ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಕಟ್ಟ ಕಡೆಯ ಪ್ರಜೆಗಳನ್ನು ಗುರುತಿಸುತ್ತಾರೆ. ಅವರ ಸಾಧನೆಗಳಿಗೆ ಗೌರವ ನೀಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಹರಿಹರ ತಾಲೂಕಿನ ಹನಗವಾಡಿ ಗ್ರಾಮ ರಾಜಕೀಯವಾಗಿ, ಶೈಕ್ಷಣಿಕವಾಗಿ, ಮತ್ತು ತನ್ನ ಹೋರಾಟಗಳಿಂದ ರಾಜ್ಯದ ಜನರ ಗಮನವನ್ನು ಸೆಳೆದು ಹಲವು ಬದಲಾವಣೆಗಳಿಗೆ ನಾಂದಿ ಹಾಡಿದ ಗ್ರಾಮ. ಇದೆ ಗ್ರಾಮದ ವೈದ್ಯರಾದ ಸುರೇಶ್ ಹನಗವಾಡಿ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆ ಮೂಲಕ ಹರಿಹರದ ಕೀರ್ತಿ ಪತಾಕಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.
77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಅವರು ಈ ವಿಚಾರವನ್ನು ಅತ್ಯಂತ ಹೆಮ್ಮೆಯಿಂದ ಹಂಚಿಕೊಂಡರು. ಇದೆ ಸಂದರ್ಭದಲ್ಲಿ "ಪದ್ಮಶ್ರೀ" ಪ್ರಶಸ್ತಿ ಸ್ವೀಕರಿಸುತ್ತಿರುವ ಡಾಕ್ಟರ್ ಸುರೇಶ್ ಹನಗವಾಡಿ ಅವರಿಗೆ ಅಭಿನಂದನೆಯನ್ನು ಸಹ ಸಲ್ಲಿಸಿದರು.
ದಾವಣಗೆರೆಯ ಖ್ಯಾತ ವೈದ್ಯರಾದ ಡಾ. ಸುರೇಶ್ ಹನಗವಾಡಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಇವರ ಸಾಧನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ಹಿಮೋಫಿಲಿಯಾ ಹೋರಾಟಗಾರ: ಡಾ. ಸುರೇಶ್ ಅವರು ಸ್ವತಃ ತೀವ್ರತರದ ಹಿಮೋಫಿಲಿಯಾ ಕಾಯಿಲೆಯಿಂದ ಬಳಲುತ್ತಿದ್ದರೂ, ಕಳೆದ ನಾಲ್ಕು ದಶಕಗಳಿಂದ ಈ ಕಾಯಿಲೆಯಿಂದ ಪೀಡಿತರಾದವರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.
- ಸಂಸ್ಥಾಪಕರು: ಇವರು ದಾವಣಗೆರೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯನ್ನು ಸ್ಥಾಪಿಸಿದ್ದು, ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ.
- ಉಚಿತ ಚಿಕಿತ್ಸೆ: ಅತ್ಯಂತ ದುಬಾರಿಯಾದ ಹಿಮೋಫಿಲಿಯಾ ಚಿಕಿತ್ಸೆಯ ಔಷಧಿಗಳು (ಕ್ಲಾಟಿಂಗ್ ಫ್ಯಾಕ್ಟರ್) ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುವಂತೆ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
- ವೃತ್ತಿ: ಇವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ರೋಗಶಾಸ್ತ್ರ (Pathology) ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಹಿನ್ನೆಲೆ: ತಮ್ಮ ಮಾವನವರು ಇದೇ ಕಾಯಿಲೆಯಿಂದ ಮೃತಪಟ್ಟಾಗ, ಅವರಿಗೆ ಕೊಟ್ಟ ಮಾತಿನಂತೆ ವೈದ್ಯರಾಗಿ ಈ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.
2026ರ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಪ್ರಮುಖರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರನ್ನು ಹಿಮೋಫಿಲಿಯಾ ರೋಗಿಗಳ ಪಾಲಿನ "ಆಶಾಕಿರಣ" ಎಂದು ಕರೆಯಲಾಗುತ್ತದೆ.
ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಡಾಕ್ಟರ್ ಸುರೇಶ್ ಹನಗವಾಡಿ ಅವರಿಗೆ ನಮ್ಮ "ಮಂದಾರ ಜ್ವಾಲೆ* ಹಾಗೂ "ಮಂದಾರ ನ್ಯೂಸ್" ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.
0 Comments