ಮಂದಾರ ನ್ಯೂಸ್: ಪಂಚಮಸಾಲಿ ಸಮಾಜದ "ಮಾಣಿಕ್ಯ" ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಚ್.ಎಸ್ ಶಿವಶಂಕರ್ ಅವರ ಹುಟ್ಟು ಹಬ್ಬದ ಸಂಭ್ರಮ ಇಂದು ಅವರ ನಿವಾಸದಲ್ಲಿ ನಡೆಯುತ್ತು.
ಎಚ್. ಎಸ್ ಶಿವಶಂಕರ್ ಅವರ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ. ತನ್ನ ನಾಯಕನ ಹುಟ್ಟುಹಬ್ಬಕ್ಕಾಗಿ ಅಭಿಮಾನದ ಉಡುಗೊರೆ ನೀಡಿದ್ದರು. ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಧೀಮಂತ ನಾಯಕ ಶಿವಶಂಕರ್.
ಹರಿಹರ ವಿಧಾನಸಭಾ ಕ್ಷೇತ್ರದ 14ನೇ ವಾರ್ಡಿನ ನಗರಸಭೆಯ ಸದಸ್ಯರಾದ ಅಲ್ತಾಫ್ ಅವರು ತಮ್ಮ ರಕ್ತದಲ್ಲಿ ಎಚ್ ಎಸ್ ಶಿವಶಂಕರ್ ಅವರ ಭಾವಚಿತ್ರವನ್ನು ರಚನೆ ಮಾಡಿಸಿ ಅವರಿಗೆ ಇಂದು ಉಡುಗೊರೆಯಾಗಿ ನೀಡಿದ್ದಾರೆ.
ಅಲ್ತಾಫ್ ಅವರ ನೆಚ್ಚಿನ ನಾಯಕರು ಶಿವಶಂಕರ್, ಅವರ ರಾಜಕೀಯ ಮಾರ್ಗದರ್ಶಕರು ಶಿವಶಂಕರ್, ಒಂದು ರೀತಿ ಶಿವಶಂಕರವರ ಬಲಗೈ ಬಂಟನಂತಿರುವ ಅಲ್ತಾಫ್ ಅವರು ತಮ್ಮ ಅಭಿಮಾನವನ್ನು ವಿಶೇಷವಾಗಿ ಮೆರೆದಿದ್ದಾರೆ.
ತಮ್ಮ ರಕ್ತದ ಕಣಕಣದಲ್ಲಿ ಶಿವಶಂಕರವರನ್ನು ಹೆಸರು ಹರಿಯುತ್ತಿದೆ. ತಮ್ಮ ನಾಯಕನಿಗಾಗಿ ಪ್ರಾಣವನ್ನು ನೀಡಲು ಸಿದ್ದರಿರುವ ಅಲ್ತಾಫ್ ಅವರ ಅಭಿಮಾನಕ್ಕೆ ಜನತೆ ಬೆರಗಾಗಿದ್ದಾರೆ.
ಶಿವಶಂಕರವರ ವ್ಯಕ್ತಿತ್ವವೇ ಅಂತದ್ದು. ಒಮ್ಮೆ ಅವರನ್ನು ಹಚ್ಚಿಕೊಂಡರೆ ಎಂದಿಗೂ ಅವರನ್ನು ಬಿಟ್ಟು ಕೊಡುವ ಮನಸ್ಸು ಬರುವುದಿಲ್ಲ. ಮಾತಿನಲ್ಲಿ ಒರಟುತನ ಕಾಣಬಹುದು ಆದರೆ ಹೃದಯ ಹಾಲಿನಂತದ್ದು. ನೇರವಾಗಿ ಹೇಳುವ ವ್ಯಕ್ತಿಗಳು ತಮ್ಮ ಬದುಕಿಗೆ ದಾರಿಯನ್ನು ತೋರಿಸುವವರಾಗಿರುತ್ತಾರೆ. ನಗುನಗುತ್ತಾ ಹೇಳುವ ವ್ಯಕ್ತಿಗಳು ನಮ್ಮ ದಾರಿಯನ್ನು ಕೆಡಿಸುವವರು ಆಗಿರುತ್ತಾರೆ.
