ್ಣಿನ ಅವಶ್ಯಕತೆ ತುಂಬಾ ಇದೆ. ಉತ್ತಮವಾದ ಮತ್ತು ಸಮಯಕ್ಕೆ ಸರಿಯಾಗಿ ಮಣ್ಣು ದೊರೆತರೆ ಮಾತ್ರ ಇಟ್ಟಿಗೆಗಳನ್ನು ತಯಾರಿಸಲು ಸಾಧ್ಯ. ಇಲ್ಲದಿದ್ದರೆ ತಯಾರಿಸುವ ಮಾಲೀಕರು ನಷ್ಟವನ್ನ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.

ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಗಳಾಗುವ ಇಟ್ಟಿಗೆ ಮಾಲೀಕರು ಇತ್ತೀಚಿನ ದಿನದಲ್ಲಿ ಅನೇಕ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಮಣ್ಣಿನ ಕೊರತೆ. ಅಕಾಲಿಕ ಮಳೆಯ ಪರಿಣಾಮ. ಸಂಬಂಧಿಸಿದ ಇಲಾಖೆಯ ಬಿಗಿಯಾದ ಕಾನೂನುಗಳು. ಇವೆಲ್ಲದರ ನಡುವೆ ಹಾಕಿರುವ ಬಂಡವಾಳ ಕೈಕೊಡುತ್ತದೆಯೋ ಎಂಬ ಭಯ. ಇವೆಲ್ಲದರ ನಡುವೆ ಸಾಲ-ಸೂಲ ಮಾಡಿ ಅನೇಕ ಇಟ್ಟಿಗೆ ಭಟ್ಟಿಯ ಮಾಲೀಕರು ತಮ್ಮ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.


ಹರಿಹರದ ಪ್ರಮುಖ ಆದಾಯ ಇಟ್ಟಿಗೆ ಭಟ್ಟಿಗಳು, ಮತ್ತು ಇದರಿಂದ ಸಾವಿರಾರು ಸಂಖ್ಯೆಯ ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂಬ ಒಂದೇ ಕಾರಣದಿಂದ ಈ ಇಟ್ಟಿಗೆ ಭಟ್ಟಿಯ ಮಾಲೀಕರಿಗೆ ಚುನಾಯಿತ ಜನಪ್ರತಿನಿಧಿಗಳಿಂದ ಹಿಡಿದು ಎಲ್ಲಾ ವರ್ಗದ ಜವಾಬ್ದಾರಿ ಸ್ಥಾನದ ಪ್ರಜ್ಞಾವಂತ ನಾಗರಿಕರು ಸಹಕಾರ ನೀಡುತ್ತಾ ಬಂದಿದ್ದಾರೆ.

ನಮ್ಮ ತಾಲೂಕಿನ ನಿರುದ್ಯೋಗ ಸಮಸ್ಯೆಗೆ ಇಟ್ಟಿಗೆ ಭಟ್ಟಿಯ ಮಾಲೀಕರಿಂದ ಸ್ವಲ್ಪಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ತಾಲೂಕಿನ ಜನರು ಈ ಇಟ್ಟಿಗೆ ಭಟ್ಟಿಗಳನ್ನ ನಂಬಿ ಬದುಕನ್ನ ಸಾಗಿಸುತ್ತಿದ್ದಾರೆ. ಸಾವಿರಾರು ಜನರಿಗೆ ಅನ್ನ ನೀಡುತ್ತಿರುವ ಇಟ್ಟಿಗೆ ಭಟ್ಟಿಯವರಿಗೆ ತೊಂದರೆ ನೀಡದೆ, ಅವರಿಗೆ ನಮ್ಮಿಂದ ಸಾಧ್ಯವಾಗುವ ಸಹಕಾರ ನೀಡುವ ಎಂಬ ಮನೋಭಾವನೆಯಿಂದ ಎಲ್ಲರೂ ಪಕ್ಷಾತೀತವಾಗಿ ಅವರ ಉದ್ಯೋಗವನ್ನು ನಡೆಸಿಕೊಂಡು ಹೋಗಲು ಸಹಕಾರಿಗಳಾಗಿದ್ದಾರೆ.
ಆದರೆ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಗಳ, ಜನಪ್ರತಿನಿಧಿಗಳ, ಹೆಸರನ್ನು ಹೇಳಿಕೊಂಡು ಮಣ್ಣು ಸಾಗಾಣಿಕೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ? ಎಂಬ ಗಂಭೀರವಾದ ಆರೋಪ ಈಗ ಕೇಳಿ ಬಂದಿದೆ. ಹಾಗಾದರೆ ಅವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇಟ್ಟಿಗೆ ಭಟ್ಟಿಯ ಮಾಲೀಕರಿಗೆ ಹಾಗೂ ರೈತರಿಗೆ ಮತ್ತು ಮಣ್ಣು ಸಾಗಾಣಿಕೆದಾರರಿಗೆ ತೊಂದರೆ ನೀಡಬಾರದು. ಇವರಿಗೆ ತೊಂದರೆ ನೀಡಿದರೆ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತದೆ. ಇಟ್ಟಿಗೆ ಭಟ್ಟೆಗಳನ್ನು ನಂಬಿದ ಅದೆಷ್ಟೋ ಕುಟುಂಬಗಳು ಬೀದಿಗೆ ಬರುತ್ತದೆ. ಬಡ ಹಾಗೂ ಮಾಧ್ಯಮ ವರ್ಗದ ಜನರು ಉದ್ಯೋಗವಿಲ್ಲದೆ ಸಂಕಷ್ಟವನ್ನ ಅನುಭವಿಸಬೇಕಾಗುತ್ತದೆ. ಆ ಕಾರಣದಿಂದ ತಾಲೂಕಿನ ನಿರುದ್ಯೋಗ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳುತ್ತಿರುವ "ಇಟ್ಟಿಗೆ ಭಟ್ಟಿಯನ್ನ ನಡೆಸಿಕೊಂಡು ಹೋಗುತ್ತಿರುವ ಮಾಲೀಕರಿಗೆ ತಮ್ಮಿಂದ ಸಾಧ್ಯವಾಗುವ ಎಲ್ಲ ರೀತಿಯ ಸಹಕಾರ ನೀಡೋಣ, ಸಾಧ್ಯವಾಗದಿದ್ದರೆ ತೊಂದರೆ ನೀಡದೆ ಸುಮ್ಮನಿರೋಣ" ಎಂಬ  ಭಾವನೆಯಲ್ಲಿದ್ದ ಜನರ ಹೆಸರೇಳಿಕೊಂಡು ಕೆಲವರು ಹಣ ವಸೂಲಿ ಮಾಡುವುದು ಎಷ್ಟರಮಟ್ಟಿಗೆ ಸರಿ? ಅದರಲ್ಲಿಯೂ ತಾಲೂಕು ಆಡಳಿತ ಕೇಂದ್ರದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡಿರುವುದು ಕಾನೂನಿಗೆ ವಿರುದ್ಧ ಅಲ್ಲವೇ? ಕೂಡಲೆ ಮಾನ್ಯ ಜಿಲ್ಲಾಧಿಕಾರಿಗಳು ಇಟ್ಟಿಗೆ ಭಟ್ಟಿಯ ಮಾಲೀಕರಿಗೆ ತೊಂದರೆ ನೀಡುವ ಉದ್ದೇಶದಿಂದ ತಾಲೂಕು ಕಚೇರಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಿದ್ದು ಯಾರು? ಎಂಬುದನ್ನು ಕೂಡಲೇ ತಾವು, ತಮ್ಮ ಕಾನೂನು ವ್ಯಾಪ್ತಿಯಲ್ಲಿ ತನಿಖೆ ನಡೆಸಬೇಕು. ತಪ್ಪಿಕಸ್ಥರು ಯಾರೇ ಆಗಿರಲಿ ಅವರ ಮೇಲೆ ನಿರ್ಧಾಕ್ಷಿನ ಕ್ರಮ ತೆಗೆದುಕೊಳ್ಳಬೇಕು. 

ಹರಿಹರದ ಆದಾಯದ ಮೂಲಕ್ಕೆ ಹಾಗೂ ನಿರೋದ್ಯೋಗ ಸಮಸ್ಯೆ ಸೃಷ್ಟಿಯಾಗದಂತೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

ರವಿರಾಜ್ ತಾವರಗಿ.

Post a Comment

0 Comments