ನಾಮದೇವ ಸಿಂಪಿ ಯುವಕರಿಗೆ ಹೊಸ ಸಾರಥ್ಯ..!ಅಧ್ಯಕ್ಷರಾಗಿ ಆದರ್ಶ ಐರಣಿ – ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬೊಂಗಾಳೆ (ಮಂದಾರ) ಅವಿರೋಧ ಆಯ್ಕೆ.

ಹರಿಹರ: ಶ್ರೀ ನಾಮದೇವ ಸಿಂಪಿ ಸಮಾಜದ ಯುವ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ನಗರದ ಶ್ರೀ ನಾಮದೇವ ಸಿಂಪಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ನಾಮದೇವ ಸಿಂಪಿ ಯುವಕ ಮಂಡಳಿ (ರಿ.)ಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆದರ್ಶ ಐರಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬೊಂಗಾಳೆ (ಮಂದಾರ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಮಾಜದ ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಯುವಕ ಮಂಡಳಿಯನ್ನು ಅಧಿಕೃತವಾಗಿ ವಿಸರ್ಜಿಸಿ, ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಮೋಹನ್ ದುರುಗೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರದ ಮೂಲಕ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಉಪಾಧ್ಯಕ್ಷರಾಗಿ ಲಕ್ಷ್ಮಣ್ ಕಲ್ಯಾಣಕರ್, ವಾಸುದೇವ್ ದುರುಗೋಜಿ ಹಾಗೂ ಮಂಜುನಾಥ್ ದುರುಗೋಜಿ, ಸಹ ಕಾರ್ಯದರ್ಶಿಗಳಾಗಿ ಸಚಿನ್ ಪಿಸೆ, ಹರೀಶ್ ಹೊವಳೆ ಮತ್ತು ಅವಿನಾಶ್ ದುರುಗೋಜಿ, ಖಜಾಂಚಿಗಳಾಗಿ ಗಣಪತಿ ಮಹೇಂದ್ರಕರ್, ಉದಯ ಪ್ರಕಾಶ್ ಹಾಗೂ ಪಾಂಡುರಂಗ ಪಾಳಂಕರ್ ಅವರನ್ನು ಆಯ್ಕೆ ಮಾಡಲಾಯಿತು.

ಗೌರವ ಸಲಹೆಗಾರರಾಗಿ ಹರೀಶ್ ಪಿಸೆ ಅವರನ್ನು ನೇಮಕ ಮಾಡಲಾಗಿದ್ದು, ನಿರ್ದೇಶಕರಾಗಿ ವಿನಯ್ ಐರಣಿ, ಶ್ರೀಕಾಂತ್ ಪಿಸೆ, ಪ್ರವೀಣ್ ಪಾಳಂಕರ್, ದೀಪಕ್ ಶಿಗ್ಗಾವ್‌ಕರ್, ಶಂಕರ್ ದುರುಗೋಜಿ, ಗಣೇಶ್ ಬೊಂಗಾಳೆ, ಭಾಸ್ಕರ್ ಬಾಬುಲ, ವಿಠ್ಠಲ್ ಐರಣಿ, ರಾಘವೇಂದ್ರ ಮಹೇಂದ್ರಕರ್, ಕಿರಣ್ ಕುಮಾರ್ ಪಿ.ವೈ. ಪಿಸೆ ಹಾಗೂ ಗಿರೀಶ್ ಅಂಬೇಕರ್ ಅವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ್ ದುರುಗೋಜಿ ಅವರು ಲೆಕ್ಕಪತ್ರಗಳ ಪುಸ್ತಕವನ್ನು ನೂತನ ಅಧ್ಯಕ್ಷ ಆದರ್ಶ ಐರಣಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೊಂಗಾಳೆ (ಮಂದಾರ) ಅವರಿಗೆ ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಅಧಿಕೃತವಾಗಿ ವರ್ಗಾಯಿಸಿದರು.

ಸಭೆಯಲ್ಲಿ ಮಾತನಾಡಿದ ಸಮಾಜದ ಹಿರಿಯರು, ನೂತನ ತಂಡವು ಸಮಾಜದ ಯುವಕರನ್ನು ಸಂಘಟಿಸುವ ಜೊತೆಗೆ ಸಮಾಜಮುಖಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಾಮದೇವ ಸಿಂಪಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

Post a Comment

0 Comments