ಪ್ರತಿಭಟನಾ ಸಭೆಯನ್ನು ಕುರಿತು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕರಾದ ದೇವರಾಜ್ ಅರಳಿಹಳ್ಳಿ ರವರು ಮಾತನಾಡಿದರು ಹುಬ್ಬಳ್ಳಿಯಲ್ಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ರವರ ಮಗಳಾದ ನೇಹಾ ಹಿರೇಮಠರವರ ಹತ್ಯೆ ಖಂಡಿಸಿ ಲವ್ ಜಿಹಾದ್ ಮಾಡಿ ಹತ್ಯೆ ಮಾಡಿರುವ ಫಯಾಜನಿಗೆ ಗಲ್ಲುಗೇರಿಸಬೇಕು ಇಲ್ಲವಾದಲ್ಲಿ ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ತಾಕತ್ತು ಇದ್ದರೆ ಸರ್ಕಾರ ನಡೆಸಿ ಇಲ್ಲವಾದಲ್ಲಿ ರಾಜೀನಾಮೆ ಕೊಡಿ ಎಂದು ಗುಡುಗಿದರು. ಪಾಕಿಸ್ತಾನಕ್ಕೆ ಜೈಕಾರದ ಕೂಗು ಇತ್ತೀಚಿಗೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಪಾಕಿಸ್ತಾನದ ಮೇಲೆ ಅಭಿಮಾನ ಪ್ರೀತಿ ಇರುವವರನ್ನು ಗಂಟು ಮೂಟೆ ಕಟ್ಟಿ ಮೊಹಮ್ಮದ್ ಅಲಿ ಜಿನ್ನಾನಾ ಪಾಕಿಸ್ತಾನಕ್ಕೆ ಓಡಿಸಿ ಮತ್ತು ಭಯೋತ್ಪಾದಕ ಮನಸ್ಥಿತಿಯ ಹಿಂದೆ ಇರುವವರು ಯಾರೂ ಕುಮಕು ಕೊಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹಸಂಚಲಕರಾದ ಸುಧೀಂದ್ರ ಶಿವು ಪ್ರಮುಖರಾದ ಪ್ರದೀಪ್ ರಾಘಣ್ಣ ವಿನಯ್ ಲೋಕೇಶ್ ಪವನ ವರುಣ ಮಂಜುನಾಥ್ ದೇವರಾಜ್ ಸಂಜು ಅಜಯ ಸುನಿಲ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments