ಒಂದೆಡೆ ಜೂಜಾಟ ಕುರಿತು ಜಾಗೃತಿ. ಇನ್ನೊಂದೆಡೆ ಜೂಜಾಟಕ್ಕೆ ಅನುಮತಿ.!? ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಬ್ಬಗೆಯ ನೀತಿ.!

ಮಂದಾರ ಜ್ವಾಲೆ : ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಸಂಬಂಧಿಸಿದಂತೆ ಜಿಲ್ಲೆಯ ನಾಗರಿಕರಲ್ಲಿ ಉತ್ತಮ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಜುಜಾಟ ಬೆಟ್ಟಿಂಗ್ ದಾಸರಾಗಿ ಬೀದಿಗೆ ಬರಬೇಡಿ. ಕುಟುಂಬವನ್ನು ಸಾಲದ ಸುಳಿಯಲ್ಲಿ ಸಿಲುಕಿಸಬೇಡಿ, ನಿಮ್ಮನ್ನೇ ನಂಬಿದ ಕುಟುಂಬವನ್ನು ಬೀದಿಗೆ ತಳ್ಳಬೇಡಿ, ಹೀಗೆ ನಾನಾ ರೀತಿಯಲ್ಲಿ ಜಿಲ್ಲೆಯ ನಾಗರಿಕರಲ್ಲಿ ಜೋಜಾಟದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನ ತುಂಬಾ ಅಚ್ಚುಕಟ್ಟಾಗಿ ಮತ್ತು ಜನರಿಗೆ ಅರ್ಥವಾಗುವ ಸರಳ ಬಾಷೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. 
ಆದರೆ ಅದೇ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಜೂಜಾಟಕ್ಕೆ ಅನುಮತಿ ನೀಡುತ್ತಿರುವುದು ಏಕೆ? ಹೀಗೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕು ಬಸವಾಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಸಾಗರಪೇಟೆ ವ್ಯಾಪ್ತಿಯ ಗುಡ್ಡಗಾಡಿನಲ್ಲಿ ಅಕ್ರಮವಾಗಿ ಇಸ್ಪೀಟ್ ಮತ್ತು ಇತರೆ ಜೂಜಾಟಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಅದೇ ರೀತಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲೂ ಸಹ ಇಸ್ಪೀಟ್ ಆಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ಗಳು ಸದ್ದಿಲ್ಲದಂತೆ ನಡೆಯುತ್ತಿದೆ.ಈ ಎಲ್ಲಾ ವಿಚಾರಗಳು ಪೊಲೀಸ್ ಇಲಾಖೆಯ ಗಮನಕ್ಕೆ ಇಲ್ಲವೇ? ಪೋಲಿಸ್ ಇಲಾಖೆಯ ಅನುಮತಿಯೊಂದಿಗೆ ಈ ಆಟಗಳು ನಡೆಯುತ್ತಿದೆಯೇ? ಸ್ಥಳೀಯ ಪೊಲೀಸ್ ಠಾಣೆಯ  ಉಪ ನಿರೀಕ್ಷಕರಿಗೆ ಮಾಹಿತಿ ಇರುವುದಿಲ್ಲವೇ? ಎಸ್ ಬಿ ಪೊಲೀಸ್ ಕಾನ್ಸ್ಟೇಬಲ್ ಇವರಿಗೆ ಮಾಹಿತಿ ಇಲ್ಲವೇ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕಾಡುತ್ತಿದೆ. 
ಸದ್ದಿಲ್ಲದೆ ನಡೆಯುತ್ತಿರುವ ಅಕ್ರಮ ಜೂಜಾಟಗಳಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದ್ದಾವೆ. ತಮ್ಮ ಮಕ್ಕಳ ಮದುವೆ, ಶೈಕ್ಷಣಿಕ, ಹಾಗೂ ಆರೋಗ್ಯದ ಉದ್ದೇಶಕ್ಕಾಗಿ ಇಟ್ಟುಕೊಂಡ ಹಣವನ್ನು ಜೂಜಾಟದಿಂದ  ಕಳೆದುಕೊಂಡ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದ್ದಾವೆ. ಕುಟುಂಬದ ಆಧಾರಸ್ತಂಭವಾಗಿ ಇರಬೇಕಾದ ಸದಸ್ಯರು ಈ ರೀತಿ ಅಕ್ರಮ ಜೂಜಾಟಕ್ಕೆ ಬಲಿಯಾಗಿ ತಮ್ಮ ಮನೆ - ಮಠವನ್ನು ಕಳೆದುಕೊಂಡು ಕುಟುಂಬವನ್ನು ಬೀದಿಗೆ ತಳ್ಳಿರುವ ಅದೆಷ್ಟೋ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಇಂದು ಯುವ ಸಮೂಹ ದಾರಿ ತಪ್ಪುತ್ತಿರುವುದು ಇಂತಹ ಜೂಜಾಟಗಳಿಂದ ಎಂಬ ವರದಿಗಳು ಪೊಲೀಸ್ ಇಲಾಖೆಯ ಕಡತದಲ್ಲಿ ಇರುವುದು ಅವರ ಗಮನದಲ್ಲಿ ಇಲ್ಲವೇ? ಇಂದು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಪರಾಧ ಪ್ರಕರಣಗಳಿಗೆ ಈ ಅಕ್ರಮ ಜೂಜಾಟಗಳೂ ಮೂಲ ಕಾರಣ ಎಂಬುದನ್ನು ವರದಿಗಳು ಹೇಳುತ್ತದೆ ಅಲ್ಲವೇ?

ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಹೊಂದಿರುವ  ದಕ್ಷ - ಪ್ರಾಮಾಣಿಕರು ಎಂಬ ಮಾತನ್ನು ಕೇಳಿದ್ದೇವೆ. ಅವರ ಗಮನಕ್ಕೆ ಬಾರದೆ ಜಿಲ್ಲಾಧ್ಯಂತ ಕೆಲವು ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂಬ ಮಾಹಿತಿಯು ನಮ್ಮ ಮಾಧ್ಯಮಕ್ಕೆ ಲಭ್ಯವಾಗಿರುತ್ತದೆ. ಇನ್ನು ಮುಂದಾದರೂ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳನ್ನು ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಜೂಜಾಟಕ್ಕೆ ಕಡಿವಾಣ ಹಾಕಬಹುದೇ? ಭರವಸೆಯೊಂದಿಗೆ ನೊಂದ ಕುಟುಂಬಗಳು ಕಾಯುತ್ತಿವೆ..
ಅಕ್ರಮಗಳ ಕುರಿತು ಜನರಲ್ಲಿ ಉತ್ತಮ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮಕ್ಕೆ ಕಡಿವಾಣ ಹಾಕುವ ಮೂಲಕ ಹೊಸ ಭಾಷ್ಯ ಬರೆಯಬಹುದೇ?

Post a Comment

0 Comments