ಗ್ರಾಮಠಾಣಾ ಜಾಗದಲ್ಲಿ ಇರುವ ಕಾಳೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.
ಪಂಚಾಯತಿಯ ಒಬ್ಬ ಸದಸ್ಯನಿಂದ ಕಾಳೇಶ್ವರ ಸ್ವಾಮಿ ದೇವರ ಭಕ್ತರಿಗೆ ದ್ರೋಹ.
ಅನ್ಯ ಧರ್ಮದ ವ್ಯಕ್ತಿಯೊಂದಿಗೆ ಸೇರಿ ತ್ಯಾಗರ್ತಿಯ ಜನರ ನೆಮ್ಮದಿಗೆ ಬೆಂಕಿ ಇಡುತ್ತಿರುವ ಸದಸ್ಯ.
ಅನ್ಯ ಧರ್ಮದ ವ್ಯಕ್ತಿಯ ಎಂಜಲು ಕಾಸಿಗೆ ಮಾತೃ ಧರ್ಮಕ್ಕೆ ದ್ರೋಹ ಬಗೆಯುತ್ತಿರುವ ಪಂಚಾಯತಿಯ ಸದಸ್ಯ ನಡೆಗೆ ಕಾಳೇಶ್ವರ ಭಕ್ತರಿಂದ ಆಕ್ರೋಶ.
ಪ್ರಕರಣ 58 (d) ಇ- ಸ್ವತ್ತನ್ನು ಕ್ಯಾನ್ಸಲ್ ಮಾಡುವ ಅಧಿಕಾರವನ್ನು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಅಧಿಕಾರವನ್ನು ಹೊಂದಿರುತ್ತಾರೆ. ಕೂಡಲೇ ಇವರು ಈ ಪ್ರಕರಣವನ್ನು 58d ಅಡಿಯಲ್ಲಿ ಈಗಾಗಲೇ ನೀಡಿರುವ ಇ- ಸ್ವತ್ತನ್ನು ಕ್ಯಾನ್ಸಲ್ ಮಾಡುವಂತೆ ನಮ್ಮ ಮಂದಾರ ನ್ಯೂಸ್ ಸುದ್ದಿವಾಹಿನಿ ಆಗ್ರಹಿಸುತ್ತದೆ.
ಗ್ರಾಮ ಠಾಣಾ ಜಾಗಕ್ಕೆ ಇ-ಸ್ವತ್ತು (E-Swathu) ಪಡೆಯಲು ಮುಖ್ಯವಾಗಿ ಆಸ್ತಿಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರಬೇಕು, ಅದು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಬೇಕು, ಮತ್ತು ಮಾಲೀಕರು ಆಸ್ತಿ ತೆರಿಗೆ ಪಾವತಿಸಿರಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳಾದ ಫಾರ್ಮ್-9 ಮತ್ತು 11B ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಬೇಕು, ಇದರಲ್ಲಿ ಅಕ್ರಮ ನಿವೇಶನಗಳಿದ್ದಲ್ಲಿ ದಾಖಲೆಗಳು ಸಿಗುವುದಿಲ್ಲ, ಹಾಗೂ ನಿಗದಿತ ಅವಧಿಯಲ್ಲಿ ಅನುಮೋದನೆ ಆಗದಿದ್ದರೆ ಸ್ವಯಂ ಅನುಮೋದನೆಯೂ ಲಭ್ಯವಿದೆ.
ಇ-ಸ್ವತ್ತು ಪಡೆಯಲು ಪ್ರಮುಖ ಷರತ್ತುಗಳು:
ಆಸ್ತಿಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರಬೇಕು. ನಗರ ಪ್ರದೇಶದ ಆಸ್ತಿಗಳಿಗೆ ಇದು ಅನ್ವಯಿಸುವುದಿಲ್ಲ.
ಕೃಷಿಯೇತರ ಜಮೀನುಗಳು, ಮನೆಗಳಿಗೆ ಮಾತ್ರ ಇ-ಖಾತೆ ನೀಡಲಾಗುತ್ತದೆ.
ಅಕ್ರಮ ನಿವೇಶನಗಳಲ್ಲ: ಅಗತ್ಯ ಅನುಮತಿ ಇಲ್ಲದೆ ಅಕ್ರಮವಾಗಿ ನಿರ್ಮಿಸಲಾದ ನಿವೇಶನಗಳಿಗೆ ಈ ಖಾತೆ ಸಿಗುವುದಿಲ್ಲ,
ಪಂಚಾಯಿತಿಗೆ ಆಸ್ತಿ ತೆರಿಗೆ ಪಾವತಿಸುವುದು ಪ್ರಮುಖವಾಗಿದೆ. ತೆರಿಗೆ ಪಾವತಿ ಮೂಲಕ ದಾಖಲೆಗಳು ಸುಲಭವಾಗಿ ಸಿಗುತ್ತವೆ.ಆಸ್ತಿ ವಿವರಗಳು ಡಿಜಿಟಲೀಕರಣಗೊಂಡಿರಬೇಕು ಮತ್ತು ಮಾಲೀಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಮಾನ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ನೀಡಿರುವ ಇ- ಸ್ವತ್ತನ್ನು ಕ್ಯಾನ್ಸಲ್ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಕರಣ 58d ಅಡಿಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡು ಈಗಾಗಲೇ ನೀಡಿರುವ ಈ ಸ್ವತ್ತು ಕ್ಯಾನ್ಸಲ್ ಮಾಡುವ ಮೂಲಕ ಕಾಳೇಶ್ವರ ಸ್ವಾಮಿಯ ಭಕ್ತರ ಹೋರಾಟಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಸುದ್ದಿ ವಾಹಿನಿಯ ಕಳಕಳಿಯಾಗಿದೆ.
0 Comments