ಅಕ್ರಮ ಮರಳು ಸಂಗ್ರಹಣೆಯ ಮೇಲೆ ಹರಿಹರ ಗ್ರಾಮಾಂತರ ಪೊಲೀಸರಿಂದ ದಾಳಿ, ಮೂರು ಟ್ಯಾಕ್ಟರ್ ಹಾಗೂ ಅಪಾರ ಪ್ರಮಾಣದ ಮರಳು ವಶಕ್ಕೆ.

ಮಂದಾರ ನ್ಯೂಸ್, ಹರಿಹರ : ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ವ್ಯಾಪ್ತಿಯ ಹಳೇ ಹರ್ಲಾಪುರದ ತುಂಗಭದ್ರ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಇಂದು ಹರಿಹರ ಗ್ರಾಮಾಂತರ ಪೊಲೀಸರು ಅಕ್ರಮ ಮರಳು ಗಣಿಗಾರಿಕೆಯ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು ಈಗಾಗಲೇ ಮರಳು ಸಾಗಾಣಿಕೆಗೆ ಬಳಸುತ್ತಿದ್ದ ಮೂರು ಟ್ಯಾಕ್ಟರ್ ಗಳನ್ನು ಹಾಗೂ ಅಕ್ರಮ ಮರಳನ್ನು ವಶಪಡಿಸಿಕೊಂಡು ದೂರನ್ನು ದಾಖಲಿಸಿಕೊಂಡಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯಲ್ಲಿ ಯಾರು ತೊಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಅದರೆ ಯಾರು ಈ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೋ ಅವರ ಪತ್ತೆಕಾರ್ಯ ಮುಂದುವರೆದಿದೆ.

ಈಗಾಗಲೇ ಹರಿಹರ ಗ್ರಾಮಾಂತರ ಪಿಎಸ್ಐ ಅರವಿಂದ್ ಅವರು ತಮ್ಮ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಂಡುಬರುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದೇ ಹೇಳಬಹುದು.

ಈಗಾಗಲೇ ಹರಿಹರ ಗ್ರಾಮಾಂತರ ಠಾಣಾ ಅಧಿಕಾರಿ ಅರವಿಂದ್ ಅವರು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ತಮ್ಮ ದಕ್ಷತೆಯನ್ನು ಪ್ರಾಮಾಣಿಕವಾಗಿ ಮರೆಯುತ್ತಿದ್ದು ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈಗಾಗಲೇ ನಗರದ ಹಳೇ ಹರ್ಲಾಪುರ ತುಂಗಭದ್ರಾ ನದಿಯ ದಡದ ಮೇಲೆ ಇರುವ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದು ಮುಂದಿನ ದಿನದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ದಿಟ್ಟತನವನ್ನು ತಮ್ಮ ಅಧಿಕಾರ ಅವಧಿಯಲ್ಲಿ ಮಾಡುತ್ತಿರುವುದು ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ನುಂಗಲಾರದ ತುತ್ತಾಗಿದೆ.

Post a Comment

0 Comments