ಮಂದಾರ ನ್ಯೂಸ್, ಹರಿಹರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿ.ಸಿ. ಟ್ರಸ್ಟ್ (ರಿ) ಹರಿಹರ ತಾಲೂಕು. ಸಹಸ್ರ ಬಿಲ್ವಾರ್ಚನೆ ಪೂಜಾ ಸಮಿತಿ, ರಾಜನಹಳ್ಳಿ ವಲಯ ಇವರ ಆಶ್ರಯದಲ್ಲಿ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಜನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಆವರಣದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ. ಬಾಲಯೋಗಿ ಪೂಜ್ಯ ಶ್ರೀ ಜಗದೀಶ್ವರ ಸ್ವಾಮಿಗಳು ಅವಿಮುಕ್ತ ತಪೋ ಕ್ಷೇತ್ರ ಪುಣ್ಯಕೋಟಿ ಮಠ ಕೊಡಿಯಾಲ- ಹೊಸಪೇಟೆ ಇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಹೇಮಾವತಿ ಪರಶುರಾಮ ಅಧ್ಯಕ್ಷರು ಗ್ರಾಮ ಪಂಚಾಯತಿ ರಾಜನಹಳ್ಳಿ. ಮಾನ್ಯ ಶಾಸಕರಾದ ಬಿಪಿ ಹರೀಶ್ ಅವರು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ ರಾಮಪ್ಪನವರು, ಮಾಜಿ ಶಾಸಕರು, ಹರಿಹರ. ಹೆಚ್ ಎಸ್ ಶಿವಶಂಕರ್, ಮಾಜಿ ಶಾಸಕರು, ಹರಿಹರ. ಲಕ್ಷ್ಮಣ್ ಜಿಲ್ಲಾ ನಿರ್ದೇಶಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ. ವೀರೇಶ್ ಹನಗವಾಡಿ, ಎನ್ ಎಚ್ ಶ್ರೀನಿವಾಸ್ ನಂದಿಗಾವಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರು. ಶಿವಕುಮಾರ್ ರಾಜನಹಳ್ಳಿ ಮಾಜಿ ದೂಡ ಅಧ್ಯಕ್ಷರು, ಚಂದ್ರಶೇಖರ್ ಪೂಜಾರ, ಬಿಜೆಪಿ ಯುವ ಮುಖಂಡರು. ನಾಗೇಂದ್ರಪ್ಪ ವಕೀಲರು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ರಾಜನಹಳ್ಳಿ. ದುರ್ಗಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಯುವರಾಜ್ ಕಂಬಳಿ ಗ್ರಾಮಾಂತರ ಪಿಎಸ್ಐ. ಮಂಜುನಾಥ್ ಜಿಎಂ ಪತ್ರಕರ್ತರು. ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಊರಿನ ಎಲ್ಲಾ ಸಂಘ ಸಂಸ್ಥೆಯ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿರುವರು .
ಕಾರ್ಯಕ್ರಮ ನಾಳೆ ಬೆಳಗ್ಗೆ 9:30ಕ್ಕೆ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ. ಹನ್ನೊಂದು ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ,ಪ್ರೌಢಶಾಲಾ ಆವರಣ, ರಾಜನಹಳ್ಳಿ.
0 Comments