1.ಕೃತ್ಯ ನಡೆದ ದಿನಾಂಕ ದಿನಾಂಕ:-02-03-2026 ರಂದು ರಾತ್ರಿ 10-00 ಗಂಟೆಯಿAದ ದಿನಾಂಕ 03/03/2026 ರಂದು ಬೆಳಗ್ಗೆ 10-30 ಪಿ.ಎಂ.ಗAಟೆಗೆ.
2. ಕೃತ್ಯ ನಡೆದ ಸ್ಥಳ ಹೊಸ ಪಾಳ್ಯ ಗ್ರಾಮದ ದಾಸಪ್ಪಜ್ಜರ ತೋಟದಲ್ಲಿ
3. ಕೃತ್ಯ ವರದಿ ದಿನಾಂಕ 03-03-2026 ರಂದು ಬೆಳಗ್ಗೆ 11-30 ಎ.ಎಂ ಗಂಟೆಗೆ.
4. ಪರ್ಯಾದಿದಾರರು ಶ್ರೀಮತಿ ಸಂಗೀತಾ ಗಂಡ ಶಿವನಗೌಡ.35 ವರ್ಷ. ಲಿಂಗಾಯಿತ ಜನಾಂಗ, ವ್ಯವಸಾಯ. ವಾಸ ಮಹಾದೇವಪುರ, ಗ್ರಾಮ, ದಾವಣಗೆರೆ ತಾಲ್ಲೂಕ್.ದಾವಣಗೆರೆ ಜಿಲ್ಲೆ .ಮೊ.ಸಂ. 9008279216.
5. ಮೃತನ ಹೆಸರು & ವಿಳಾಸ ಶ್ರೀ ಶಿವನಗೌಡ ತಂದೆ ಕರಿಬಸಪ್ಪ, 43 ವರ್ಷ, ಲಿಂಗಾಯಿತ ಜನಾಂಗ, ವ್ಯವಸಾಯ. ವಾಸ ಮಹಾದೇವಪುರ, ಗ್ರಾಮ, ದಾವಣಗೆರೆ ತಾಲ್ಲೂಕ್.ದಾವಣಗೆರೆ ಜಿಲ್ಲೆ .ಮೊ,ಸಂ. 9008279216
7. ದೂರಿನ ಬಗೆ ಮುದ್ರಿತ ದೂರು
ಕೇಸಿನ ಸಂಕ್ಷಿಪ್ತ ಸಾರಾಂಶ:- ದಿನಾಂಕ:-03-03-2026 ರಂದು ಬೆಳಗ್ಗೆ 11-30 ಗಂಟೆಗೆ ಪರ್ಯಾಧಿ ಶ್ರೀಮತಿ ಸಂಗೀತಾ ಗಂಡ ಶಿವನಗೌಡ. ವಾಸ ಮಹಾದೇವಪುರ, ಗ್ರಾಮ, ದಾವಣಗೆರೆ ತಾಲ್ಲೂಕ್. ಇವರು ನೀಡಿದ ದೂರಿನ ಸಾರಾಂಶ ನಾನು ಈಗ್ಗೆ 10 ವರ್ಷಗಳ ಹಿಂದೆ ದಾವಣಗೆರೆ ತಾಲ್ಲೂಕು ಮಹಾದೇವಪುರ ಗ್ರಾಮದ ವಾಸಿಯಾದ ಶ್ರೀ ಶಿವನಗೌಡ ತಂದೆ ಕರಿಬಸಪ್ಪ, 43 ವರ್ಷ, ಇವರನ್ನು ಮದುವೆ ಮಾಡಿಕೊಂಡಿರುತ್ತೇನೆ, ನಮಗೆ ಒಂದು ಹೆಣ್ಣು ಮಗುವಿರುತ್ತದೆ, ನನ್ನ ಗಂಡನಿಗೆ 4 ಜನ ಅಕ್ಕ ತಂಗಿಯರು ಇರುತ್ತಾರೆ ಎಲ್ಲಾರೂ ಮದುವೆ ಮಾಡಿಕೊಂಡು ಅವರ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ, ನನ್ನ ಗಂಡ ಶಿವನಗೌಡರವರು ವ್ಯವಸಾಯ ಮಾಡಿಕೊಂಡಿರುತ್ತಾರೆ ಅವರ ಹೆಸರಿನಲ್ಲಿ ದಾವಣಗೆರೆ ತಾಲ್ಲೂಕು ಮಹಾದೇವಪುರ ಗ್ರಾಮದಲ್ಲಿ 04 ಎಕರೆ 20 ಗುಂಟೆ ಜಮೀನು ಇರುತ್ತದೆ. ಆವರು ಈ ಜಮೀನಿನಲ್ಲಿ ಉಳುಮೆಗಾಗಿ ಆಧನ್ಯ ಪೈನಾನ್ಸಿನಲ್ಲಿ ಕೃಷಿಕೆಲಸಕ್ಕೆ ಟ್ರಾಕ್ಟರ್ಗೆ ಸಾಲ 10 ಲಕ್ಷ ತೆಗೆದು ಟ್ರಾಕ್ಟರ್ ಖರೀದಿಸಿರುತ್ತಾನೆ, ಮತ್ತು ನನ್ನ ಬಂಗಾರದ ಆಭರಣಗಳನ್ನು ಕೆನರಾ ಬ್ಯಾಂಕ್ ಶಿರಮಗೊಂಡನಹಳ್ಳಿ ಶಾಖೆ ಬ್ಯಾಂಕಿನಲ್ಲಿ ಗಿರಿವಿ ಇಟ್ಟು ನಮ್ಮ ಜಮೀನಿ ಕೃಷಿ ಚಟುವಟಿಕೆಗಾಗಿ 08 ಲಕ್ಷ ಸಾಲ ತೆಗೆದುಕೊಂಡಿರುತ್ತಾರೆ, ಹಾಗೂ ಕೃಷಿ ಪತ್ತಿನ ಸಹಕಾರ ಸಂಘ ನಾಗನೂರು ಶಾಖೆಯಲ್ಲಿ ಜಮೀನಿನ ಮೇಲೆ 02 ಲಕ್ಷ ಬೆಳೆ ಸಾಲ ತೆಗೆದು ಜಮೀನಿಗೆ ಕೃಷಿಗೆ ಉಪಯೋಗಿಸಿಕೊಂಡು ಇದ್ದರು. ಪ್ರತಿಬಾರಿ ಇಳುವರಿ ಬಂದAತೆ ಈ ಬಾರಿ ಭತ್ತದಲ್ಲಿ ಇಳುವರಿ ಬಾರದ ಕಾರಣ ಬಂದ ಹಣದಲ್ಲಿ ಸಾಲದ ಹಣ ಹಾಗೂ ಟ್ರಾಕ್ಟರ್ ಸಾಲ ತೀರಿಸಲು ಕಷ್ಟವಾಗಿದ್ದರಿಂದ ಮನೆಯಲ್ಲಿ ನಮ್ಮ ಬಳಿ ಬೇಸರ ಮಾಡಿಕೊಂಡಿದ್ದರು, ನಾವು ಮತ್ತು ನನ್ನ ಗಂಡನ ಅಕ್ಕತಂಗಿಯರು ಸಾಲ ತೀರಿಸೋಣ ಬೇಸರ ಮಾಡಿಕೊಳ್ಳಬೇಡ ಅಂತ ಧೈರ್ಯ ಹೇಳುತ್ತಿದ್ದೆವು, ನನ್ನ ಗಂಡ ಬೇಸರ ಮಾಡಿಕೊಂಡಿದ್ದರಿAದ ದೇವಸ್ಥಾನಕ್ಕೆ ಹೋಗಿಬರೋಣ ಅಂತ ನಾನು ಮತ್ತು ನನ್ನ ಗಂಡ ಶಿವನಗೌಡರವರು ಸೇರಿ ಉಕ್ಕಡಗಾತ್ರಿ ಗ್ರಾಮ ಶ್ರೀ ಕರಿಬಸವೇಶ್ವ ದೇವಸ್ಥಾನಕ್ಕೆ ಹೋಗಿ ನಂತರ ದಿನಾಂಕ 02/03/2026 ರಂದು ಬೆಳಗ್ಗೆ 10-00 ಗಂಟೆಗೆ ಬಡಾ ಬಸಾಪುರ ಗ್ರಾಮದಲ್ಲಿ ವಾಸವಾಗಿರುವ ನನ್ನ ಗಂಡ ಅಕ್ಕ ಶಾಂತಮ್ಮರವರು ಮನೆಗೆ ಹೋಗಿ ಅಲ್ಲಿಯೇ ಇದ್ದೆವು ದಿನಾಂಕ 02/03/2026 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾವೆಲ್ಲೂರು ಮನೆಯಲ್ಲಿ ಊಟ ಮಾಡಿ ಮಲಗಿದೆವು ನಂತರ ರಾತ್ರಿ 11-30 ಗಂಟೆಗೆ ನಾನು ಮತ್ತು ನನ್ನ ಮಗು ಎದ್ದು ನೋಡಿದಾಗ ನನ್ನ ಗಂಡ ಶಿವನಗೌಡ ರವರು ಮನೆಯಲ್ಲಿ ಇರಲಿಲ್ಲ ನಾನು ಮತ್ತು ನನ್ನ ಗಂಡನ ಅಕ್ಕ ಹಾಗೂ ಅವರ ಮನೆಯವರು ಎಲ್ಲಾರೂ ಸೇರಿ ಹುಡುಕಾಡಿದರೂ ನನ್ನ ಗಂಡ ಸಿಗಲಿಲ್ಲ, ದಿನಾಂಕ 03/03/2026 ರಂದು ಬೆಳಗ್ಗೆ 10-30 ಗಂಟೆಗೆ ನಮ್ಮ ಸಂಭAದಿಕರಾದ ಬಸವನಗೌಡರವರು ನನಗೆ ಪೋನ್ ಮಾಡಿ ನಿಮ್ಮ ಗಂಡ ಶಿವನಗೌಡರವರು ಪಾಳ್ಯದ ತೋಟದಲ್ಲಿ ಟಿ,ಸಿ, ಕರೆಂಟ್ ಕಂಬದ ಕರೆಂಟ್ ಶಾಕಿನಿಂದ ಮೃತಪಪಟ್ಟಿರುತ್ತಾನೆ ಮೃತ ದೇಹ ಟಿ, ಸಿ ಕಂಬದಲ್ಲಿ ಇರುತ್ತದೆ ಅಂತ ತಿಳಿಸಿದಾಗ ನಾನು ಮತ್ತು ನನ್ನ ಸಂಭAದಿಕರುಗಳು ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಗಂಡ ಶಿವನಗೌಡರವರು ಟಿ,ಸಿ ಕರೆಂಟ್ ಕಂಬದಲ್ಲಿ ಕರೆಂಟ್ ಶಾಕಿನಿಂದ ಮೃತಪಟ್ಟಿರುವುದಾಗಿ ಕಂಡು ಬಂದಿತು ನನ್ನ ಗಂಡ ಶಿವನಗೌಡರವರು ಕೃಷಿ ಚಟುವಟಿಕೆಗಾಗಿ ನಮ್ಮ ಜಮೀನು ಹಾಗೂ ಬಂಗಾರದ ಆಭರಣ ಗಿರಿವಿ ಇಟ್ಟು ಸಾಲ ಪಡೆದು ಕೃಷಿಚಟುವಟಿಕೆಗೆ ಉಪಯೋಗಿಸಿದ್ದು ಕೃಷಿಚಟುವಟಿಯಲ್ಲಿ ಈ ಬಾರಿ ಭತ್ತದ ಬೆಳೆಯಲ್ಲಿ ಹೆಚ್ಚಾಗಿ ಇಳುವರಿ ಬಾರದ ಕಾರಣದಿಂದ ನನ್ನ ಗಂಡ ಸಾಲ ತೀರಿಸುವುದು ಕಷ್ಟವಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಪಾಳ್ಯದ ದಾಸಜ್ಜರ ಜಮೀನಿಗೆ ಬಂದು ಟಿ,ಸಿ ಕಂಬ ಹತ್ತಿ ಕರೆಂಟ್ ವೈರ್ ಮುಟ್ಟಿದ್ದರಿಂದ ಕರೆಂಟ್ ಶಾಕಿನಿಂದ ನನ್ನ ಗಂಡ ಶಿವನಗೌಡ ಮೃತಪಟ್ಟಿರುತ್ತಾನೆ ವಿನಃ ನನ್ನ ಗಂಡ ಶಿವನಗೌಡರವರ ಸಾವಿನ ಬಗ್ಗೆ ಯಾವುದು ಅನುಮಾನವಿರುವುದಿಲ್ಲ, ಮುಂದಿನ ಕಾನೂನು ಕ್ರಮ ಜರುಗಿಸಿ ಅಂತ ತಮ್ಮಲ್ಲಿ ಕೇಳೀಕೊಳ್ಳುತ್ತೇನೆ. ಅಂತ ನೀಡಿದ ದೂರನ್ನು ಸ್ವೀಕರಿಸಿಕೊಂಡು ಠಾಣೆ ಯು,ಡಿ,ಆರ್ ನಂ:- 11/2026 ಕಲಂ 194 ಬಿ,ಎನ್,ಎಸ್.ಎಸ್ ರೀತ್ಯಾ ಪ್ರಕರಣ ದಾಖಲಿಸಿದೆ.
0 Comments