ಮಾಜಿ ಶಾಸಕರಾದ ಎಚ್ ಎಸ್ ಶಿವಶಂಕರ್ ಅವರು ನೇರ-ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಹೃದಯದಲ್ಲಿ ಹೂವಿನಂತ ಮನಸ್ಸನ್ನು ಹೊಂದಿದವರು. ಅವರಿಗೆ ಅವರೇ ಸಾಟಿ. ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಜನಸಾಗರದಂತೆ ಸೇರುತ್ತಾರೆ. ಅವರ ಅಭಿಮಾನಿಗಳಿಗೆ ಎಂದೆಂದಿಗೂ ಶಿವಶಂಕರ್ ಅವರು ಆರಾಧ್ಯದೈವ.
ಶಿವಶಂಕರವರ ಆಡಳಿತ ಅವಧಿಯಲ್ಲಿ ಹರಿಹರ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿರುವುದು ಎಲ್ಲರಿಗೂ ತಿಳಿದಿದೆ. ಭ್ರಷ್ಟ ಅಧಿಕಾರಿಗಳಿಗೆ ಅವರು ಸಿಂಹ ಸ್ವಪ್ನ. ಜನಸಾಮಾನ್ಯರಿಗೆ ಕಲ್ಪವೃಕ್ಷ. ಒಮ್ಮೆ ಮಾತು ಕೊಟ್ಟರೆ ಅದನ್ನು ಈಡೇರಿಸುವ ವ್ಯಕ್ತಿ.
ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶಂಕರ್ ಅವರ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಹರಿಹರ ನಗರ ಸಭೆಯ ಸದಸ್ಯರಾದ ಅಲ್ತಾಫ್ ಅವರು ತಮ್ಮ ರಕ್ತದಲ್ಲಿ ಬರೆದಿರುವ ಶಿವಶಂಕರ್ ಅವರ ಭಾವಚಿತ್ರವನ್ನು ಇಂದು ಉಡುಗೊರೆಯಾಗಿ ನೀಡಿದ್ದಾರೆ. ಇದು ಶಿವಶಂಕರ್ ಅವರ ಅಭಿಮಾನಿಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ. ಅಲ್ತಾಫ್ ಅವರ ಅಭಿಮಾನಕ್ಕೆ ರಾಮಾಯಣದ ಕಥೆ ನೆನಪಿಗೆ ಬರುತ್ತದೆ. ರಾಮನಿಗಾಗಿ ಹನುಮಂತ ತನ್ನ ಎದೆಯನ್ನು ಬಗೆದು ತನ್ನ ಭಕ್ತಿಯನ್ನು ಮೆರೆದಿದ್ದರು. ಅದೇ ರೀತಿ ಈ ಕಲಿಯುಗದಲ್ಲಿ ಅಲ್ತಾಫ್ ಅವರು ತಮ್ಮ ರಕ್ತದಲ್ಲಿ ತಮ್ಮ ಮಾರ್ಗದರ್ಶಕರಾದ ಶಿವಶಂಕರವರ ಭಾವಚಿತ್ರವನ್ನು ರಚಿಸುವ ಮೂಲಕ ತಮ್ಮ ಭಕ್ತಿ ಮತ್ತು ಅಭಿಮಾನವನ್ನು ಮೆರೆದಿದ್ದಾರೆ. ಆಧುನಿಕ ಯುಗದ ಹನುಮಂತ ಅಲ್ತಾಫ್ ಅವರು.
ಮತ್ತೊಮ್ಮೆ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಚ್ಎಸ್ ಶಿವಶಂಕರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
0 Comments